For Quick Alerts
  ALLOW NOTIFICATIONS  
  For Daily Alerts

  'ರಿಷಬ್ ಶೆಟ್ಟಿ ಕಂಡ್ರೆ ನನಗೆ ಅಸೂಯೆ': ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಹೀಗಂದಿದ್ಯಾಕೆ?

  |

  ರಿಷಬ್ ಶೆಟ್ಟಿ 'ಕಾಂತಾರ' ಥಿಯೇಟರ್‌ನಲ್ಲಿ ಹಲ್‌ಚಲ್ ಎಬ್ಬಿಸಿ, ಈಗ ಓಟಿಟಿಗೆ ಲಗ್ಗೆ ಇಟ್ಟಿದೆ. ಈ ಸಿನಿಮಾ ದಕ್ಷಿಣ ಭಾರತದಿಂದ ಹಿಡಿದು ಉತ್ತರ ಭಾರತದವರೆಗೂ ಅಭೂತ ಯಶಸ್ಸು ಕಂಡಿದೆ. ಸಿನಿಮಾ ಬಿಡುಗಡೆಯಾಗಿ ಹಲವು ದಿನಗಳಾಗಿದ್ದರೂ ಇನ್ನೂ 'ಕಾಂತಾರ' ಬಗ್ಗೆ ಮಾತಾಡೋದು ನಿಂತಿಲ್ಲ.

  ಇತ್ತೀಚೆಗೆ ರಿಷಬ್ ಶೆಟ್ಟಿ ಹಾಗೂ ಹಾಗೂ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಒಂದೇ ವೇದಿಕೆ ಮೇಲೆ ಮುಖಾಮುಖಿಯಾಗಿದ್ದರು. ಈ ವೇಳೆ ರಿಷಬ್ ಶೆಟ್ಟಿ ಎದುರೇ ನವಾಜುದ್ದೀನ್ ಸಿದ್ದಿಕಿ ಕನ್ನಡ ಸಿನಿಮಾ ಹಾಗೂ 'ಕಾಂತಾರ' ಸಿನಿಮಾ ಬಗ್ಗೆ ಮಾತಾಡಿದ್ದಾರೆ.

  ಕಾಂತಾರ 2' ಸೆಟ್ಟೇರುವ ಮುನ್ನ ರಿಷಬ್ ಶೆಟ್ಟಿಯ 'ಕಾಂತಾರ' 10 ದಾಖಲೆಗಳನ್ನ ಒಮ್ಮೆ ನೋಡಿಬಿಡಿ!ಕಾಂತಾರ 2' ಸೆಟ್ಟೇರುವ ಮುನ್ನ ರಿಷಬ್ ಶೆಟ್ಟಿಯ 'ಕಾಂತಾರ' 10 ದಾಖಲೆಗಳನ್ನ ಒಮ್ಮೆ ನೋಡಿಬಿಡಿ!

  ರಿಷಬ್ ಶೆಟ್ಟಿ ಹಾಗೂ ನವಾಜುದ್ದೀನ್ ಸಿದ್ದಿಕಿ ಇಬ್ಬರೂ ಖಾಸಗಿ ವಾಹಿನಿಯ ಅಜೆಂಡಾ ಆಜ್‌ತಕ್22 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ನಿರೂಪಕಿಯೊಂದಿಗೆ ಮಾತಾಡುವಾಗ ರಿಷಬ್ ಕಂಡರೆ ನನಗೆ ಅಸೂಯೆ ಬರುತ್ತೆ ಅಂತ ನವಾಜುದ್ದೀನ್ ಹೇಳಿದ್ದಾರೆ. ಅದ್ಯಾಕೆ ಹೀಗಂದ್ರು ಅನ್ನೋದನ್ನು ತಿಳಿಯಲು ಮುಂದೆ ಓದಿ.

  'ರಿಷಬ್ ನೋಡಿ ದೇಶವೇ ಶಾಕ್ ಆಗಿದೆ'

  'ರಿಷಬ್ ನೋಡಿ ದೇಶವೇ ಶಾಕ್ ಆಗಿದೆ'

  ರಿಷಬ್ ಶೆಟ್ಟಿ ಹಾಗೂ ನವಾಜುದ್ದೀನ್ ಸಿದ್ದಕಿ ಇಬ್ಬರನ್ನೂ ಒಟ್ಟಿಗೆ ಮಾತಿಗಿಳಿದಿದ್ದರು. ಕನ್ನಡ ಸಿನಿಮಾ, ಕಾಂತಾರ, ತಮ್ಮ ಮಣ್ಣಿನ ಸಿನಿಮಾ, ಕಷ್ಟಗಳು, ಬೆಳೆದು ಬಂದ ಹಾದಿ ಹೀಗೆ ಹಲವು ವಿಷಯಗಳ ಬಗ್ಗೆ ರಿಷಬ್ ಹಾಗೂ ನವಾಜುದ್ದೀನ್ ಸಿದ್ದಿಕಿ ಮುಕ್ತವಾಗಿ ಮಾತಾಡಿದ್ದಾರೆ. ಅದರಲ್ಲೂ ರಿಷಬ್ ಶೆಟ್ಟಿ ಡ್ಯಾಶಿಂಗ್ ಎಂಟ್ರಿ ಬಗ್ಗೆ ನವಾಜುದ್ದೀನ್ ಸಿದ್ದಿಕಿ ಹೇಳಿದ್ದು ಹೀಗೆ. "ರಿಷಬ್ ಟ್ಯಾಲೆಂಟ್‌ ನೋಡಿ ಇಡೀ ದೇಶವೇ ಶಾಕ್ ಆಗಿದೆ. ಇವರು ನಾವು ಪ್ರಮೋಷನ್ ಅದು ಇದು ಅಂತ ಏನು ಮಾಡುತ್ತೇವೆ ಅದೇನನ್ನೂ ಮಾಡಿಲ್ಲ. ಸೈಲೆಂಟ್ ಬಂದು ಎಲ್ಲವನ್ನೂ ಮುರಿದು ಹಾಕಿ ಹೋದ್ರು."

  'ಬಾಂಡ್ ರವಿ' ಹೀರೊ ರಿಷಬ್ ಶೆಟ್ಟಿಯ ಫೇವರಿಟ್: ಪ್ರಮೋದ್‌ಗೆ 'ಕಾಂತಾರ' ಹೀರೊ ಹೇಳಿದ್ದೇನು?'ಬಾಂಡ್ ರವಿ' ಹೀರೊ ರಿಷಬ್ ಶೆಟ್ಟಿಯ ಫೇವರಿಟ್: ಪ್ರಮೋದ್‌ಗೆ 'ಕಾಂತಾರ' ಹೀರೊ ಹೇಳಿದ್ದೇನು?

  'ರಿಷಬ್ ಕಂಡರೆ ನನಗೆ ಅಸೂಯೆ'

  'ರಿಷಬ್ ಕಂಡರೆ ನನಗೆ ಅಸೂಯೆ'

  ಇದೇ ವೇಳೆ ರಿಷಬ್ ಶೆಟ್ಟಿ ಕಂಡರೆ ನನಗೆ ಅಸೂಯೆ ಬರುತ್ತೆ ಅಂತನೂ ನವಾಜುದ್ದೀನ್ ಸಿದ್ದಿಕಿ ಹೇಳಿದ್ದಾರೆ. "ಯಾರಾದರೂ ಒಳ್ಳೆ ಕೆಲಸ ಮಾಡಿದರೆ ಅಸೂಯೆ ಬರುತ್ತೆ. ಇಷ್ಟು ಒಳ್ಳೆಯ ಕೆಲಸ ಮಾಡಿದರೆ ಅಸೂಯೆ ಬರುತ್ತೆ. ಅಸೂಯೆ ಅಂದ್ರೆ ಆತರ ಅಲ್ಲ. ಒಳ್ಳೆ ಕೆಲಸ ನೋಡಿದ ಕೂಡ ಕೈ ರೋಮಗಳು ಎದ್ದು ನಿಲ್ಲುತ್ತವೆ. ಯಾರೋ ಇದ್ದಾರೆ. ಅವರೊಂದಿಗೆ ಸೆಣೆಸಾಡಲು ನಾನೂ ಕಷ್ಟ ಪಡಬೇಕು ಅಂತ ಅನಿಸುತ್ತೆ. ಅಂತಹ ಅಸೂಯೆ ಇದು." ಎಂದಿದ್ದಾರೆ ನವಾಜುದ್ದೀನ್ ಸಿದ್ದಿಕಿ.

  ನವಾಜುದ್ದೀನ್ ನಾನು ಮಧ್ಯಮ ವರ್ಗದವರು

  ನವಾಜುದ್ದೀನ್ ನಾನು ಮಧ್ಯಮ ವರ್ಗದವರು

  ನವಾಜುದ್ದೀನ್ ಸಿದ್ದಿಕಿ ಅಭಿನಯದ ಬಗ್ಗೆ, ಜರ್ನಿ ಬಗ್ಗೆನೂ ರಿಷಬ್ ಶೆಟ್ಟಿ ಮಾತಾಡಿದ್ದಾರೆ. "ನವಾಜುದ್ದೀನ್ ಅವರ ಬಾಯಿ ಇಂತಹ ಮಾತುಗಳನ್ನು ಕೇಳುವುದಕ್ಕೆ ಖುಷಿಯಾಗುತ್ತೆ. ಅವರ ದೊಡ್ಡ ಫ್ಯಾನ್ ನಾನು. ಗ್ಯಾಂಗ್ಸ್ ಆಫ್ ವಾಸೆಪುರ್ ಎದೆಷ್ಟು ಬಾರಿ ನೋಡಿದ್ದೇನೋ ಗೊತ್ತಿಲ್ಲ. ತುಂಬಾ ವರ್ಷ ಎಫರ್ಟ್ ಹಾಕಿ, ತುಂಬಾ ವರ್ಷ ಕಷ್ಟ ಪಟ್ಟು ಭಾರತೀಯ ಚಿತ್ರರಂಗದಲ್ಲಿ ಅವರಿಗೊಂದು ಸ್ಥಾನ ಸಿಕ್ಕಿದೆ. ಅದು ನಮ್ಮಂತಹ ಮಧ್ಯಮ ವರ್ಗದ ಜನರು ಚಿತ್ರರಂಗಕ್ಕೆ ಬಂದು ಏನೋ ಮಾಡಬೇಕು ಅಂದುಕೊಳ್ಳುತ್ತೇವಲ್ಲ ಅದಕ್ಕೆ ಪ್ರೇರಣೆ. ಅವರೂ ಚಿಕ್ಕಪುಟ್ಟ ಪಾತ್ರಗಳನ್ನು ಮಾಡಿಕೊಂಡು ಬಂದು ಈ ಮಟ್ಟಿಗೆ ಬಂದಿದ್ದಾರೆ. ನಾನೂ ಕನ್ನಡ ಸಿನಿಮಾದಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ಮಾಡಿಕೊಂಡು ಈಗ ಒಂದು ಅವಕಾಶ ಸಿಕ್ಕಿದೆ. ನಮ್ಮ ಅವರ ನಡೆ ಒಂದೆ. ಅವರು ನಮ್ಮ ಸೀನಿಯರ್."

  ಕನ್ನಡದಲ್ಲಿ ನಟಿಸುತ್ತಾರಂತೆ ನಾವಾಜುದ್ದೀನ್

  ಕನ್ನಡದಲ್ಲಿ ನಟಿಸುತ್ತಾರಂತೆ ನಾವಾಜುದ್ದೀನ್

  ಇದೇ ವೇಳೆ ಬಾಲಿವುಡ್‌ ನಟ ನವಾಜುದ್ದೀನ್ ಸಿದ್ದಿಕಿ ಕನ್ನಡ ಸಿನಿಮಾಗಳಲ್ಲಿ ನಟಿಸುವುದಾಗಿ ಹೇಳಿದ್ದಾರೆ. ಅಲ್ಲದೆ ದಕ್ಷಿಣ ಭಾರತದ ಸಿನಿಮಾಗಳು ಸಕ್ಸಸ್ ಕಾಣುತ್ತಿರುವುದಕ್ಕೆ ಕಾರಣವೇನು ಅನ್ನೋದನ್ನೂ ತಿಳಿಸಿದ್ದಾರೆ. "ಅವರ ಕೆಲಸದಲ್ಲಿ ಒಂದು ಪ್ರಾಮಾಣಿಕತೆ ಇರುತ್ತೆ. ಅವರ ನೆಲದ ವಿಷಯಗಳನ್ನು ತೆರೆಮೇಲೆ ತರುತ್ತಾರೆ. ಅವರ ಸ್ವಂತ ಕಥೆಯನ್ನು ತೆಗೆದುಕೊಂಡು ಬರುತ್ತಾರೆ. ಈಗಷ್ಟೇ ಅವರು ಕನ್ನಡ ಸಿನಿಮಾ ಮಾಡುತ್ತೇನೆ ಎಂದು ಹೇಳಿದರು. ಅವರಿಗೆ ಕನ್ನಡ ಸಿನಿಮಾ ಮಾಡುತ್ತಿರುವುದಕ್ಕೆ ಹೆಮ್ಮೆಯಿದೆ. ನಮಗೆ ಹೇಗೆ ಭಾರತೀಯ ಅಂತ ಹೇಳಿಕೊಳ್ಳುವುದಕ್ಕೆ ಹೆಮ್ಮೆ ಅನಿಸುತ್ತೋ ಹಾಗೇ ನಮ್ಮತನವನ್ನು ತೋರಿಸುವುದಕ್ಕೂ ಹೆಮ್ಮೆ ಅನಿಸಬೇಕು." ಎಂದು ನವಾಜುದ್ದೀನ್ ಹೇಳಿದ್ದಾರೆ.

  English summary
  Nawazuddin Siddiqui Say He Is Jealous About Kantara Star Rishab Shetty,Know More.
  Monday, December 12, 2022, 11:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X