For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಜೊತೆ ಸಂಪರ್ಕ ಹೊಂದಿದ್ದ ಡ್ರಗ್ ಪೆಡ್ಲರ್ ಗಳ ಬಂಧನ

  |

  ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆ ವೇಳೆ ಚಿತ್ರರಂಗದ ಡ್ರಗ್ ಮಾಫಿಯಾದ ಬಗ್ಗೆ ಬಹಿರಂಗವಾಗಿದೆ. ರಿಯಾ ಚಕ್ರವರ್ತಿ ಮೊಬೈಲ್ ಚಾಟ್ ಆಧರಿಸಿ ತನಿಖೆ ನಡೆಸುತ್ತಿದ್ದ ಮಾದಕ ವಸ್ತು ನಿಯಂತ್ರಣ ಇಲಾಖೆ (NCB) ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ. ಬಂಧಿತರು ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೋವಿಕ್ ಚಕ್ರವರ್ತಿ ಹಾಗೂ ಬಾಲಿವುಡ್ ನ ಅನೇಕರ ಜೊತೆ ಸಂಪರ್ಕದಲ್ಲಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು NCB ಮೂಲಗಳು ತಿಳಿಸಿವೆ.

  Sandalwood Narcotics Mafia ಬಗ್ಗೆ ಹಿರಿಯ ನಟ ದೊಡ್ಡಣ್ಣ ಬೇಸರ ವ್ಯಕ್ತಪಡಿಸಿದರು | Filmibeat Kannada

  ಬಂಧಿತರಾದ ಜೈದ್ ವಿಲಾತ್ರ ಶೋವಿಕ್ ಚಕ್ರವರ್ತಿ ಮತ್ತು ಸುಶಾಂತ್ ಸಿಂಗ್ ವ್ಯವಸ್ಥಾಪಕ ಸ್ಯಾಮ್ಯುಯೆಲ್ ಮಿರಾಂಡಾಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಕಳೆದ ವಾರ ಅಬ್ಬಾಸ್ ಲಖಾನಿ ಎನ್ನುವವನನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಆತನ ಮಾಹಿತಿ ಆಧರಿಸಿ ಜೈದ್ ನನ್ನು NCB ಬಂಧಿಸಿದೆ. ಸದ್ಯ ಜೈದ್ ನನ್ನು ವಿಚಾರಣೆಗೆ ಒಳಪಡಿಸಿದ್ದು ಮತ್ತಷ್ಟು ಪೆಡ್ಲರ್ ಗಳು ಬಲೆಗೆ ಬೀಳುವ ಸಾಧ್ಯತೆ ಇದೆ.

  ಸುಶಾಂತ್ ಸಿಂಗ್ ಕುಟುಂಬದ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ರಿಯಾ ಚಕ್ರವರ್ತಿಸುಶಾಂತ್ ಸಿಂಗ್ ಕುಟುಂಬದ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ರಿಯಾ ಚಕ್ರವರ್ತಿ

  ಮಾದಕ ವಸ್ತು ಮಾರಾಟದಲ್ಲಿ ತೊಡಗಿಕೊಂಡಿರುವ ಅನೇಕರ ಜೊತೆ ರಿಯಾ ಚಕ್ರವರ್ತಿ ಚಾಟ್ ಮಾಡಿದ್ದರು. ಇಡಿ ಅಧಿಕಾರಿಗಳ ತನಿಖೆಯಲ್ಲಿ ರಿಯಾ ಚಕ್ರವರ್ತಿಗೆ ಡ್ರಗ್ಸ್ ಮಾಫಿಯಾದ ಜೊತೆ ಸಂಪರ್ಕವಿರುವುದು ಬಹಿರಂಗವಾಗಿತ್ತು. ತನಿಖೆ ನಡೆಸುತ್ತಿದ್ದ NCB ಅಧಿಕಾರಿಗಳು ರಿಯಾ ಚಕ್ರವರ್ತಿ ಜೊತೆ ಚಾಟ್ ಮಾಡಿದವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

  ಇದೀಗ ಕೆಲವು ಪೆಡ್ಲರ್ ಗಳು NCB ಬಲೆಗೆ ಬಿದ್ದಿದ್ದಾರೆ. ಈಗಾಗಲೇ NCB ಅಧಿಕಾರಿಗಳು ರಿಯಾ ಚಕ್ರವರ್ತಿ, ಶೋವಿಕ್, ಜಯ ಸಹಾ ಮತ್ತು ಗೋವಾದ ಹೋಟೆಲ್ ಉದ್ಯಮಿ ಗೌರವ ಆರ್ಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ.

  ಸಿಬಿಐ ಅಧಿಕಾರಿಗಳು ವಿಚಾರಣೆ ಮುಂದುವೆರಸಿದ್ದು, ಕಳೆದ ಕೆಲವು ದಿನಗಳಿಂದ ರಿಯಾ ಚಕ್ರವರ್ತಿ, ಆಕೆಯ ಸಹೋದರ, ಸುಶಾಂತ್ ವ್ಯವಸ್ಥಾಪಕ ಸ್ಯಾಮ್ಯುಯೆಲ್ ಮಿರಾಂಡಾ, ಫ್ಲಾಟ್ ಮೇಟ್ ಸಿದ್ಧಾರ್ಥ್ ಸೇರಿದ್ದಂತೆ ಅನೇಕರನ್ನು ವಿಚಾರಣೆ ಮಾಡುತ್ತಿದೆ.

  English summary
  Narcotics Control Bureau Arrests drug peddlers who contacted with Rhea Chakraborty and Showik Chakraborty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X