For Quick Alerts
  ALLOW NOTIFICATIONS  
  For Daily Alerts

  ರಿಯಾ ಜಾಮೀನು ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋದ ಎನ್‌ಸಿಬಿ

  |

  ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಬಂಧನವಾಗಿದ್ದ ನಟಿ ರಿಯಾ ಚಕ್ರವರ್ತಿಗೆ ಬಾಂಬೆ ಹೈ ಕೋರ್ಟ್ ಜಾಮೀನು ನೀಡಿತ್ತು. ಬಾಂಬೆ ಹೈ ಕೋರ್ಟ್ ನೀಡಿದ್ದ ಜಾಮೀನು ಆದೇಶ ಪ್ರಶ್ನಿಸಿ ಎನ್‌ಸಿಬಿ ಸುಪ್ರೀಂಕೋರ್ಟ್ ಮೊರೆ ಹೋಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

  ಎನ್‌ಸಿಬಿ ಪ್ರಶ್ನಿಸಿರುವ ಅರ್ಜಿ ಸ್ವೀಕರಿಸಿರುವ ಸುಪ್ರೀಂಕೋರ್ಟ್ ಮಾರ್ಚ್ 18 ರಂದು ವಿಚಾರಣೆ ಮಾಡಲಿದೆ.

  ''ತಿರುಚಿ ಬರೆದ ಚಿತ್ರಕಥೆಯಲ್ಲಿ ರಿಯಾ ಚಕ್ರವರ್ತಿ ಬಲಿಪಶು ಆದಳಷ್ಟೇ''

  ರಿಯಾ ಚಕ್ರವರ್ತಿ ಅವರಿಗೆ ಅಕ್ಟೋಬರ್ 7, 2020 ರಂದು ಬಾಂಬೆ ಹೈ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಒಂದು ಲಕ್ಷ ರೂ ಬಾಂಡ್ ಹಾಗೂ ದೇಶ ಬಿಟ್ಟು ಹೋಗದಂತೆ ನ್ಯಾಯಾಲಯ ಸೂಚಿಸಿತ್ತು.

  ಈ ತಿಂಗಳ ಆರಂಭದಲ್ಲಿ ಎನ್‌ಸಿಬಿ ಅಧಿಕಾರಿಗಳು 33 ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. ನಟಿ ರಿಯಾ ಚಕ್ರವರ್ತಿ ಸೇರಿದಂತೆ ಹಲವರನ್ನು ಆರೋಪಿಗಳನ್ನಾಗಿಸಿ ಸುಮಾರು 30 ಸಾವಿರ ಪುಟಗಳ ವರದಿಯನ್ನು ಮುಂಬೈ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಕೆ ಮಾಡಿತ್ತು.

  ರಿಯಾ ಚಕ್ರವರ್ತಿ ಅವರು ಡ್ರಗ್ ಪೆಡ್ಲರ್‌ಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎಂಬ ಗಂಭೀರ ಆರೋಪವನ್ನು ಎನ್‌ಸಿಬಿ ಮಾಡಿದೆ.

  ನಟಿ ರಿಯಾ ಚಕ್ರವರ್ತಿಗೆ ಜಾಮೀನು ನೀಡಿದ ಬಾಂಬೆ ಹೈ ಕೋರ್ಟ್

  Kichcha Sudeep's 25Y Celebration : ಬೆಳ್ಳಿಹಬ್ಬದ ಸಂಭ್ರಮದಲ್ಲಿ ಶಿವಣ್ಣ,ರವಿಚಂದ್ರನ್ ಬಗ್ಗೆ ಕಿಚ್ಚ ಹೇಳಿದ್ದೇನು

  ಅಂದ್ಹಾಗೆ, ಸೆಪ್ಟೆಂಬರ್ 8 ರಂದು ರಿಯಾ ಚಕ್ರವರ್ತಿ ಬಂಧನವಾಗಿತ್ತು. ಸುಮಾರು ಒಂದು ತಿಂಗಳಕಾಲ ಬೈಕುಲ್ಲಾ ಜೈಲಿನಲ್ಲಿ ಉಳಿದಿದ್ದರು. ತಿಂಗಳ ನಂತರ ಬಾಂಬೆ ಹೈ ಕೋರ್ಟ್ ಜಾಮೀನು ನೀಡಿತ್ತು. ಜೂನ್ 14 ರಂದು ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದ ತನಿಖೆ ವೇಳೆ ಡ್ರಗ್ ಸಂಬಂಧ ರಿಯಾ ಚಕ್ರವರ್ತಿ ಅವರನ್ನು ಅರೆಸ್ಟ್ ಮಾಡಲಾಗಿತ್ತು.

  English summary
  NCB Moves Supreme Court Challenging Bombay High Court Order Granting Bail to Rhea Chakraborty in the Narcotic Case in connection with Sushanth Singh Rajput's Death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X