ಡ್ರಗ್ಸ್ ಪ್ರಕರಣ: ವಿಧಿವಿಜ್ಞಾನ ಲ್ಯಾಬ್‌ಗೆ ದೀಪಿಕಾ, ಶ್ರದ್ಧಾ, ಅರ್ಜುನ್ ಮೊಬೈಲ್

ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಸಂಭವಿಸಿದ ನಂತರ ಹಿಂದಿ ಚಿತ್ರರಂಗದಲ್ಲಿ ಅನೇಕ ಬೆಳವಣಿಗೆಗಳು ನಡೆದಿದೆ. ಅದರಲ್ಲಿ ಡ್ರಗ್ಸ್ ಪ್ರಕರಣ ಹಲವು ಸೆಲೆಬ್ರಿಟಿಗಳಿಗೆ ಕಂಟಕ ತಂದಿಟ್ಟಿತ್ತು.

ಡ್ರಗ್ಸ್ ಆಯಾಮದಲ್ಲಿ ಎನ್‌ಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್, ಅರ್ಜುನ್ ರಾಂಪಾಲ್ ಸೇರಿದಂತೆ ಅನೇಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ.

ವಿಚಾರಣೆ ವೇಳೆ ಸೆಲೆಬ್ರಿಟಿಗಳ ಮೊಬೈಲ್‌ನ ವಶಕ್ಕೆ ಪಡೆದುಕೊಂಡಿರುವ ಎನ್‌ಸಿಬಿ ಅಧಿಕಾರಗಳು, ಈಗ ಆ ಮೊಬೈಲ್‌ನ್ನು ಗುಜರಾತ್‌ ವಿಧಿವಿಜ್ಞಾನ ಲ್ಯಾಬ್‌ಗೆ ಕಳುಹಿಸಿಕೊಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಫೋನ್ ಜೊತೆಗೆ ಲ್ಯಾಪ್‌ಟ್ಯಾಪ್, ಪೆನ್‌ಡ್ರೈವ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳುಹಿಸಲಾಗಿದೆ.

NCB Sends Deepika Padukone and Shraddha Kapoor mobiles to Gujarat Forensic Experts

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಕೇಸ್‌ಗೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ ಮತ್ತು ಸಹೋದರ ಶೌವಿಕ್ ಚಕ್ರವರ್ತಿ ಅವರನ್ನು ಬಂಧಿಸಲಾಗಿತ್ತು. ನಂತರ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದರು.

ಇನ್ನುಳಿದಂತೆ ಸುಶಾಂತ್ ಸಿಂಗ್ ಸಾವಿನ ತನಿಖೆಯನ್ನು ಸಿಬಿಐ ಮಾಡುತ್ತಿದೆ. ಇದು ಆತ್ಮಹತ್ಯೆನಾ ಅಥವಾ ಕೊಲೆನಾ ಎನ್ನುವ ಅಂತಿಮ ವರದಿ ಬಂದಿಲ್ಲ.

More from Filmibeat

English summary
NCB Sends Deepika Padukone, Shraddha Kapoor and arjun rampal mobiles to Gujarat Forensic Experts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X