For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ಪಡುಕೋಣೆಯ ಪಾರ್ಟಿ ವಿಡಿಯೋ ಪರಿಶೀಲಿಸುತ್ತಿರುವ NCB: ಆ ವಿಡಿಯೋದಲ್ಲಿ ಏನಿದೆ?

  |

  ಮಾದಕ ವಸ್ತು ಮಾಫಿಯಾದ ಜಾಲ ಇಡೀ ಬಾಲಿವುಡ್ ಅನ್ನೇ ಬೆಚ್ಚಿ ಬೀಳಿಸಿದೆ. ಜಾಲದ ಬೆನ್ನಟ್ಟಿರುವ NCB ಪೊಲೀಸರು ಮಹತ್ವದ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ. ಈಗಾಗಲೇ ದೊಡ್ಡ ಕಲಾವಿದರ ಹೆಸರುಗಳು ಕೇಳಿಬರುತ್ತಿದ್ದು ಆತಂಕಕ್ಕೆ ಒಳಗಾಗಿದ್ದಾರೆ. ಡ್ರಗ್ಸ್ ಮಾಫಿಯಾದಲ್ಲಿ ನಟಿ ದೀಪಿಕಾ ಪಡುಕೋಣೆ ಹೆಸರು ಕೇಳಿ ಬರುತ್ತಿದ್ದು, ಡ್ರಗ್ಸ್ ಗೆ ಬೇಡಿಕೆ ಇಟ್ಟಿದ್ದ ವಾಟ್ಸಪ್ ಚಾಟ್ ಬಹಿರಂಗವಾದ ಮೇಲೆ ದೀಪಿಕಾ ಮೇಲಿನ ಅನುಮಾನ ಬಲವಾಗಿದೆ.

  ಗಾಂಜಾ ಕೇಳಿ ತಗಲಕೊಂಡ Deepika Padukone..!? | Filmibeat Kannada

  ಇದೀಗ ದೀಪಿಕಾ ಕೆಲವು ವರ್ಷಗಳ ಹಿಂದೆ ಪಾರ್ಟಿಯಲ್ಲಿ ಭಾಗಿಯಾಗಿದ್ದ ವಿಡಿಯೋವನ್ನು ಅಧಿಕಾರಿಗಳು ಪರಿಶೀಲನೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ವಾಟ್ಸಪ್ ಸಂದೇಶ ಕಲೆಹಾಕಿರುವ ಪೊಲೀಸರು ದೀಪಿಕಾ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಈಗಾಗಲೇ ದೀಪಿಕಾರ ವ್ಯವಸ್ಥಾಪಕಿ ಕರೀಷ್ಮಾ ಪ್ರಕಾಶ್ ಗೆ ಎನ್ ಸಿ ಬಿ ನೋಟಿಸ್ ನೀಡಿದ್ದು ವಿಚಾರಣೆಗೆ ಹಾಜರಾಗಲಿದ್ದಾರೆ. ಮುಂದೆ ಓದಿ...

  ಡ್ರಗ್ಸ್ ಪ್ರಕರಣದಲ್ಲಿ ದೀಪಿಕಾ ಪಡುಕೋಣೆ ಹೆಸರು ಬರಲು ಕಾರಣವೇನು?

  ದೀಪಿಕಾ ಪಾರ್ಟಿ ಮಾಡಿದ ವಿಡಿಯೋ ಪರಿಶೀಲನೆ

  ದೀಪಿಕಾ ಪಾರ್ಟಿ ಮಾಡಿದ ವಿಡಿಯೋ ಪರಿಶೀಲನೆ

  ಮುಂಬೈನ ಕಮಲಾ ಮಿಲ್ಸ್ ಬಳಿ ಇರುವ ರೆಸ್ಟೊರೆಂಟ್ ನಲ್ಲಿ ಡ್ರಗ್ಸ್ ವ್ಯವಹಾರ ನಡೆದಿತ್ತು ಎನ್ನಲಾಗುತ್ತಿದೆ. ಅಲ್ಲೇ ದೀಪಿಕಾ ಪಡುಕೋಣೆ ಪಾರ್ಟಿ ಮಾಡಿದ್ದರು ಎನ್ನುವ ಮಾಹಿತಿ ಕೇಳಿಬರುತ್ತಿದೆ. ಆ ಪಾರ್ಟಿಯ ಸಿಸಿಟಿವಿ ದೃಶ್ಯಗಳನ್ನು ಎನ್ ಸಿ ಬಿ ಪೊಲೀಸರು ಪರಿಶೀಲನೆ ಮಾಡಲಿದ್ದಾರೆ.

  ದೀಪಿಕಾ ಡ್ರಗ್ಸ್ ಚಾಟ್

  ದೀಪಿಕಾ ಡ್ರಗ್ಸ್ ಚಾಟ್

  ದೀಪಿಕಾ ಟ್ಯಾಲೆಂಟ್ ಮ್ಯಾನೇಜರ್ ಕರೀಷ್ಮಾ ಬಳಿ, 'ನಿನ್ನ ಬಳಿ ಮಾಲ್ ಇದೆಯಾ?' ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಕರಿಷ್ಮಾ, 'ಇದೆ ಆದರೆ ಮನೆಯಲ್ಲಿದೆ, ನಾನು ಬಾಂದ್ರಾದಲ್ಲಿ ಇದ್ದೀನಿ'. 'ನಿಮಗೆ ಬೇಕಾದರೆ ಅಮಿತ್ ಬಳಿ ಕೇಳುತ್ತೇನೆ.' ಎಂದಿದ್ದಾರೆ. ಇದಕ್ಕೆ 'ದೀಪಿಕಾ ಸರಿ ದಯವಿಟ್ಟು ಕೇಳಿ' ಎಂದು ಪ್ರತಿಕ್ರಿಯೆ ನೀಡಿದ್ದಾರೆ. 'ಅಮಿತ್ ಬಳಿ ಇದೆ' ಎಂದು ಕರೀಷ್ಮಾ ಹೇಳಿದ್ದಾರೆ. ದೀಪಿಕಾ, 'ಹ್ಯಾಷ್ ಹಾ?' ಎಂದು ಕೇಳಿದ್ದಾರೆ. 'ಇಲ್ಲ ವೀಡ್ ಇದೆ' ಎಂದು ಕರೀಷ್ಮಾ ಪ್ರತಿಕ್ರಿಯಿಸಿದ್ದಾರೆ. ಈ ಚಾಟ್ ಈಗ ವೈರಲ್ ಆಗಿದೆ.

  ಹೈ ಸೊಸೈಟಿಯ ಮಕ್ಕಳು 'ಮಾಲ್' ಕೇಳುತ್ತಾರೆ: ದೀಪಿಕಾ ಕಾಲೆಳೆದ ಕಂಗನಾ

  ದೀಪಿಕಾ ವ್ಯವಸ್ಥಾಪಕಿಗೆ ನೋಟಿಸ್

  ದೀಪಿಕಾ ವ್ಯವಸ್ಥಾಪಕಿಗೆ ನೋಟಿಸ್

  ದೀಪಿಕಾ ವಾಟ್ಸಪ್ ಚಾಟ್ ಆಧಾರದ ಮೇಲೆ ಎನ್ ಸಿ ಬಿ ನೋಟಿಸ್ ನೀಡುವ ಸಾಧ್ಯತೆ ಇದೆ. ದೀಪಿಕಾ ಜೊತೆ ಚಾಟ್ ಮಾಡಿರುವ ಕರೀಷ್ಮಾ ಪ್ರಕಾಶ್ ಗೆ ನೋಟಿಸ್ ನೀಡಲಾಗಿದೆ. ಕರೀಷ್ಮಾ ಮಾತ್ರವಲ್ಲದೇ ಕ್ವಾನ್ ಟ್ಯಾಲೆಂಟ್ ಏಜೆನ್ಸಿಯ ಸಿಇಒ ಧ್ರುವ ಚಿಟ್ಗೋಪ್ಕೇರ್ ಗೂ ಎನ್‌ಸಿಬಿ ಸಮನ್ಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಹೇಳಿದೆ.

  ಗೋವಾದಲ್ಲಿ ನಟಿ ದೀಪಿಕಾ

  ಗೋವಾದಲ್ಲಿ ನಟಿ ದೀಪಿಕಾ

  ದೀಪಿಕಾ ಪಡುಕೋಣೆ ಸದ್ಯ ಚಿತ್ರೀಕರಣ ಸಲುವಾಗಿ ಗೋವಾದಲ್ಲಿ ಬೀಡುಬಿಟ್ಟಿದ್ದಾರೆ. ಮೂಲಗಳ ಪ್ರಕಾರ ದೀಪಿಕಾ ಈಗಾಗಲೇ ದೆಹಲಿಯಲ್ಲಿರುವ ಕಾನೂನು ತಂಡದದೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ವಿಚಾರಣೆಗೆ ಹಾಜರಾಗುವಂತೆ ದೀಪಿಕಾಗೆ ನೋಟಿಸ್ ನೀಡುವ ಸಾಧ್ಯತೆ ಇದ್ದು, ಶೀಘ್ರದಲ್ಲಿಯೇ ದೀಪಿಕಾ ಮುಂಬೈಗೆ ವಾಪಸ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

  English summary
  NCB To Examine The Footage Of Deepika Padukone's October 2017 Party at Posh Club.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X