Don't Miss!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಾಲಿವುಡ್ ಬಳಿ ಸ್ವಂತ ಯೋಚನೆ ಇಲ್ಲ, ಕಾಪಿ ಮಾಡುವುದೇ ಕಾಯಕ: ಉಗಿದ ನಟ
ಭಾರತೀಯ ಸಿನಿಮಾ ರಂಗ ಎಂದರೆ ಬಾಲಿವುಡ್ ಎಂಬ ಕಾಲವೊಂದಿತ್ತು, ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಬಾಲಿವುಡ್‌ನ ನಿಜ ಬಣ್ಣ ಬಯಲಾಗಿದೆ. ಬಾಲಿವುಡ್ ಅನ್ನು ಮೀರಿ ನಿಂತಿದೆ ದಕ್ಷಿಣ ಭಾರತದ ಚಿತ್ರರಂಗ.
ಬಾಲಿವುಡ್‌ನ ಪದ್ಧತಿಗಳನ್ನು ಬಾಲಿವುಡ್‌ನ ಮಂದಿಯೇ ಟೀಕಿಸುತ್ತಿದ್ದಾರೆ. ಕಂಗನಾ ರನೌತ್, ಕರಣ್ ಜೋಹರ್ ಅವರುಗಳು ಈಗಾಗಲೇ ಬಾಲಿವುಡ್ ಹಾದಿ ತಪ್ಪಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಇದೀಗ ಬಾಲಿವುಡ್‌ನ ನಟ ನೀಲ್ ನಿತಿನ್ ಮುಖೇಶ್ ಸಹ ಬಾಲಿವುಡ್ ಅನ್ನು ತೀವ್ರವಾಗಿ ಟೀಕಿಸಿದ್ದಾರೆ. ಅದರಲ್ಲೂ ಬಾಲಿವುಡ್‌ನ ಸಿನಿಮಾ ಕರ್ಮಿಗಳನ್ನು ಟೀಕಿಸಿರುವ ನೀಲ್ ನಿತಿನ್, 'ಬಾಲಿವುಡ್ ನಿರ್ದೆಶಕರಲ್ಲಿ ಸ್ವಂತದ ಯೋಚನೆ ಇಲ್ಲ'' ಎಂದಿದ್ದಾರೆ.

ರೀಮೆಕ್ ಮಾಡುವುದರಲ್ಲಿ ನಿರತವಾಗಿದೆ ಬಾಲಿವುಡ್
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನೀಲ್ ನಿತಿನ್ ಮುಖೇಶ್, ''ರಾಜಕೀಯ ಥ್ರಿಲ್ಲರ್‌ಗಳು, ಸೈಕೋ ಥ್ರಿಲ್ಲರ್‌ಗಳು, ಹಾರರ್ ಥ್ರಿಲ್ಲರ್ ಹೀಗೆ ಹಲವು ವಿಧಗಳಿವೆ. ಆದರೆ ಅವುಗಳ್ಯಾವುವನ್ನು ಬಾಲಿವುಡ್‌ನ ಮಂದಿ ಎಕ್ಸ್‌ಪ್ಲೋರ್ ಮಾಡಿಯೇ ಇಲ್ಲ. ಸಾಕಷ್ಟು ಒರಿಜಿನಲ್ ಐಡಿಯಾಗಳಿವೆ ಆದರೆ ಅದೆಲ್ಲವನ್ನೂ ಬಿಟ್ಟು ರೀಮೇಕ್ ಮಾಡಲು ಹೊರಡುತ್ತಾರೆ'' ಎಂದಿದ್ದಾರೆ.

ಎರಡೂ ಬಗೆಯ ಸಿನಿಮಾಗಳಿಗೆ ರೆಡಿ: ನೀಲ್ ನಿತಿನ್
''ಸಾಕಷ್ಟು ಒರಿಜಿನಲ್ ಐಡಿಯಾಗಳು ಇದ್ದರೂ ಸಹ ನಮ್ಮವರು ರೀಮೇಕ್ ಸಿನಿಮಾಗಳನ್ನೇ ನೆಚ್ಚಿಕೊಳ್ಳುತ್ತಿದ್ದಾರೆ. ಅವರಿಗೆ ಹೊಸ ಪ್ರಯೋಗ ಮಾಡುವುದು ಇಷ್ಟವಿಲ್ಲ. ಸೇಫ್ ಆಗಿ ಆಡಲು ಹೋಗಿ ಹಿಂದುಳಿಯುತ್ತಿದ್ದಾರೆ'' ಎಂದು ವಿಮರ್ಶಿಸಿದ ನೀಲ್ ನಿತಿನ್, ತಾವು ನಟಿಸಿರುವ ಸಿನಿಮಾ 'ಜೈಲ್' ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಪ್ರಯೋಗಾತ್ಮಕ ಕಂಟೆಂಟ್‌ಗೆ ಒಡ್ಡಿಕೊಳ್ಳುವುದಕ್ಕೆ ರೆಡಿ ಜೊತೆಗೆ 'ಪ್ರೇಮ್ ರಥನ್ ಧನ್ ಪಾಯೋ' ರೀತಿಯ ಸಿನಿಮಾಗಳಲ್ಲಿ ನಟಿಸಲು ಸಹ ನಾನು ರೆಡಿ'' ಎಂದಿದ್ದಾರೆ.

ನೀಲ್ ನಿತಿನ್‌ಗೆ ಅವಕಾಶಗಳು ಕಡಿಮೆ ಆಗಿದೆ
ಬಾಲ ನಟನಾಗಿ, ಅಸಿಸ್ಟೆಂಡ್ ಡೈರೆಕ್ಟರ್ ಆಗಿ ಸಿನಿಮಾ ಜರ್ನಿ ಪ್ರಾರಂಭಿಸಿದ ನೀಲ್ ನಿತಿನ್, 2007 ರಲ್ಲಿ ನಾಯಕ ನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಹಲವಾರು ಸಿನಿಮಾಗಳಲ್ಲಿ ನಾಯಕ ನಟನಾಗಿ, ಪ್ರಧಾನ ಪೋಷಕ ನಟನಾಗಿ ನಟಿಸಿರುವ ನೀಲ್ ನಿತಿನ್‌ಗೆ ಇತ್ತೀಚಿನ ದಿನಗಳಲ್ಲಿ ಅವಕಾಶಗಳು ತುಸು ಕಡಿಮೆ ಆಗಿದೆ. 2019 ರಲ್ಲಿ ಬಿಡುಗಡೆ ಆಗಿದ್ದ 'ಬೈಪಾಸ್ ರೋಡ್' ಸಿನಿಮಾದ ಬಳಿಕ ನೀಲ್ ನಿತಿನ್‌ರ ಹೊಸ ಸಿನಿಮಾ ಬಂದೇ ಇಲ್ಲ. ಇದೀಗ 'ಫಿರ್ಕಿ' ಹೆಸರಿನ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.

ಸಾಲು-ಸಾಲು ರೀಮೇಕ್ ಮಾಡುತ್ತಿದೆ ಬಾಲಿವುಡ್
ಬಾಲಿವುಡ್ ಹಲವಾರು ರೀಮೇಕ್ ಸಿನಿಮಾಗಳನ್ನು ಮಾಡುತ್ತಿದೆ. ದಕ್ಷಿಣದ ಸಾಲು-ಸಾಲು ಸಿನಿಮಾಗಳು ಹಿಂದಿಯಲ್ಲಿ ರೀಮೇಕ್‌ಗೊಳ್ಳುತ್ತಿವೆ. ಕನ್ನಡದ 'ಯೂ-ಟರ್ನ್' ಸೇರಿದಂತೆ, ತಮಿಳಿನ 'ಸೂರರೈ ಪೊಟ್ರು' 'ವಿಕ್ರಂ ವೇದ', 'ಅನ್ನಿಯನ್', 'ಖೈದಿ', ಮಲಯಾಳಂನ 'ಡ್ರೈವಿಂಗ್ ಲೈಸೆನ್ಸ್', 'ಅಯ್ಯಪ್ಪನುಂ ಕೋಶಿಯುಂ', 'ಫೊರೆನ್ಸಿಕ್' ತೆಲುಗಿನ 'ಅಲಾ ವೈಕುಂಟಪುರಂಲೋ', 'ಹಿಟ್', 'ದೃಶ್ಯಂ' ಹೀಗೆ ಒಟ್ಟು 32 ದಕ್ಷಿಣ ಭಾರತದ ಸಿನಿಮಾಗಳನ್ನು ಮುಂದಿನ ದಿನಗಳಲ್ಲಿ ಬಾಲಿವುಡ್ ರೀಮೇಕ್ ಮಾಡಲಿದೆ.