For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಾವು ಪೂರ್ವನಿಯೋಜಿತ ಹತ್ಯೆ?: ಮಹೇಶ್ ಭಟ್, ರಿಯಾ ವಿರುದ್ಧವೇ ಅನುಮಾನ

  By Avani Malnad
  |

  ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ಅನೇಕ ಅನುಮಾನಗಳು ವ್ಯಕ್ತವಾಗುತ್ತಿವೆ. ಉದ್ಯಮ ಒಳಗಿನವರೇ ಅವರ ಸಾವಿಗೆ ಕಾರಣ ಎಂಬ ಆರೋಪ ದಟ್ಟವಾಗಿದೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳಲು ಚಿತ್ರೋದ್ಯಮ ಕಾರಣ ಎಂಬ ವಾದ, ಇದು ಆತ್ಮಹತ್ಯೆಯೇ ಅಲ್ಲ, ಪೂರ್ವ ನಿಯೋಜಿತ ಕೃತ್ಯ ಎಂಬಲ್ಲಿಗೆ ತಿರುಗಿದೆ.

  ಸುಶಾಂತ್ ಸಾವಿನ ಹಿಂದಿನ ರಾತ್ರಿಯಿಂದಲೇ ಅಲ್ಲಿನ ಸಿಸಿಟಿವಿ ಕ್ಯಾಮೆರಾಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ಸುಶಾಂತ್ ಫ್ಲ್ಯಾಟ್‌ಗೆ ಅಂದು ಸ್ನೇಹಿತರು ಬಂದಿದ್ದರು. ಅಕ್ಕಪಕ್ಕದ ಮನೆಯವರಿಗೆ ರಾತ್ರಿ ಪಾರ್ಟಿ ಮಾಡುವ, ಮಜಾ ಮಾಡುವ ಮ್ಯೂಸಿಕ್‌ನ ಸದ್ದು ಕೂಡ ಕೇಳಿಸಿತ್ತು ಎನ್ನಲಾಗುತ್ತಿದೆ. ಇದು ಖಂಡಿತವಾಗಿಯೂ ಖಿನ್ನತೆಯಲ್ಲಿರುವವರು ಮಾಡುವಂತಹದ್ದಲ್ಲ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಈ ಸುದ್ದಿಯನ್ನೂ ಕೇಳುವಂತಾಗಬಹುದು: ಆಘಾತಕಾರಿ ಸಂಗತಿ ಹಂಚಿಕೊಂಡ ಸೋನು ನಿಗಮ್ಈ ಸುದ್ದಿಯನ್ನೂ ಕೇಳುವಂತಾಗಬಹುದು: ಆಘಾತಕಾರಿ ಸಂಗತಿ ಹಂಚಿಕೊಂಡ ಸೋನು ನಿಗಮ್

  ಸಾಯುವ ಎರಡು ಗಂಟೆಗೂ ಮುನ್ನವಷ್ಟೇ ಸುಶಾಂತ್ ಕೆಲವರ ಜತೆ ಫೋನ್‌ನಲ್ಲಿ ಮಾತಾಡಿದ್ದು, ತಾವು ಖುಷಿಯ ಮೂಡ್‌ನಲ್ಲಿ ಇರುವುದಾಗಿ ತಿಳಿಸಿದ್ದರು. ಇವತ್ತು ತುಂಬಾ ಸೆಕೆಯಿದೆ ಅಲ್ಲವೇ ಎಂದೂ ಹೇಳಿದ್ದರು. ಇದು ಕೂಡ ಖಿನ್ನತೆಯಲ್ಲಿರುವ ಸೂಚನೆಯಂತೂ ಅಲ್ಲ ಎಂದು ಕೆಲವರು ತರ್ಕ ಮುಂದಿರಿಸಿದ್ದಾರೆ. ಮುಂದೆ ಓದಿ...

  ಎಡಗೈ ಬಳಸಿ ಆತ್ಮಹತ್ಯೆ ಸಾಧ್ಯವೇ?

  ಎಡಗೈ ಬಳಸಿ ಆತ್ಮಹತ್ಯೆ ಸಾಧ್ಯವೇ?

  ಆತ್ಮಹತ್ಯೆಗೆ ಬಳಸಿದ ಬೆಡ್ ಶೀಟ್ ಮೇಲೆ ಸುಶಾಂತ್ ಅವರ ಎಡಗೈ ಹೆಬ್ಬೆರಳು, ತೋರು ಬೆರಳು ಮತ್ತು ಕಿರುಬೆರಳಿನ ಗುರುತುಗಳಿವೆ. ಇದರ ಹೊರತಾಗಿ ಬೇರೆ ಯಾವುದೇ ಬೆರಳಿನ ಗುರುತು ಕಂಡುಬಂದಿಲ್ಲ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಹೇಳಿದೆ. ಎಲ್ಲರಿಗೂ ಗೊತ್ತಿರುವಂತೆ ಸುಶಾಂತ್ ಎಡಚ ಅಲ್ಲ. ಕೇವಲ ಎಡಗೈ ಬಳಸಿ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ.

  ಮನೆಯ ಡೂಪ್ಲಿಕೇಟ್ ಕೀ ನಾಪತ್ತೆ

  ಮನೆಯ ಡೂಪ್ಲಿಕೇಟ್ ಕೀ ನಾಪತ್ತೆ

  ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಕಣ್ಣುಗುಡ್ಡೆಗಳು ದೊಡ್ಡದಾಗಿ ಕಾಣಿಸಬೇಕು ಮತ್ತು ನಾಲಿಗೆ ಹೊರಚಾಚಿರಬೇಕು. ಆದರೆ ಈ ಪ್ರಕರಣದಲ್ಲಿ ಹಾಗೆ ಆಗಿಲ್ಲ. ಮನೆಯ ಡೂಪ್ಲಿಕೇಟ್ ಕೀ ಕೂಡ ಕಣ್ಮರೆಯಾಗಿದೆ ಎಂಬ ವಾದ ಹರಿದಾಡುತ್ತಿದೆ.

  ಮಾಧ್ಯಮಗಳ ಮೇಲೆ ಕೆಂಡ ಕಾರಿದ ಸುಶಾಂತ್ ಸಿಂಗ್ ಗೆಳತಿಮಾಧ್ಯಮಗಳ ಮೇಲೆ ಕೆಂಡ ಕಾರಿದ ಸುಶಾಂತ್ ಸಿಂಗ್ ಗೆಳತಿ

  ನನ್ನನ್ನು ಕೊಲ್ಲಬಹುದು ಎಂದಿದ್ದರು..

  ನನ್ನನ್ನು ಕೊಲ್ಲಬಹುದು ಎಂದಿದ್ದರು..

  ಸುಶಾಂತ್ ಗೆಳತಿ ರಿಯಾ ಚಕ್ರಬೊರ್ತಿ ಹಾಗೂ ಮಹೇಶ್ ಭಟ್ ನಡುವೆ ಒಳ್ಳೆಯ ಬಾಂಧವ್ಯವಿದೆ ಎನ್ನುವುದು ಈಗ ಬಹಿರಂಗವಾಗಿದೆ. 'ನಾನು ನಿನ್ನೊಂದಿಗೆ ಸಂಬಂಧವಿರಿಸಿಕೊಂಡರೆ ನನ್ನನ್ನು ಕೊಂದು ಹಾಕಬಹುದು' ಎಂದು ರಿಯಾಗೆ ಸುಶಾಂತ್ ಹೇಳಿದ್ದರು. ಹೀಗಾಗಿ ಎಲ್ಲರ ಗಮನ ಈಗ ಮಹೇಶ್ ಭಟ್ ಮತ್ತು ರಿಯಾ ಕಡೆಗೆ ತಿರುಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದರ ಕುರಿತೇ ಈಗ ತೀವ್ರ ಚರ್ಚೆ ನಡೆಯುತ್ತಿದೆ.

  ಮಹೇಶ್ ಭಟ್ ನೀಡಿದ್ದ ಹೇಳಿಕೆ

  ಮಹೇಶ್ ಭಟ್ ನೀಡಿದ್ದ ಹೇಳಿಕೆ

  ಸುಶಾಂತ್ ಸತ್ತ ಸುದ್ದಿ ಬರುತ್ತಿದ್ದಂತೆಯೇ ರಿಯಾ ತಮ್ಮ ಎಲ್ಲ ಖಾಸಗಿ ಫೋಟೊಗಳನ್ನೂ ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಿದ್ದರು. ಕಾಮೆಂಟ್ ಬಾಕ್ಸ್‌ಅನ್ನು ಆಫ್ ಮಾಡಿದ್ದರು. ಹಿಂದೆ ಸಂದರ್ಶನವೊಂದರಲ್ಲಿ ಮಹೇಶ್ ಭಟ್, ಸುಶಾಂತ್ ಒಂದು ದಿನ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದಿದ್ದರು. ಇದೆಲ್ಲವೂ ಪೂರ್ವನಿಯೋಜಿತ ಕೃತ್ಯದಂತೆ ಕಾಣಿಸುತ್ತದೆ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

  'ನಿನ್ನಲ್ಲಿ ವಿಪರೀತ ನೋವಿತ್ತು ಎಂದು ನನಗೆ ಗೊತ್ತು': ಸುಶಾಂತ್ ಸಿಂಗ್ ಅಕ್ಕ ಬರೆದ ಬಹಿರಂಗ ಪತ್ರ'ನಿನ್ನಲ್ಲಿ ವಿಪರೀತ ನೋವಿತ್ತು ಎಂದು ನನಗೆ ಗೊತ್ತು': ಸುಶಾಂತ್ ಸಿಂಗ್ ಅಕ್ಕ ಬರೆದ ಬಹಿರಂಗ ಪತ್ರ

  ದಿಶಾ ಆತ್ಮಹತ್ಯೆಗೂ ನಂಟು?

  ದಿಶಾ ಆತ್ಮಹತ್ಯೆಗೂ ನಂಟು?

  ಸುಶಾಂತ್ ಸಾವಿಗೂ ಐದು ದಿನಗಳ ಮುಂಚೆಯಷ್ಟೇ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಹುಶಃ ಈ ಭಯಾನಕ ಸಂಚಿನ ಕುರಿತು ದಿಶಾಗೆ ಗೊತ್ತಿರುವ ಸಾಧ್ಯತೆ ಇದೆ. ಇದು ಸಾವು ಎಂದು ನಿಜಕ್ಕೂ ಭಾವಿಸುತ್ತೀರಾ ಅಥವಾ ಪೂರ್ವ ನಿಯೋಜಿತ ಹತ್ಯೆ ಎನ್ನುತ್ತೀರಾ? ಎಂದು ಅನೇಕರು ಪ್ರಶ್ನಿಸಿದ್ದಾರೆ.

  English summary
  Netizens have suspected that Rhea Chakraborty and Mahesh Bhat were behind Sushant Singh Rajput's death case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X