For Quick Alerts
  ALLOW NOTIFICATIONS  
  For Daily Alerts

  ಅನುಷ್ಕಾ-ವಿರಾಟ್ ಕೊಹ್ಲಿ ದಂಪತಿಗೆ ವಿಶ್ ಮಾಡಿ ಮತ್ತೆ ಟ್ರೋಲ್ ಆದ ಕರಣ್ ಜೋಹರ್

  |

  ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂತಸದ ವಿಚಾರವನ್ನು ಅನುಷ್ಕಾ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ನಾವಿನ್ನು ಮೂವರು, ಮುಂದಿನ ವರ್ಷ 2021, ಜನವರಿಯಲ್ಲಿ ಹೊಸ ಸದಸ್ಯ ಬರಲಿದ್ದಾರೆ' ಎಂದು ಫೋಟೋ ಶೇರ್ ಮಾಡಿ ಖುಷಿಯ ವಿಚಾರವನ್ನು ತಿಳಿಸಿದ್ದಾರೆ.

  Ayogya ಸಿನಿಮಾದಲ್ಲಿ Satish Neenasam ಕೆಂಡದ ಮೇಲೆ ಓಡಿದ್ದು ಹೇಗೆ ನೋಡಿ|Ayogya song Making| Oneindia Kannada

  ಅನುಷ್ಕಾ ದಂಪತಿ ಈ ಸುದ್ದಿಯನ್ನು ಶೇರ್ ಮಾಡುತ್ತಿದ್ದಂತೆ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ. ಚಿತ್ರರಂಗದ ಗಣ್ಯರು ಮತ್ತು ಕ್ರಿಕೆಟ್ ಗಣ್ಯರು ವಿರುಷ್ಕಾ ದಂಪತಿಗೆ ವಿಶ್ ಮಾಡುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ, ಅಲಿಯಾ ಭಟ್, ಶ್ರದ್ಧಾ ಕಪೂರ್, ಕಾಜಲ್ ಅಗರ್ ವಾಲ್, ಸಮಂತಾ, ಕತ್ರೀನಾ ಕೈಫ್ ಸೇರಿದ್ದಂತೆ ಇಡೀ ಬಾಲಿವುಡ್ ಶುಭ ಹಾರೈಸಿದ್ದಾರೆ.

  ನಟ ಪ್ರಭಾಸ್ ಅವರ ಈ ನಿರ್ಧಾರದಿಂದ ಅಸಮಾಧಾನಗೊಂಡಿರುವ ಕರಣ್ ಜೋಹರ್

  ವಿಶೇಷ ಅಂದರೆ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಸಹ ವಿಶ್ ಮಾಡಿದ್ದಾರೆ. ಕರಣ್ ವಿಶ್ ಮಾಡುತ್ತಿದ್ದಂತೆ ನೆಟ್ಟಿಗರು ಮತ್ತೆ ಟ್ರೋಲ್ ಮಾಡುತ್ತಿದ್ದಾರೆ. ನೆಪೋಟಿಸಂ ಆರೋಪ ಹೊತ್ತುಕೊಂಡಿರುವ ಕರಣ್ ವಿರುದ್ಧ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕರಣ್ ಏನೇ ಪೋಸ್ಟ್ ಮಾಡಿದ್ರು ನೆಟ್ಟಿಗರು ಹಿಗ್ಗಾಮುಗ್ಗಾ ಥಳಿಸುತ್ತಿದ್ದಾರೆ.

  ಕರಣ್ ವಿರುಷ್ಕಾ ದಂಪತಿಗೆ "ಲವ್ ಲವ್ ಮತ್ತು ಹೆಚ್ಚು ಲವ್" ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು, ಮತ್ತೊಂದು ನೆಪೋ ಮಗು ಬರ್ತಿದೆ, ನೆಪೋ ಮಗುವನ್ನು ಸಿನಿಮಾರಂಗಕ್ಕೆ ಲಾಂಚ್ ಮಾಡಲು ಸಿದ್ಧರಾಗಿ ಎಂದು ಕರಣ್ ಜೋಹರ್ ಕಾಲೆಳೆಯುತ್ತಿದ್ದಾರೆ.

  ಸುಶಾಂತ್ ಸಿಂಗ್ ಸಾವಿನ ಬಳಿಕ ಕರಣ್ ಜೋಹರ್ ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದರು. ಇತ್ತೀಚಿಗೆ ಸ್ವಾತಂತ್ರ್ಯ ದಿನಾಚರಣೆಗೆ ವಿಶ್ ಮಾಡುವ ಮೂಲಕ ಮತ್ತೆ ಸಾಮಾಜಿಕ ಜಾಲತಾಣಕ್ಕೆ ಮರಳಿದ್ದರು. ಇದೀಗ ಮತ್ತೆ ವಿರುಷ್ಕಾಗೆ ಶುಭಾಶಯ ಹೇಳಿ ಟ್ರೋಲ್ ಆಗುತ್ತಿದ್ದಾರೆ.

  English summary
  Netizens troll After Karan Johar wishes to Anushka Sharma and Virat kohli.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X