For Quick Alerts
  ALLOW NOTIFICATIONS  
  For Daily Alerts

  ಛೇ.. ಕನ್ನಡಿಗ ಕೆ.ಎಲ್.ರಾಹುಲ್ 'ಬ್ರೋ'ಗೆ ಹೀಗಾಗಬಾರದಿತ್ತು.!

  By Harshitha
  |

  ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ ಕರ್ನಾಟಕದ ಪ್ರತಿಭಾನ್ವಿತ ಕ್ರಿಕೆಟರ್ ಕೆ.ಎಲ್.ರಾಹುಲ್ ಗಾಸಿಪ್ ಪಂಡಿತರ ನಾಲಿಗೆ ಮೇಲೆ ನುಲಿದಾಡುತ್ತಿದ್ದರು. ಯಾಕಂದ್ರೆ, ನಟಿ ನಿಧಿ ಅಗರ್ವಾಲ್ ಜೊತೆಗೆ ಬ್ಯಾಟ್ಸ್ ಮ್ಯಾನ್ ಕೆ.ಎಲ್.ರಾಹುಲ್ ಕಾಣಿಸಿಕೊಂಡಿದ್ದರು.

  ಹೋಟೆಲ್ ವೊಂದರಲ್ಲಿ ಕೆ.ಎಲ್.ರಾಹುಲ್ ಹಾಗೂ ನಿಧಿ ಅಗರ್ವಾಲ್ ಒಟ್ಟಿಗೆ ಊಟ ಮಾಡಿದ್ದರು. ಅದನ್ನ ನೋಡಿದ್ಮೇಲೆ ಇವರಿಬ್ಬರು ಡೇಟಿಂಗ್ ಮಾಡ್ತಿದ್ದಾರಂತೆ ಎಂಬ ಅಂತೆ-ಕಂತೆ ಶುರುವಾಯ್ತು.

  ''ನಾವಿಬ್ಬರೂ ಓದಿದ್ದು ಬೆಂಗಳೂರಿನಲ್ಲಿಯೇ. ಹಲವು ವರ್ಷಗಳಿಂದಲೂ ನಾವಿಬ್ಬರು ಸ್ನೇಹಿತರು'' ಅಂತ ನಿಧಿ ಅಗರ್ವಾಲ್ ಪ್ರತಿಕ್ರಿಯೆ ಕೂಡ ಕೊಟ್ಟಿದ್ದರು. ಇಷ್ಟಾದರೂ, ಇಬ್ಬರ ಮಧ್ಯೆ ಸಂಥಿಂಗ್ ಸ್ಪೆಷಲ್ ಇದೆ ಅಂತಲೇ ಕೆಲವರು ಭಾವಿಸಿದ್ದರು.

  ಹೀಗಿರುವಾಗಲೇ, ಏಕಾಏಕಿ ಕೆ.ಎಲ್.ರಾಹುಲ್ ಗೆ 'ಬ್ರೋ' (ಬ್ರದರ್ - ಸಹೋದರ) ಅಂತ ನಿಧಿ ಅಗರ್ವಾಲ್ ಕರೆದುಬಿಟ್ಟಿದ್ದಾರೆ. ಇದನ್ನ ನೋಡಿ ಹಲವರು ತಲೆ ಚಚ್ಚಿಕೊಂಡಿದ್ದರೆ, ನೆಟ್ಟಿಗರು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಮುಂದೆ ಓದಿರಿ...

  ಆಲ್ ದಿ ಬೆಸ್ಟ್ 'ಬ್ರೋ'

  ಆಲ್ ದಿ ಬೆಸ್ಟ್ 'ಬ್ರೋ'

  ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡದಲ್ಲಿ ಕೆ.ಎಲ್.ರಾಹುಲ್ ಕೂಡ ಇದ್ದರು. ಪಂದ್ಯದಲ್ಲಿ ಕೆ.ಎಲ್.ರಾಹುಲ್ ಚೆನ್ನಾಗಿ ಪರ್ಫಾಮ್ ಮಾಡಲಿ ಅಂತ ನಿಧಿ ಅಗರ್ವಾಲ್ ''ಆಲ್ ದಿ ಬೆಸ್ಟ್ ಬ್ರೋ'' ಎಂದು ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿ ಹಾಕಿದರು.

  ಕನ್ನಡ ಕ್ರಿಕೆಟಿಗ ಕೆ.ಎಲ್.ರಾಹುಲ್ ಜೊತೆಗೆ ಡೇಟ್ ಮಾಡುತ್ತಿರುವ ನಟಿ ಯಾರು.?ಕನ್ನಡ ಕ್ರಿಕೆಟಿಗ ಕೆ.ಎಲ್.ರಾಹುಲ್ ಜೊತೆಗೆ ಡೇಟ್ ಮಾಡುತ್ತಿರುವ ನಟಿ ಯಾರು.?

  ಟ್ರೋಲ್ ಶುರು

  ಟ್ರೋಲ್ ಶುರು

  ಪಬ್ಲಿಕ್ ಆಗಿ ಕೆ.ಎಲ್.ರಾಹುಲ್ ಗೆ ನಿಧಿ ಅಗರ್ವಾಲ್ 'ಬ್ರೋ' ಅಂತ ಕರೆದ ಮೇಲೆ ಟ್ರೋಲಿಂಗ್ ಶುರುವಾಯ್ತು. ''ಕೆ.ಎಲ್.ರಾಹುಲ್ ಜೀವನದಲ್ಲಿ ಯಾವಾಗಲೂ ಟ್ರಾಜೆಡಿ ಆಗುತ್ತಲೇ ಇರುತ್ತೆ'' ಅಂತ ನೆಟ್ಟಿಗರು ವ್ಯಂಗ್ಯವಾಡಲು ಆರಂಭಿಸಿದರು.

  ಕಳಪೆ ಪರ್ಫಾಮೆನ್ಸ್ ಗೆ ಇದೇ ಕಾರಣ.!

  ಕಳಪೆ ಪರ್ಫಾಮೆನ್ಸ್ ಗೆ ಇದೇ ಕಾರಣ.!

  ನಿಧಿ ಅಗರ್ವಾಲ್ 'ಬ್ರೋ' ಅಂತ ಕರೆದಿದ್ದಕ್ಕೆ ಏಕದಿನ ಸರಣಿಯಲ್ಲಿ ಕೆ.ಎಲ್.ರಾಹುಲ್ ಪರ್ಫಾಮೆನ್ಸ್ ಯಾಕೆ ಚೆನ್ನಾಗಿರಲಿಲ್ವಂತೆ.!

  ಅಸಲಿ ಕಾರಣ...

  ಅಸಲಿ ಕಾರಣ...

  ಸರಣಿಯಲ್ಲಿ ಕೆ.ಎಲ್.ರಾಹುಲ್ ಕಳಪೆ ಪ್ರದರ್ಶನಕ್ಕೆ 'ಬ್ರೋ' ಕಾರಣ ಅಂತ ಹಲವರು ಕಾಲೆಳೆಯುತ್ತಿದ್ದಾರೆ. ಇಷ್ಟೆಲ್ಲಾ ಆದರೂ, ಕೆ.ಎಲ್.ರಾಹುಲ್ ಆಗಲಿ ನಿಧಿ ಅಗರ್ವಾಲ್ ಆಗಲಿ ತುಟಿಕ್ ಪಿಟಿಕ್ ಎಂದಿಲ್ಲ.!

  ಗಾಸಿಪ್ ಗಳಿಂದ ಬೇಸರಗೊಂಡು ಹೀಗೆ ಮಾಡಿದ್ರಾ.?

  ಗಾಸಿಪ್ ಗಳಿಂದ ಬೇಸರಗೊಂಡು ಹೀಗೆ ಮಾಡಿದ್ರಾ.?

  ಹಾಗ್ನೋದಿದ್ರೆ, ಈ ಲಿಂಕಪ್ ಹಾಗೂ ಗಾಸಿಪ್ ಗಳಿಂದಲೇ ಬೇಸರಗೊಂಡು ಕೆ.ಎಲ್.ರಾಹುಲ್ ಗೆ ನಿಧಿ ಅಗರ್ವಾಲ್ 'ಬ್ರೋ' ಅಂತ ಕರೆದ್ರಾ.? ನಮಗಂತೂ ಗೊತ್ತಿಲ್ಲ. ಒಟ್ನಲ್ಲಿ, 'ಬ್ರೋ' ಅಂದು ಗಾಸಿಪ್ ಪ್ರಿಯರ ಬಾಯಿ ಮುಚ್ಚಿಸಿದ್ದಾರೆ ನಿಧಿ ಅಗರ್ವಾಲ್.

  English summary
  Bollywood Actress Nidhi Agerwal just 'Bro' zoned Cricketer KL Rahul. Take a look at the trolls.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X