twitter
    For Quick Alerts
    ALLOW NOTIFICATIONS  
    For Daily Alerts

    ಕೇಂದ್ರ ಬಜೆಟ್ 2021: ಚಿತ್ರೋದ್ಯಮವನ್ನು ಮರೆತ ನಿರ್ಮಲಾ ಸೀತಾರಾಮನ್

    |

    ಕೊರೊನಾದಿಂದ ತೀವ್ರ ಸಂಕಷ್ಟದಲ್ಲಿದ್ದ ಚಿತ್ರೋಧ್ಯಮಕ್ಕೆ ಕೇಂದ್ರ ಬಜೆಟ್‌ನಲ್ಲಿ ಏನಾದರೂ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ಮಾಡಲಾಗಿತ್ತು. ಆದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಘೋಷಣೆ ಮಾಡಿದ ಬಜೆಟ್ ಸಿನಿ ಇಂಡಸ್ಟ್ರಿಗೆ ನಿರಾಸೆ ಮೂಡಿಸಿದೆ.

    ಕೊರೊನಾ ವೈರಸ್ ಸಮಯದಲ್ಲಿ ಇಡೀ ಚಿತ್ರೋಧ್ಯಮ ಸಂಕಷ್ಟ ಎದುರಿಸಿದೆ. ಚಿತ್ರಮಂದಿರಗಳು ಮುಚ್ಚಿದ್ದರ ಪರಿಣಾಮ ಕಾರ್ಮಿಕರೆಲ್ಲವೂ ಸಂಕಷ್ಟದಲ್ಲಿದ್ದರು. ಕೇಂದ್ರ ಹಾಗೂ ರಾಜ್ಯಕ್ಕೆ ಹೆಚ್ಚು ತೆರಿಗೆ ಪಾವತಿಸುವ ಉದ್ಯಮಗಳಲ್ಲಿ ಒಂದಾಗಿರುವ ಸಿನಿ ಇಂಡಸ್ಟ್ರಿಯನ್ನು ಪರಿಗಣಿಸದೆ ಇರುವುದು ತೀರಾ ಬೇಸರ ತರಿಸಿದೆ ಎಂದು ಚಿತ್ರೋಧ್ಯಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಬಜೆಟ್ 2021: ಕೇಂದ್ರ ಬಜೆಟ್‌ನ ಪ್ರಮುಖ ಅಂಶಗಳು

    ಹಿಂದಿ ಚಲನಚಿತ್ರ ಪ್ರದರ್ಶಕ ಅಕ್ಷಯ್ ರತಿ ಈ ಕುರಿತು ಪಿಂಕ್‌ವಿಲ್ಲಾಗೆ ಪ್ರತಿಕ್ರಿಯಿಸಿದ್ದು, "ಬಜೆಟ್‌ನಲ್ಲಿ ಮನರಂಜನಾ ಕ್ಷೇತ್ರದ ಬಗ್ಗೆ ಯಾವುದೇ ಉಲ್ಲೇಖ ಮಾಡದಿರುವುದು ದುರದೃಷ್ಟ. ಕನಿಷ್ಠ ಹೆಚ್ಚುವರಿ ಹೊರೆಗಳಿಲ್ಲ ಎನ್ನುವುದು ಸಮಾಧಾನ ಅಷ್ಟೇ. ಸಾಂಕ್ರಾಮಿಕ ರೋಗ ಪರಿಣಾಮ ಹೆಚ್ಚು ಸಂಕಷ್ಟಕ್ಕೆ ಸಿಲುಕಿದೆ ಕ್ಷೇತ್ರ ಚಿತ್ರರಂಗ ಎಂಬುದರಲ್ಲಿ ಸಂದೇಹವಿಲ್ಲ. ಈ ಕುರಿತು ಗಮನಿಸಬೇಕಾದ ಅಗತ್ಯವಿದೆ'' ಎಂದಿದ್ದಾರೆ.

    Nirmala Sitharaman Did not allocate anything to the entertainment industry in Budget 2021

    ನಿರ್ಮಾಪಕ ಟಿಪಿ ಅಗರ್‌ವಾಲ್ ಮಾತನಾಡಿ ''ನಾವು ಸರ್ಕಾರದಿಂದ ಹೆಚ್ಚು ನಿರೀಕ್ಷೆ ಹೊಂದಿರಲಿಲ್ಲ. ನಮಗೆ ಯಾವುದೇ ಸಾಲ ದೊರೆಯುವುದಿಲ್ಲ. ಒಂದು ವೇಳೆ ಸಾಲ ಬೇಕು ಅಂದ್ರೆ ನಮ್ಮ ಆಸ್ತಿಯನ್ನು ಅಡಮಾನ ಇಡಬೇಕು. ನಾವು ನಿರ್ಮಿಸುವ ಸಿನಿಮಾವನ್ನು ಅಡಮಾನ ಇಡಲು ಸಾಧ್ಯವಿಲ್ಲ. ಆದರೆ, ಜಿಎಸ್ಟಿ ಮತ್ತು ತೆರಿಗೆಯಲ್ಲಿ ಸ್ವಲ್ಪ ಕಡಿತ ಎದುರು ನೋಡುತ್ತಿದ್ದೇವು'' ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಬಜೆಟ್ 2021; ಕರ್ನಾಟಕದ ಸಂಸದೆ ರಾಜ್ಯಕ್ಕೆ ಕೊಟ್ಟಿದ್ದೇನು?

    Recommended Video

    ತೆಲುಗಿನಲ್ಲಿ ರಾಬರ್ಟ್ ಆರ್ಭಟಕ್ಕೆ ಸಿಕ್ಕಿರುವ ಚಿತ್ರಮಂದಿರಗಳು ಎಷ್ಟು ಗೊತ್ತಾ | Darshan |Roberrt |Roberrt Telugu

    ಕೊರೊನಾ ಆರ್ಥಿಕ ಪ್ಯಾಕೇಜ್‌ನಲ್ಲೂ ಸಿನಿಮಾ ರಂಗಕ್ಕೆ ವಿಶೇಷವಾಗಿ ಯಾವುದೇ ಯೋಜನೆ ಘೋಷಿಸಿರಲಿಲ್ಲ. ಕೇಂದ್ರ ಬಜೆಟ್‌ ಮೇಲೆ ಯಾವುದೇ ನಿರೀಕ್ಷೆ ಇಲ್ಲದಿದ್ದರೂ ಕೊರೊನಾ ಕಾರಣದಿಂದ ಈ ಸಲ ಏನಾದರೂ ಸಹಾಯ ಸಿಗಬಹುದು ಎಂದು ಕಾದಿದ್ದರು.

    English summary
    Finance Minister Nirmala Sitharaman announced the Budget 2021. did not allocate anything to the entertainment industry.
    Monday, February 1, 2021, 16:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X