»   » ಕತ್ರಿನಾ ಕೈಫ್ ತೆಗೆದುಕೊಂಡ ವೈರಾಗ್ಯದ ನಿರ್ಧಾರ

ಕತ್ರಿನಾ ಕೈಫ್ ತೆಗೆದುಕೊಂಡ ವೈರಾಗ್ಯದ ನಿರ್ಧಾರ

Posted By:
Subscribe to Filmibeat Kannada

ಅಸಂಖ್ಯಾತ ಸಿನಿರಸಿಕರ ಹಾರ್ಟ್ ಅಂತಾರೆ ನೋಡಿ ಅದಕ್ಕೆ ಲಗ್ಗೆ ಇಟ್ಟ ಕತ್ರಿನಾ ಕೈಫ್ ವೈರಾಗ್ಯದಿಂದ ಖಡಕ್ ನಿರ್ಧಾರಕ್ಕೊಂದು ಬರುವ ಮೂಲಕ ಚಿತ್ರಪ್ರೇಮಿಗಳಿಗೆ ಶ್ಯಾನೆ ಬೇಸರ ಸುದ್ದಿಯೊಂದನ್ನು ನೀಡಿದ್ದಾರೆ.

ಇನ್ನು ಮುಂದೆ ಸಿನಿಮಾ ಜೀವನದಲ್ಲಾಗಲಿ ಅಥವಾ ವೈಯಕ್ತಿಕ ಜೀವನದಲ್ಲಾಗಲಿ ಬಿಕನಿ ತೊಡುವುದಿಲ್ಲ ಎಂದು ಶಪಥಗೈದಿದ್ದಾರೆ. ಆದಿತ್ಯಾ ಚೋಪ್ರಾ ನಿರ್ದೇಶಿಸುತ್ತಿರುವ ಧೂಮ್ 3 ಚಿತ್ರದಲ್ಲಿ ಈ ಹಿಂದೆ ಬಿಕಿನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆಂದು ಸುದ್ದಿಯಾಗಿತ್ತು. ಈಗ ಈ ಚಿತ್ರದಲ್ಲಿ ಬಿಕಿನಿ ತೊಡುವುದಿಲ್ಲ ಎಂದು ಕತ್ರಿನಾ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಟು ಪೀಸ್ ಬಟ್ಟೆಯ ಮೇಲೆ ಕತ್ರಿನಾಗೆ ವೈರಾಗ್ಯ ಬರಲು ಕಾರಣ ಸಿಂಪಲ್. ರಣಬೀರ್ ಕಪೂರ್ ಜೊತೆ ಸ್ಪೇನಿನ ಇಬಿಜಾ ಸಮುದ್ರತೀರದಲ್ಲಿ ಈಜಾಡಿದ ರೋಚಕ ಚಿತ್ರಗಳು ಮಾಧ್ಯಮಗಳಲ್ಲಿ ಬಹಿರಂಗಗೊಂಡಿದ್ದವು.

No Bikni for Katrina Kaif on and off screen

ಭಾರತಕ್ಕೆ ವಾಪಾಸ್ ಬಂದ ಮೇಲೆ ಮಾಧ್ಯಮಗಳಲ್ಲಿ ಅಷ್ಟೊತ್ತಿಗಾಗಲೇ ಬಿಸಿಬಿಸಿ ಮೆಣಸಿನಕಾಯಿ ಬಜ್ಜಿತರ ಬಿಕರಿಯಾಗಿದ್ದ ತನ್ನ ಬಿಕಿನಿ ಚಿತ್ರಗಳನ್ನು ನೋಡಿ ಕೆಂಡಾಮಂಡಲವಾಗಿದ್ದರು.

ತಮ್ಮ ಖಾಸಗಿ ಬದುಕನ್ನು ಹಾಳು ಮಾಡಿರುವ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ತಮ್ಮ ಅನುಮತಿ ಇಲ್ಲದೆ ಫೋಟೋಗಳನ್ನು ತೆಗೆದ ಸ್ಟಾರ್ ಡಸ್ಟ್ ನಿಯತಕಾಲಿಕದ ಕೃತ್ಯವನ್ನು ಅವರು ಖಂಡಿಸಿದ್ದರು.

ಕತ್ರಿನಾ ಜೊತೆ ತನ್ನ ಮಗ ರಣಬೀರ್ ಕಪೂರ್ ಇರುವ ಫೋಟೋಗಳನ್ನು ಪ್ರಕಟಿಸಿದ್ದಕ್ಕಾಗಿ ತಂದೆ ರಿಷಿ ಕಪೂರ್ ಕೂಡಾ ಭಾರೀ ಸಿಟ್ಟಾಗಿದ್ದರು. ಮಾನನಷ್ಟ ಮೊಕದ್ದಮೆ ಹೂಡುವ ಮಟ್ಟಿಗೆ ಗರಂ ಆಗಿದ್ದರು. 

ಕತ್ರಿನಾ ಕೈಫ್

English summary
Katrina Kaif decided not to wear two piece dresses any more in on and off screen. Katrina Kaif is upset about her bikini pictures with Ranbeer Kapoor in Spain Beach appearing in the media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada