»   » ಶ್ರೀದೇವಿ ಪಾರ್ಥೀವ ಶರೀರ ರವಾನೆಗೆ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ!

ಶ್ರೀದೇವಿ ಪಾರ್ಥೀವ ಶರೀರ ರವಾನೆಗೆ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ!

Posted By:
Subscribe to Filmibeat Kannada

ಕಳೆದ ಶನಿವಾರ ರಾತ್ರಿ (ಫೆಬ್ರವರಿ 24) ದುಬೈನಲ್ಲಿ ಶ್ರೀದೇವಿ ನಿಧನರಾದರು. ಹೃದಯಾಘಾತದಿಂದ ಶ್ರೀದೇವಿ ಕೊನೆಯುಸಿರೆಳೆದರು ಎಂದು ಮೊದಲು ಸುದ್ದಿ ಆಗಿತ್ತು. ಆದ್ರೆ, ನಿನ್ನೆ ಫೋರೆನ್ಸಿಕ್ ರಿಪೋರ್ಟ್ ಬಹಿರಂಗವಾಗಿದ್ದು, ವರದಿಯಲ್ಲಿ ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿ ಶ್ರೀದೇವಿ ಸಾವನ್ನಪ್ಪಿದರು ಎಂದು ಉಲ್ಲೇಖಿಸಲಾಗಿದೆ.

ಶ್ರೀದೇವಿ ಸಾವಿನ ಕುರಿತು ದುಬೈ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಶ್ರೀದೇವಿ ಅವರ ಮೊಬೈಲ್ ಕರೆಗಳನ್ನು ಪರಿಶೀಲಿಸಲಾಗುತ್ತಿದೆ. ಈಗಾಗಲೇ ವೈದ್ಯಕೀಯ ವರದಿಗಳನ್ನ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ. ಆದ್ರೆ, ಪಾರ್ಥೀವ ಶರೀರ ಕುಟುಂಬಸ್ಥರ ಕೈ ಸೇರಬೇಕು ಅಂದ್ರೆ, ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ನಿಂದ ಗ್ರೀನ್ ಸಿಗ್ನಲ್ ಬೇಕು. ಅದು ಇನ್ನೂ ಸಿಗದ ಕಾರಣ, ಭಾರತಕ್ಕೆ ಶ್ರೀದೇವಿ ಪಾರ್ಥೀವ ಶರೀರ ರವಾನೆ ಆಗುವುದು ಇನ್ನೂ ತಡವಾಗಲಿದೆ. ಮುಂದೆ ಓದಿರಿ...

ಇನ್ನೂ ಕ್ಲಿಯರೆನ್ಸ್ ಕೊಟ್ಟಿಲ್ಲ.!

ಶ್ರೀದೇವಿ ಅವರ ಪಾರ್ಥೀವ ಶರೀರವನ್ನ ಭಾರತಕ್ಕೆ ರವಾನೆ ಮಾಡಲು ದುಬೈ ಪ್ರಾಸಿಕ್ಯೂಟರ್ ಇನ್ನೂ ಲಿಖಿತ ರೂಪದಲ್ಲಿ ಒಪ್ಪಿಗೆ ನೀಡಿಲ್ಲ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ನಟಿ ಶ್ರೀದೇವಿ ಪೋಸ್ಟ್ ಮಾರ್ಟಂ ರಿಪೋರ್ಟ್ ಸುತ್ತ ಅನುಮಾನದ ಹುತ್ತ.!

ದುಬೈಗೆ ಪಯಣ ಬೆಳೆಸಿದ ಅರ್ಜುನ್ ಕಪೂರ್

ಬೋನಿ ಕಪೂರ್ ಅವರ ಮೊದಲ ಪತ್ನಿಯ ಪುತ್ರ ಅರ್ಜುನ್ ಕಪೂರ್ ಇಂದು ಬೆಳಗ್ಗೆ ದುಬೈಗೆ ಹಾರಿದರು. ದುಬೈನಲ್ಲಿ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳಲ್ಲಿ ತಂದೆಗೆ ಜೊತೆಯಾಗಿರಲು ಅರ್ಜುನ್ ಕಪೂರ್ ದುಬೈಗೆ ತೆರಳಿದ್ದಾರೆ.

ಸರ್ಪ್ರೈಸ್ ಕೊಡಲು ಹೋದ ಬೋನಿ ಕಪೂರ್ ಗೆ ಕಾದಿತ್ತು ಶಾಕ್: ಬಾತ್ ಟಬ್ ನಲ್ಲಿ ಬಿದ್ದಿದ್ದ ಶ್ರೀದೇವಿ!

ಕ್ಲಿಯರೆನ್ಸ್ ಲೆಟರ್ ಗಾಗಿ ಕಾಯುತ್ತಿದ್ದಾರೆ

ಭಾರತೀಯ ರಾಯಭಾರ ಕಛೇರಿಯ ಅಧಿಕಾರಿಗಳು ಹಾಗೂ ಶ್ರೀದೇವಿ ಕುಟುಂಬಸ್ಥರು ಸದ್ಯ ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ನಿಂದ ಕ್ಲಿಯರೆನ್ಸ್ ಲೆಟರ್ ಗಾಗಿ ಕಾಯುತ್ತಿದ್ದಾರೆ.

ಮೂರು ದಿನ ಕಳೆಯಿತು

ಮೂರು ದಿನ ಕಳೆದರೂ, ಶ್ರೀದೇವಿ ಪಾರ್ಥೀವ ಶರೀರ ಇನ್ನೂ ದುಬೈನ ಶವಾಗಾರದಲ್ಲಿದೆ.

English summary
As per Gulf news report, No clearance letter issued yet from Dubai Public Prosecution to repatriate Sridevi's body to India.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada