twitter
    For Quick Alerts
    ALLOW NOTIFICATIONS  
    For Daily Alerts

    'ಲಾಲ್ ಸಿಂಗ್ ಚಡ್ಡ' ಸಿನಿಮಾದಿಂದ ವಿತರಕರಿಗೆ ನಷ್ಟವಾಗಿದೆ ಎಂಬುದು ಸುಳ್ಳು: ನಿರ್ಮಾಣ ಸಂಸ್ಥೆ

    |

    ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧಾರುಣ ಸೋಲು ಕಂಡಿದೆ. ಬಿಡುಗಡೆ ಆಗ ನಾಲ್ಕು ದಿನಕ್ಕೆ ಸಿನಿಮಾ ಗಳಿಸಿರುವುದು ಕೇವಲ 40 ಕೋಟಿಯಷ್ಟೆ.

    ಈ ಸಿನಿಮಾ ನೂರು ಕೋಟಿ ಕ್ಲಬ್ ಸೇರುವುದು ಬಹುತೇಕ ಅಸಾಧ್ಯ ಎಂದೇ ಹೇಳಲಾಗುತ್ತಿದೆ. ಇದೀಗ ಸಿನಿಮಾ ವಿತರಣೆ ಮಾಡಿರುವ ವಿತರಕರು ತೀವ್ರ ನಷ್ಟ ಅನುಭವಿಸಿದ್ದು, ಸಿನಿಮಾದ ಸಹ ನಿರ್ಮಾಪಕರೂ ಆದ ಆಮಿರ್ ಖಾನ್ ಅವರನ್ನು ಹಣಕ್ಕಾಗಿ ಒತ್ತಾಯಿಸುತ್ತಿದ್ದಾರೆ ಎನ್ನಲಾಗುತ್ತಿದೆ.

    50 ಕೋಟಿ ಗಳಿಸದೇ ಮೊದಲ ವೀಕೇಂಡ್ ದಾಟಿದ 'ಲಾಲ್ ಸಿಂಗ್ ಚಡ್ಡ'!50 ಕೋಟಿ ಗಳಿಸದೇ ಮೊದಲ ವೀಕೇಂಡ್ ದಾಟಿದ 'ಲಾಲ್ ಸಿಂಗ್ ಚಡ್ಡ'!

    ಆದರೆ ಈ ಸುದ್ದಿಯನ್ನು ಸಿನಿಮಾದ ನಿರ್ಮಾಣ ಸಂಸ್ಥೆ ವೈಯೋಕಾಮ್ 18 ತಳ್ಳಿ ಹಾಕಿದೆ. 'ಲಾಲ್ ಸಿಂಗ್ ಚಡ್ಡ' ಸಿನಿಮಾವನ್ನು ಆಮಿರ್ ಖಾನ್ ಜೊತೆಗೆ ವೈಯೋಕಾಮ್ 18 ಸ್ಟುಡಿಯೋಸ್ ಜೊತೆ ಸೇರಿ ನಿರ್ಮಾಣ ಮಾಡಿದೆ. ಅಲ್ಲದೆ ಸಿನಿಮಾವನ್ನು ದೇಶದಾದ್ಯಂತ ವಿತರಣೆ ಮಾಡಿರುವುದು ಸಹ ವೈಯೋಕಾಮ್ 18 ಸ್ಟುಡಿಯೋಸ್ ಆಗಿದೆ.

    ನಾವೇ ವಿತರಣೆ ಮಾಡಿದ್ದೇವೆ: ವೈಯೋಕಾಮ್ 18

    ನಾವೇ ವಿತರಣೆ ಮಾಡಿದ್ದೇವೆ: ವೈಯೋಕಾಮ್ 18

    ಸಿನಿಮಾದಿಂದ ವಿತರಕರು ನಷ್ಟ ಹೋಗಿರುವ ಬಗ್ಗೆ ಹಾಗೂ ಆಮಿರ್ ಖಾನ್ ವಿರುದ್ಧ ಒತ್ತಡ ಹೇರುತ್ತಿರುವ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ 'ವೈಯೊಕಾಮ್ 18 ಸ್ಟುಡಿಯೋಸ್'ನ ಸಿಇಓ ಅಜಿತ್ ಅಂಧಾರೆ, ''ಈ ಸಿನಿಮಾಕ್ಕೆ ಹೊರಗಿನ ಯಾವುದೇ ವಿತರಕರು ಇಲ್ಲ. ಈ ಸಿನಿಮಾವನ್ನು ಭಾರತ ಹಾಗೂ ವಿದೇಶದಲ್ಲಿ ವೈಯೋಕಾಮ್ 18 ಸ್ಟುಡಿಯೋಸ್‌ನವರೇ ವಿತರಣೆ ಮಾಡಿದ್ದಾರೆ. ಹಾಗಾಗಿ ವಿತರಕರು ಹಣ ವಾಪಸ್ಸಾತಿಗೆ ಒತ್ತಾಯಿಸುತ್ತಿದ್ದಾರೆ ಎಂಬುದು ಸುಳ್ಳು'' ಎಂದಿದ್ದಾರೆ.

    50 ಕೋಟಿ ಗಳಿಸದೇ ಮೊದಲ ವೀಕೇಂಡ್ ದಾಟಿದ 'ಲಾಲ್ ಸಿಂಗ್ ಚಡ್ಡ'!50 ಕೋಟಿ ಗಳಿಸದೇ ಮೊದಲ ವೀಕೇಂಡ್ ದಾಟಿದ 'ಲಾಲ್ ಸಿಂಗ್ ಚಡ್ಡ'!

    ಹೊರಗಿನ ವಿತರಕರಿಗೆ ಸಿನಿಮಾ ನೀಡುವುದಿಲ್ಲ

    ಹೊರಗಿನ ವಿತರಕರಿಗೆ ಸಿನಿಮಾ ನೀಡುವುದಿಲ್ಲ

    ಬಹುತೇಕ ದೊಡ್ಡ ಸ್ಟುಡಿಯೋಗಳು ಅದರದ್ದೇ ಆದ ವಿತರಣೆ ನೆಟ್‌ವರ್ಕ್ ಹೊಂದಿರುತ್ತವೆ. ಹೊರಗಿನ ವಿತರಕರಿಗೆ ಅದು ಸಿನಿಮಾ ನೀಡುವುದಿಲ್ಲ. ಕೊಟ್ಟರೂ ಬಹಳ ಕಡಿಮೆ ಸಂಖ್ಯೆಯ ಉಪ ವಿತರಕರಿಗೆ ಸಿನಿಮಾ ನೀಡುತ್ತಾರೆ. ಅದೂ ಪಟ್ಟಣ ಪ್ರದೇಶಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಎಂದಿರುವ ಹಿಂದಿ ಸಿನಿಮಾಗಳ ಜನಪ್ರಿಯ ವಿತರಕರೊಬ್ಬರು, ನಾವು ಸ್ಟುಡಿಯೋಗಳ ಬಳಿ ವಿತರಣೆಗೆ ಕೇಳಿದರೂ ಅವರು ಬಹಳ ದುಬಾರಿ ಮೊತ್ತ ಹೇಳುತ್ತಾರೆ ಎಂದಿದ್ದಾರೆ. ಬಾಲಿವುಡ್‌ನ ಜನಪ್ರಿಯ ಪತ್ರಿಕೆಯೊಂದಕ್ಕೆ ಅವರು ಹೇಳಿಕೆ ನೀಡಿದ್ದಾರೆ.

    ಯಾವುದೇ ಸಿನಿಮಾಕ್ಕೆ ಸಂಭಾವನೆ ಪಡೆದಿಲ್ಲ

    ಯಾವುದೇ ಸಿನಿಮಾಕ್ಕೆ ಸಂಭಾವನೆ ಪಡೆದಿಲ್ಲ

    ಮತ್ತೊಂದು ಮೂಲದ ಪ್ರಕಾರ, ಕಳೆದ ಹತ್ತು ವರ್ಷದಿಂದ ಆಮಿರ್ ಖಾನ್ ತಮ್ಮ ಯಾವುದೇ ಸಿನಿಮಾಕ್ಕೆ ಸಂಭಾವನೆ ಪಡೆದಿಲ್ಲ ಬದಲಿಗೆ ಲಾಭಾಂಶ ಮಾತ್ರವನ್ನೇ ಪಡೆದುಕೊಂಡಿದ್ದಾರೆ. ಒಂದೊಮ್ಮೆ ಸಿನಿಮಾ ನಷ್ಟವಾದರೂ ವಿತರಕರು, ನಿರ್ಮಾಪಕರು ಹೆಚ್ಚು ಭಾರವಾಗುವುದಿಲ್ಲ, ನಿರ್ಮಾಪಕರು, ವಿತರಕರಿಗೆ ಆಗುವ ನಷ್ಟದಲ್ಲಿ ಆಮಿರ್ ಖಾನ್ ಅವರದ್ದೂ ಪಾಲಿರುತ್ತದೆ. ಸಿನಿಮಾ ಗೆದ್ದರೆ ಆ ಸಿನಿಮಾದ ಲಾಭಾಂಶದಲ್ಲಿ ಪಾಲು ತೆಗೆದುಕೊಳ್ಳುತ್ತಾರೆ. ಹಾಗಾಗಿ ಸಿನಿಮಾ ವಿತರಕರು ಆಮಿರ್ ಖಾನ್‌ ಮೇಲೆ ಒತ್ತಡ ಹೇರುವುದಿಲ್ಲ ಎನ್ನಲಾಗಿದೆ.

    ನಷ್ಟ ಆಗಿಲ್ಲ ಎಂದ ವೈಯೋಕಾಮ್ 18

    ನಷ್ಟ ಆಗಿಲ್ಲ ಎಂದ ವೈಯೋಕಾಮ್ 18

    ಇನ್ನು ವೈಯೋಕಾಮ್ 18 ಹೇಳಿರುವಂತೆ. ಆ ಸಂಸ್ಥೆಯು 'ಲಾಲ್ ಸಿಂಗ್ ಚಡ್ಡ' ಸಿನಿಮಾದಿಂದ ಯಾವುದೇ ನಷ್ಟ ಅನುಭವಿಸಿಲ್ಲವಂತೆ. ಸಿನಿಮಾ ಚೆನ್ನಾಗಿಯೇ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಿಡುಗಡೆ ಆಗಿ ಕೇವಲ ನಾಲ್ಕು ದಿನವಷ್ಟೆ ಆಗಿದೆ. ಸಿನಿಮಾದ ಶೆಲ್ಫ್ ಲೈಫ್ ಇನ್ನೂ ಸಾಕಷ್ಟು ದಿನವಿದೆ. ಅಲ್ಲದೆ ಈಗಾಗಲೇ ಸಿನಿಮಾವು ಹಣ ತಂದುಕೊಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ. ಸಿನಿಮಾ ಇನ್ನೂ ಚಿತ್ರಮಂದಿರಗಳಲ್ಲಿರುವಾಗಿ ಸಿನಿಮಾ ಸೋತಿತು ಎನ್ನಲಾಗದು ಎಂದಿದ್ದಾರೆ.

    English summary
    Production and Distribution company Viacom 18 clarifies that no movie distributor occur loss due to Laal Singh Chaddha movie.
    Monday, August 15, 2022, 22:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X