ಸಲ್ಮಾನ್ ಮತ್ತು ರಣ್ವೀರ್ ಇಬ್ಬರು ಇಲ್ಲ...ಧೂಮ್ 4 ಚಿತ್ರಕ್ಕೆ ಈ ನಟ ಪಕ್ಕಾ!

ಜಾನ್ ಅಬ್ರಾಹಂ, ಹೃತಿಕ್ ರೋಷನ್, ಅಮೀರ್ ಖಾನ್ ಧೂಮ್ ಸರಣಿಯ ಮೊದಲ ಮೂರು ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿದ್ದರು. ಇದೀಗ, ಧೂಮ್ ಪ್ರಾಂಚೈಸಿ ಚಿತ್ರದ ನಾಲ್ಕನೇ ಭಾಗವನ್ನು ತಯಾರಿಸಲು ಮುಂದಾಗಿದ್ದು, ಈ ಸಲ ಯಾರು ವಿಲನ್ ಆಗ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಇದುವರೆಗೂ ಮೂರ್ನಾಲ್ಕು ಸ್ಟಾರ್ ನಟರ ಹೆಸರು ಧೂಮ್ 4 ಚಿತ್ರದಲ್ಲಿ ಬಂದು ಹೋಗಿದೆ. ಆದರೆ ಯಾವ ಹೆಸರು ಅಂತಿಮವಾಗಿಲ್ಲ. ಸಲ್ಮಾನ್ ಖಾನ್ ನಟಿಸುತ್ತಾರೆ ಎನ್ನಲಾಗಿತ್ತು. ಆಮೇಲೆ ರಣ್ವೀರ್ ಸಿಂಗ್ ನಟಿಸುಬಹುದು ಎನ್ನಲಾಯಿತು.

ಈ ಇಬ್ಬರು ನಟಿಸುತ್ತಿಲ್ಲ ಎಂಬ ಸುದ್ದಿ ಈಗ ಹೊರಬಿದ್ದಿದ್ದು, ಬಾಲಿವುಡ್ ನ ಮತ್ತೊಬ್ಬ ನಟನ ಹೆಸರು ಕೇಳಿ ಬಂದಿದೆ. ಹಿಂದಿ ಚಿತ್ರರಂಗದ ಖ್ಯಾತ ವಿಶ್ಲೇಷಕ ಅತುಲ್ ಮೋಹನ್ ಟ್ವೀಟ್ ಮಾಡಿರುವ ಪ್ರಕಾರ, ಅಕ್ಷಯ್ ಕುಮಾರ್ ಧೂಮ್ ಸರಣಿಗೆ ಎಂಟ್ರಿಯಾಗಿದ್ದಾರಂತೆ. ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ ಎಂದಿದ್ದಾರೆ.

No Salman Khan and Ranveer Singh In Dhoom 4

ಅಂದ್ಹಾಗೆ, ಧೂಮ್ ಸರಣಿಯಲ್ಲಿ ಅಕ್ಷಯ್ ಕುಮಾರ್ ಅವರ ಹೆಸರು ಕೇಳಿ ಬಂದಿರುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆ ಈ ಸುದ್ದಿ ವರದಿಯಾಗಿತ್ತು. ಆ ಬಗ್ಗೆ ಸ್ಪಷ್ಟನೆ ನೀಡಿದ್ದ ನಿರ್ಮಾಣ ಸಂಸ್ಥೆ ''ಧೂಮ್ ಸರಣಿ ನಮಗೆ ಬಹಳ ಮುಖ್ಯವಾದದು. ಸದ್ಯಕ್ಕೆ ನಾವು ನಾಲ್ಕನೇ ಭಾಗದ ಬಗ್ಗೆ ನಿರ್ಧಾರ ಮಾಡಿಲ್ಲ. ಅಕ್ಷಯ್ ಕುಮಾರ್ ನಟಿಸುತ್ತಾರೆ ಎನ್ನುವುದು ಸುಳ್ಳು' ಎಂದಿದ್ದರು.

ಆದ್ರೀಗ, ಈ ಸುದ್ದಿ ಮತ್ತೆ ಸದ್ದು ಮಾಡ್ತಿದೆ. ಇನ್ನುಳಿದಂತೆ ಅಭಿಷೇಕ್ ಬಚ್ಚನ್ ಮತ್ತು ಉದಯ್ ಚೋಪ್ರಾ ಈ ಚಿತ್ರಗಳಲ್ಲಿ ಇರಲಿದ್ದಾರೆ. ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್ ನಾಯಕಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

More from Filmibeat

English summary
As per source salman khan and ranveer singh out from dhoom 4. now akshay kumar name in list. but waiting for official announcement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X