Don't Miss!
- News
BBC Documentary Screening: ದೆಹಲಿಯಲ್ಲಿ ಪ್ರತಿಭಟನೆಯ ಬೆನ್ನಲ್ಲೆ ಸಮಿತಿ ರಚನೆ!
- Technology
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- Automobiles
ಭಾರತದಲ್ಲಿ ಹೊಸ ಅಧ್ಯಾಯ ಬರೆಯಲು ಸಿದ್ಧವಾಗಿವೆ ಮಾರುತಿ ಸುಜುಕಿ ಕಾರುಗಳು
- Sports
ಮತ್ತೊಮ್ಮೆ ನಮಗೆ ಆತನೇ ಬಲು ದೊಡ್ಡ ಕಂಟಕ: ಭಾರತೀಯ ಆಟಗಾರನ ಬಗ್ಗೆ ಆಸಿಸ್ ಕ್ರಿಕೆಟಿಗನ ಆತಂಕ!
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸುಶಾಂತ್ ಸಿಂಗ್ ಸಾವನ್ನಪ್ಪಿದ ಮನೆಯಲ್ಲಿ ವಾಸಿಸೋಕೆ ಜನರೇ ಬರ್ತಿಲ್ಲ: ಮುಂಬೈನ ಆ ಮನೆ ಈಗ ಏನಾಗಿದೆ?
ರಫೀಕ್ ಮರ್ಚೆಂಟ್ ಮುಂಬೈನಲ್ಲಿ ಬಾಡಿಗೆಮನೆಯ ಬ್ರೋಕರ್. ಆತ ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಸೀ ಫೇಸಿಂಗ್ ಅಪಾರ್ಟ್ಮೆಂಟ್ ಒಂದರ ಕೆಲವು ಫೋಟೋಗಳನ್ನು ಹಾಕಿ 'ಮನೆ ಬಾಡಿಗೆಗೆ ದೊರೆಯುತ್ತದೆ' ಎಂದು ವಿವರಗಳನ್ನು ಪೋಸ್ಟ್ ಮಾಡಿದ್ರು.
4 ಬೆಡ್ರೂಮಿನ ಡೂಪ್ಲೆಕ್ಸ್ ಅಪಾರ್ಟ್ಮೆಂಟ್, ಜೊತೆಗೊಂದು ಟೆರೇಸ್ ಇರುವ ಈ ಮನೆಗೆ ತಿಂಗಳಿಗೆ 5 ಲಕ್ಷ ರೂಪಾಯಿ ಬಾಡಿಗೆ. ಇದು ಪ್ರತಿಷ್ಟಿತ ಬಾಂದ್ರಾ ಪ್ರದೇಶದ ಕಾರ್ಟರ್ ರಸ್ತೆಯಲ್ಲಿದೆ ಎನ್ನುವ ವಿವರದ ಜೊತೆಗೆ ರಫೀಕ್ ಫೋನ್ ನಂಬರ್ ಕೂಡಾ ಇತ್ತು. ಅಷ್ಟಕ್ಕೂ ಆ ಮನೆಗೆ ಯಾಕೆ ಯಾರೂ ಬರುತ್ತಿಲ್ಲ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
ಹೊಸ
ಹುಡುಗನ
ಜೊತೆ
ಸುಶಾಂತ್
ಸಿಂಗ್
ಮಾಜಿ
ಗೆಳತಿ
ರಿಯಾ
ಚಕ್ರವರ್ತಿ

ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಮನೆ!
ನೋಡೋಕೆ ಇಷ್ಟೊಂದು ಸುಂದರವಾದ ಮನೆಯಲ್ಲೇ ಎರಡೂವರೆ ವರ್ಷದ ಹಿಂದೆ ಘೋರ ಅನಾಹುತವೊಂದು ನಡೆದಿದ್ದು ಇನ್ನೂ ಜನರ ಮನಸ್ಸಿನಿಂದ ಪೂರ್ತಿಯಾಗಿ ಅಳಿಸಿಹೋಗಿಲ್ಲ. ಬಾಲಿವುಡ್ನ ಪ್ರತಿಭಾನ್ವಿತ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಇದೇ ಮನೆಯಲ್ಲಿ ಜೂನ್ 14, 2020ರಂದು ಆತ್ಮಹತ್ಯೆ ಮಾಡಿಕೊಂಡಿದ್ರು. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿ ಎರಡೂವರೆ ವರ್ಷ ಕಳೆದಿದೆ. ಆದ್ರೆ ಯಾಕೋ ಆತ ಉಸಿರು ಚೆಲ್ಲಿದ ಮನೆಗೆ ಮಾತ್ರ ಸೂತಕ ಕಳೆದಂತಿಲ್ಲ. ವಿಷಯ ಇಷ್ಟೇ - ಸುಶಾಂತ್ ಸಿಂಗ್ ರಜಪೂತ್ ವಾಸಿಸುತ್ತಿದ್ದ, ನಂತರ ಸಾವನ್ನಪ್ಪಿದ್ದ ಮುಂಬೈನ ಮನೆಗೆ ಯಾರೂ ಬಾಡಿಗೆಗೆ ಬರ್ತಾ ಇಲ್ಲ. ಇದ್ರಿಂದ ಆ ಮನೆಯ ಮಾಲೀಕರು ಮತ್ತು ಅದಕ್ಕೆ ಬಾಡಿಗೆದಾರರನ್ನು ಹುಡುಕುತ್ತಿರುವ ಬ್ರೋಕರ್ ಇಬ್ಬರೂ ಹೈರಾಣಾಗಿದ್ದಾರೆ.

ಗೆಳತಿ ಜೊತೆ ಕಾಲ ಕಳೆದ ಮನೆ ಇದೇನೆ
ಆದ್ರೆ ಅದಕ್ಕೂ ಮುಂಚೆ ಇದೇ ಮನೆಯಲ್ಲಿ ಡಿಸೆಂಬರ್ 2019ರಿಂದ ತಮ್ಮ ಗೆಳತಿ ರಿಯಾ ಚಕ್ರವರ್ತಿ ಮತ್ತು ಕೆಲ ಸ್ನೇಹಿತರ ಜೊತೆ ವಾಸಿಸುತ್ತಿದ್ರು. ಇದೇ ಬಾಲ್ಕನಿಯಲ್ಲಿ ಅವರ ನೆಚ್ಚಿನ ಟೆಲಿಸ್ಕೋಪ್ ಇತ್ತು, ಇಲ್ಲಿಂದಲೇ ಅಸಂಖ್ಯಾತ ತಾರೆಗಳನ್ನು ಗುರುತಿಸಿ ಖುಷಿಪಡುತ್ತಿದ್ದ ಸುಶಾಂತ್ ಕೊನೆಗೆ ಇದೇ ಮನೆಯಲ್ಲಿ ಇಹಲೋಕಕ್ಕೆ ವಿದಾಯ ಹೇಳಿದ್ದು ನಿಜಕ್ಕೂ ದುರಂತವೇ. ಆದ್ರೆ ಇದ್ಯಾವುದನ್ನೂ ಮನೆಯ ಮಾಲೀಕರಾಗಲಿ, ಬ್ರೋಕರ್ ರಫೀಕ್ ಆಗಲಿ, ಜನರಿಂದ ಮುಚ್ಚಿಡ್ತಾ ಇಲ್ಲ. ಮನೆಯ ಬಗ್ಗೆ ಆಸಕ್ತಿ ತೋರಿಸೋ ಎಲ್ರಿಗೂ ಈ ಮನೆಯಲ್ಲಿ ಸುಶಾಂತ್ ಸಿಂಗ್ ರಜಪೂತ್ ವಾಸಿಸುತ್ತಿದ್ರು ಮತ್ತು ಅವರು ಇಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ರು ಎನ್ನುವುದನ್ನು ತಪ್ಪದೇ ಹೇಳುತ್ತಿದ್ದಾರಂತೆ.

ಸುಶಾಂತ್ ಕೊಡುತ್ತಿದ್ದ ಬಾಡಿಗೆ ಎಷ್ಟು?
ಸುಶಾಂತ್ ಈ ಮನೆಯಲ್ಲಿ ವಾಸಿಸುತ್ತಿದ್ದಾಗ ತಿಂಗಳಿಗೆ ನಾಲ್ಕೂವರೆ ಲಕ್ಷ ರೂಪಾಯಿ ಬಾಡಿಗೆ ನೀಡ್ತಾ ಇದ್ರಂತೆ. ಈಗ ಇದರ ಬಾಡಿಗೆ 5 ಲಕ್ಷ ರೂಪಾಯಿಗೆ ಏರಿದೆ. ಅಲ್ಲದೇ ಸುಶಾಂತ್ ಆತ್ಮಹತ್ಯೆ ಪ್ರಕರಣದ ನಂತರ ಯಾವುದೇ ಕಾರಣಕ್ಕೂ ಈ ಮನೆಯನ್ನು ಸಿನಿಮಾ ಮಂದಿಗೆ ಕೊಡುವುದೇ ಬೇಡ ಎಂದು ಮಾಲೀಕರು ಖಡಾಖಂಡಿತವಾಗಿ ಹೇಳಿಬಿಟ್ಟಿದ್ದಾರೆ ಎಂದು ಬ್ರೋಕರ್ ರಫೀಕ್ ಬಾಲಿವುಡ್ ಹಂಗಾಮಾಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

'ಸಿನಿಮಾ ಮಂದಿಗೆ ಮನೆ ಕೊಡೋದಿಲ್ಲ'
"ಮೊದಲೆಲ್ಲಾ ಮನೆ ಡೀಟೆಲ್ಸ್ ಹೇಳಿದ ನಂತರ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ವಿಚಾರ ಹೇಳುತ್ತಿದ್ದಂತೆ ಜನ ಮನೆ ನೋಡೋಕೇ ಬರ್ತಿರ್ಲಿಲ್ಲ. ಆದ್ರೆ ಈಗ ಈ ವಿಚಾರ ಸ್ವಲ್ಪ ಹಳೆಯದಾಯ್ತಲ್ಲಾ? ಹಾಗಾಗಿ ಕೆಲವರು ಬಂದು ನೋಡಿಕೊಂಡು ಹೋಗ್ತಿದ್ದಾರೆ. ಇನ್ನು ಕೆಲವರಿಗೆ ಈ ಮನೆಗೆ ಬರೋಕೆ ಇಷ್ಟ ಇದ್ರೂ ಅವರ ಮನೆಯವರು, ಸ್ನೇಹಿತರು ಅವ್ರನ್ನ ತಡೆಯುತ್ತಿದ್ದಾರೆ. ಮಾರ್ಕೆಟ್ ನಲ್ಲಿ ಈಗ ಇರುವ ಬೆಲೆಯನ್ನೇ ಇದಕ್ಕೆ ಇಟ್ಟಿರೋದ್ರಿಂದ ಅಷ್ಟಾಗಿ ಯಾರೂ ಬರ್ತಿಲ್ಲ. ಒಂದು ವೇಳೆ ಬೆಲೆ ಸ್ವಲ್ಪ ಕಡಿಮೆ ಮಾಡಿದ್ರೆ ಕೂಡ್ಲೇ ಸೋಲ್ಡ್ ಔಟ್ ಆಗ್ಬಿಡುತ್ತೆ. ಆದ್ರೆ ಅದಕ್ಕೆ ಮಾಲೀಕರು ಒಪ್ತಾ ಇಲ್ಲ. ಯಾವುದೇ ಕಾರಣಕ್ಕೂ ಸಿನಿಮಾ ಮಂದಿಗೆ ಮಾತ್ರ ಈ ಮನೆ ಕೊಡೋದೇ ಬೇಡ ಅಂತ ಖಡಾಖಂಡಿತವಾಗಿ ಹೇಳಿಬಿಟ್ಟಿದ್ದಾರೆ. ಎಲ್ರಿಗೂ ನಾವು ಇದು ಸುಶಾಂತ್ ಸಿಂಗ್ ಇದ್ದ ಮನೆ ಎಂದು ಮೊದಲೇ ಹೇಳುತ್ತಿದ್ದೇವೆ. ಎರಡೂವರೆ ವರ್ಷದಿಂದ ಈ ಮನೆ ಖಾಲಿ ಇದೆ." ಎಂದು ಮನೆಯ ಬ್ರೋಕರ್ ರಫೀಕ್ ತಿಳಿಸಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿದ್ದು ಕೇವಲ ಬಾಲಿವುಡ್, ಅವರ ಕುಟುಂಬ ಮಾತ್ರವಲ್ಲ ಒಂದು ರೀತಿಯಲ್ಲಿ ಬಾಡಿಗೆ ಮನೆಯ ಮಾಲೀಕರಿಗೂ ನಷ್ಟವೇ ಆದಂತಿದೆ.