For Quick Alerts
  ALLOW NOTIFICATIONS  
  For Daily Alerts

  ಸಂಗೀತ ಮಾಂತ್ರಿಕ ರೆಹಮಾನ್ ಹೆಸರಲ್ಲಿ ರಸ್ತೆ

  By ಜೇಮ್ಸ್ ಮಾರ್ಟಿನ್
  |

  ಭಾರತದ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಅವರ ಹೆಸರನ್ನು ರಸ್ತೆಯೊಂದಕ್ಕೆ ಇಟ್ಟು ಗೌರವ ಸೂಚಿಸಲಾಗಿದೆ. ಕೆನಡಾದ ಡೌನ್ ಟೌನ್ ಸಮೀಪದ ಮಾರ್ಕ್ ಹ್ಯಾಂ ಒಂಟಾರಿಯೋದಲ್ಲಿನ ರಸ್ತೆಗೆ ರೆಹಮಾನ್ ಹೆಸರಿಡಲಾಗಿದೆಯಂತೆ.

  ಈ ವಿಷಯವನ್ನು ಖುದ್ದು ರೆಹಮಾನ್ ಅವರು ಪ್ರಕಟಿಸಿದ್ದು, ತಮ್ಮ ಅಧಿಕೃತ ಫೇಸ್ ಬುಕ್ ಪುಟದಲ್ಲಿ Allah-Rakha Rahman Street ಎಂದು ಬರೆದಿರುವ ರಸ್ತೆ ಫಲಕವನ್ನು ಹಿಡಿದುಕೊಂಡಿರುವ ಚಿತ್ರವನ್ನು ಹಾಕಿಕೊಂಡಿದ್ದಾರೆ. 'ನನ್ನ ಹೆಸರಿನ ರಸ್ತೆಗೆ ಸ್ವಾಗತ' ಎಂದು ರೆಹಮಾನ್ ಹೇಳಿಕೊಂಡಿದ್ದು ಈ ಚಿತ್ರ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದ್ದು, ಅಭಿಮಾನಿಗಳು ರೆಹಮಾನ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.

  ಮೊಜಾರ್ಟ್ ಆಫ್ ಮದ್ರಾಸ್ ಎಂದು ಕರೆಯಲ್ಪಡುವ ರೆಹಮಾನ್ ಅವರು ಕೆನಡಾದಲ್ಲಿ ಇಂಡಿಯನ್ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ಆಫ್ ಟೊರೊಂಟೋ(IIFFT) ಆಯೋಜನೆಯ ಕಾರ್ಯಕ್ರಮಕ್ಕೆ ಬಂದಿದ್ದಾರೆ.

  ಸ್ಥಳೀಯ ಅಡಳಿತ ರೆಹಮಾನ್ ಗೌರವಾರ್ಥ ರಸ್ತೆಗೆ ನಾಮಕರಣ ಮಾಡಿದ್ದಾರಲ್ಲದೆ ರೆಹಮಾನ್ ಭಾವಚಿತ್ರವುಳ್ಳ ಸ್ಟಾಂಪ್ ಕೂಡಾ ಹೊರತಂದಿದ್ದಾರೆ. ಭಾರತೀಯ ಚಿತ್ರರಂಗ 100 ವರ್ಷ ಪೂರೈಸಿರುವ ಸಂಭ್ರಮವನ್ನು ಕೆನಡಾದಲ್ಲಿ IIFFT ಆಚರಿಸುತ್ತಿದೆ. ರೆಹಮಾನ್ ರನ್ನು ವಿಶ್ವಶಾಂತಿಯ ಹರಿಕಾರ ಎಂದು ಹೊಗಳಿರುವ ಆಯೋಜಕರು ಇದು ನಾವು ಸಂಗೀತ ಮಾಂತ್ರಿಕನಿಗೆ ನೀಡುತ್ತಿರುವ ಪುಟ್ಟ ಕಾಣಿಕೆ ಎಂದಿದ್ದಾರೆ.

  47 ವರ್ಷದ ಸಂಗೀತಜ್ಞ ರೆಹಮಾನ್ ಅವರಿಗೆ ಅಕಾಡೆಮಿ ಪ್ರಶಸ್ತಿ, ಗ್ರಾಮಿ ಪ್ರಶಸ್ತಿ, ಬಾಫ್ತಾ ಪ್ರಶಸ್ತಿ, ಗೋಲ್ಡನ್ ಗ್ಲೋಬ್, 4 ರಾಷ್ಟ್ರ ಪ್ರಶಸ್ತಿ, 13 ಫಿಲಂಫೇರ್ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಜತೆಗೆ ಮಾರಿಷಸ್, ಮಲೇಷಿಯಾ ದೇಶಗಳ ಪ್ರಶಸ್ತಿ ಸಿಕ್ಕಿದೆ. ಎಂಟಿವಿ, ಯುಕೆ ಏಷ್ಯನ್ ಸಂಗೀತ ಪ್ರಶಸ್ತಿ, 2009ರಲ್ಲಿ ಟೈಮ್ಸ್ ಮ್ಯಾಗಜೀನ್ ನಲ್ಲಿ ಕಾಣಿಸಿಕೊಂಡಿದ್ದರು.ರೆಹಮಾನ್ ಸಂಯೋಜನೆಯ ಏರ್ ಟೆಲ್ ಸಿಗ್ನೇಚರ್ ಟ್ಯೂನ್ ಅತಿ ಹೆಚ್ಚು ಡೌನ್ ಲೋಡ್ ಆದ ಟ್ಯೂನ್ ಎನಿಸಿದೆ.

  English summary
  Oscar winning music composer A.R. Rahman got a street named after him in Markham, Canada, close to downtown Toronto. A R Rahman posted a a picture on Facebook holding a sign board which reads 'Allah-Rakha Rahman st'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X