For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಿನಲ್ಲಿ 'ಪದ್ಮಾವತ್' ಚಿತ್ರದ 1 ಟಿಕೆಟ್ ಗೆ 1 ಸಾವಿರ ರೂಪಾಯಿ !

  By Naveen
  |

  ಇಡೀ ದೇಶದಲ್ಲಿಯೇ ದೊಡ್ಡ ವಿವಾದ ಹುಟ್ಟು ಹಾಕಿದ್ದ ಬಾಲಿವುಡ್ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ 'ಪದ್ಮಾವತ್' ಇದೇ ಗುರುವಾರ ರಿಲೀಸ್ ಆಗುತ್ತಿದೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿರುವ ಈ ಸಿನಿಮಾದಲ್ಲಿ ಅಂತದ್ದು ಏನೈತಿ ಎನ್ನುವ ನಿರೀಕ್ಷೆ ಎಲ್ಲರಲ್ಲಿಯೂ ಇದೆ.

  ದೀಪಿಕಾ ಪಡುಕೋಣೆ ಅಭಿನಯದ ಈ ಸಿನಿಮಾಗೆ ಬೆಂಗಳೂರಿನಲ್ಲಿಯೂ ಕ್ರೇಜ್ ಜೋರಾಗಿದೆ. ಎಲ್ಲ ಭಾಷೆಯ ಒಳ್ಳೆಯ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸುವ ಇಲ್ಲಿನ ಪ್ರೇಕ್ಷಕರು ಈ ಚಿತ್ರವನ್ನು ನೋಡಲು ಕಾತುರರಾಗಿದ್ದಾರೆ. 'ಪದ್ಮಾವತ್' ಚಿತ್ರಕ್ಕೆ ಇರುವ ಡಿಮ್ಯಾಂಡ್ ನೋಡಿ ಮಲ್ಟಿಪ್ಲೆಕ್ಸ್ ನಲ್ಲಿ ಟಿಕೆಟ್ ದರವನ್ನು ಸಿಕ್ಕಾಪಟ್ಟೆ ಏರಿಕೆ ಮಾಡಲಾಗಿದೆ. ಗುರುವಾರ ಬಿಡುಗಡೆಯಾಗುವ ಈ ಚಿತ್ರದ ವಿಶೇಷ ಪ್ರದರ್ಶನಗಳನ್ನು ನಾಳೆಯೇ ಮಾಡಲಾಗುತ್ತಿದೆ. ಬೆಂಗಳೂರಿನ ಜನತೆ ಒಂದು ದಿನ ಮುಂಚಿತವಾಗಿ 'ಪದ್ಮಾವತ್' ದರ್ಶನ ಪಡೆಯಬಹುದಾಗಿದೆ. ಮುಂದೆ ಓದಿ...

  ನಾಳೆ ಸಂಜೆ 5.30ಕ್ಕೆ ಮೊದಲ ಶೋ

  ನಾಳೆ ಸಂಜೆ 5.30ಕ್ಕೆ ಮೊದಲ ಶೋ

  'ಪದ್ಮಾವತ್' ಚಿತ್ರ ಜನವರಿ 25ಕ್ಕೆ ರಿಲೀಸ್ ಆಗಬೇಕಾಗಿತ್ತು. ಆದರೆ ಬೆಂಗಳೂರಿನ 50ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ನಾಳೆ ಸಂಜೆಯೇ ಪ್ರದರ್ಶನ ಶುರು ಆಗುತ್ತಿದೆ. ನಾಳೆ ಸಂಜೆ 5.30ಕ್ಕೆ ಚಿತ್ರದ ಮೊದಲ ಶೋ ಪ್ರಾರಂಭ ಆಗಲಿದೆ.

  1 ಟಿಕೆಟ್ ಗೆ 1 ಸಾವಿರ

  1 ಟಿಕೆಟ್ ಗೆ 1 ಸಾವಿರ

  ಬೆಂಗಳೂರಿನ ಮಲ್ಟಿಪ್ಲೆಕ್ಸ್ ಗಳ ಗೋಲ್ಡ್ ಕ್ಲಾಸ್ ನಲ್ಲಿ ಒಂದು ಟಿಕೆಟ್ ಗೆ ಒಂದು ಸಾವಿರ ರೂಪಾಯಿ ದರವನ್ನು ಫಿಕ್ಸ್ ಮಾಡಲಾಗಿದೆ. ಅನೇಕ ಚಿತ್ರಮಂದಿರಗಳಲ್ಲಿಯೂ ಟಿಕೆಟ್ ದರವನ್ನು ಡಬಲ್ ಮಾಡಿದ್ದಾರೆ.

  ದೊಡ್ಡ ಬೇಡಿಕೆ

  ದೊಡ್ಡ ಬೇಡಿಕೆ

  ಸಾವಿರ ರೂಪಾಯಿ ಇದ್ದರೂ ಕೂಡ 'ಪದ್ಮಾವತ್' ಟಿಕೆಟ್ ಡಿಮ್ಯಾಂಡ್ ಜೋರಾಗಿದೆ. 'ಬುಕ್ ಮೈ ಶೋ' ದಲ್ಲಿ ಚಿತ್ರದ ಟಿಕೆಟ್ ಗಳು ಬಿಸಿ ಬಿಸಿ ದೋಸೆಯಂತೆ ಮಾರಾಟ ಆಗುತ್ತಿದೆ.

  ಪದ್ಮಾವತಿ ಬದಲು ಪದ್ಮಾವತ್ ಆಗಿ ಬರಲಿದ್ದಾಳೆ ದೀಪಿಕಾ

  'ಪದ್ಮಾವತ್' V/S 'ಭಾಗಮತಿ'

  'ಪದ್ಮಾವತ್' V/S 'ಭಾಗಮತಿ'

  'ಪದ್ಮಾವತ್' ಚಿತ್ರದ ಜೊತೆಗೆ ಅನುಷ್ಕಾ ಶೆಟ್ಟಿ ನಟನೆಯ 'ಭಾಗಮತಿ' ಸಿನಿಮಾ ಕೂಡ ಚಿತ್ರಮಂದಿರಕ್ಕೆ ಬರಲು ರೆಡಿಯಾಗಿದೆ. ಈ ಸಿನಿಮಾ ಇದೇ ತಿಂಗಳ 26ಕ್ಕೆ ಅಂದರೆ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಈ ಎರಡು ಸಿನಿಮಾಗಳಿಗೂ ಒಂದೇ ಒಂದು ದಿನ ಗ್ಯಾಪ್ ಇದ್ದು, ಎರಡು ಚಿತ್ರಗಳ ನಡುವೆ ನೇರ ಪೈಪೋಟಿ ಶುರುವಾಗಿದೆ.

  ದೀಪಿಕಾ ಪಡುಕೋಣೆ ವಿರುದ್ಧ ಎದ್ದು ನಿಂತ ಅನುಷ್ಕಾ ಶೆಟ್ಟಿ !

  'ಪದ್ಮಾವತ್' ಚಿತ್ರದ ಬಗ್ಗೆ

  'ಪದ್ಮಾವತ್' ಚಿತ್ರದ ಬಗ್ಗೆ

  'ಪದ್ಮಾವತ್' ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ಸಂಜಯ್ ಲೀಲಾ ಬಸ್ಸಾಲಿ ಕಾಂಬಿನೇಶನ್ ನಲ್ಲಿ ಬರುತ್ತಿರುವ 3ನೇ ಸಿನಿಮಾಗಿದೆ. ಚಿತ್ರದಲ್ಲಿ ನಟ ರಣವೀರ್ ಸಿಂಗ್ ಹಾಗೂ ಶಾಹಿದ್ ಕಪೂರ್ ಕೂಡ ನಟಿಸಿದ್ದಾರೆ. ಎಲ್ಲ ಅಡೆ ತಡೆಗಳ ನಂತರ 'ಪದ್ಮಾವತಿ' ಚಿತ್ರ 'ಪದ್ಮಾವತ್' ಆಗಿ ತೆರೆಗೆ ಬರುತ್ತಿದೆ.

  English summary
  Actress Deepika Padukone, Ranveer Singh and Shahid Kapoor starring 'Padmavat' movie tickets has been priced at Rs 1000 in Bengaluru. The movie will be releasing on January 25.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X