»   » 'ಪದ್ಮಾವತಿ' ಸಿನಿಮಾ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ

'ಪದ್ಮಾವತಿ' ಸಿನಿಮಾ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ

Posted By:
Subscribe to Filmibeat Kannada

ಬಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾ 'ಪದ್ಮಾವತಿ' ಬಿಡುಗಡೆಗೆ ವಿರೋಧಿಸಿ ಶ್ರೀ ರಾಷ್ಟ್ರೀಯ ರಜಪೂತ್ ಕರಣಿ ಸೇನಾ ಕರ್ನಾಟಕ ಸಂಘಟನೆ ಹಾಗೂ ಹಿಂದೂ ಸಂಘಟನೆ ವತಿಯಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ಪ್ರಾರಂಭವಾಗಿದೆ.

ಭಾರತೀಯ ಇತಿಹಾಸವನ್ನ ತಿರುಚಿ 'ಪದ್ಮಾವತಿ' ಸಿನಿಮಾ ಮಾಡಲಾಗಿದೆ. ಹಿಂದೂ ಸಂಸ್ಕೃತಿಯ ಉಡುಗೆ ತೊಡುಗೆಯನ್ನ ಮತ್ತು ಅಂಗ ಪ್ರದರ್ಶನವನ್ನ ತಿರುಚಿ ತೋರಿಸಲಾಗಿದೆ. ಅಲ್ಲಾವುದ್ದೀನ್ ಖಿಲ್ಜಿ ಒಬ್ಬ ದಾಳಿಕೋರ, ಅಷ್ಟೇ ಯಾಕೆ ಅತ್ಯಾಚಾರಿ ಹಾಗೂ ವ್ಯಾಮೋಹಿ ಕೂಡ. ಇತನನ್ನ ಮುಖ್ಯ ನಾಯಕನನ್ನಾಗಿ ತೋರಿಸಿದ್ದಾರೆ. ಈ ಹಿನ್ನಲೆಯಲ್ಲಿ ಸಿನಿಮಾ ಬಿಡುಗಡೆ ಮಾಡಬಾರದೆಂದು ಪ್ರತಿಭಟನಾಕಾರರು ವಿರೋಧಿಸಿದ್ದಾರೆ.

 Padmavati bollywood movie in trouble

ಟೌನ್ ಹಾಲ್ ನಿಂದ ಪ್ರಾರಂಭವಾಗಿರುವ ಸ್ವಾಭಿಮಾನಿ ಯಾತ್ರೆ ಫ್ರೀಡಂ ಪಾರ್ಕ್ ವರೆಗೆ ನಡೆಯಲಿದೆ. ರಾಷ್ಟ್ರೀಯ ರಜಪೂತ್ ಕರಣಿ ಸೇನಾ ಅಧ್ಯಕ್ಷ ಸುಖದೇವ್ ಸಿಂಗ್ ಜೊತೆ 500ಕ್ಕೂ ಹೆಚ್ಷು ಜನ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಪದ್ಮಾವತಿ ರಾಣಿ ಯಾವತ್ತೂ ನೃತ್ಯ ಮಾಡಿರಲಿಲ್ಲ. ಕೇವಲ ಸಖಿಯರು ನೃತ್ಯ ಮಾಡೋದನ್ನ ಪರದೆ ಸರಿಸಿ ನೋಡುತ್ತಿದ್ರು. ರಾಣಿ ಪದ್ಮಾವತಿ ಅವತಾರದಲ್ಲಿ ನೃತ್ಯ ಮಾಡಿಸಿರೋದು ರಜಪೂತ ಸಮುದಾಯಕ್ಕೆ ಅವಮಾನ ಮಾಡುವಂತಿದೆ ಎಂದು ರಾಷ್ಟ್ರೀಯ ರಜಪೂತ್ ಕರಣಿ ಸೇನಾ ಅಧ್ಯಕ್ಷ ಸುಖದೇವ್ ಸಿಂಗ್ ಆರೋಪಿಸಿದ್ದಾರೆ.

 Padmavati bollywood movie in trouble

ಮೊದಲು ನಮಗೆ ಸಿನಿಮಾ ತೋರಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ಮಾಡುವುದಾಗಿ ತಿಳಿಸಿರೋ ಸಂಘಟನಾಕಾರರು, ಕರ್ನಾಟಕದಲ್ಲಿ ಈ ಸಿನಿಮಾ ರಿಲೀಸ್ ಆಗದಂತೆ ತಡೆಯಲು ಪ್ರತಿಭಟನೆ ಮಾಡುತ್ತಿದ್ದೇವೆ ಎಂದಿದ್ದಾರೆ. ಒಟ್ಟಾರೆ ಆರಂಭದಿಂದಲೂ 'ಪದ್ಮಾವತಿ' ಸಿನಿಮಾಗೆ ಒಂದಲ್ಲಾ ಒಂದು ತೊಂದರೆ ಆಗುತ್ತಲೇ ಇದೇ. ಡಿಸೆಂಬರ್ ಒಂದರಂದು ಸಿನಿಮಾ ದೇಶದಾದ್ಯಂತ ತೆರೆಗೆ ಬರಬೇಕಾಗಿದೆ. ಆದ್ರೆ ಪ್ರತಿಭಟನೆ ಹೀಗೆ ಮುಂದುವರೆದರೆ ಚಿತ್ರ ಬಿಡುಗಡೆಗೆ ಮತ್ತಷ್ಟು ಸಂಕಷ್ಟ ಎದುರಾಗುವುದು ಗ್ಯಾರೆಂಟಿ.

English summary
Bangalore Rajputs starts protest against Padmavati movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X