»   » ದೀಪಿಕಾ ಪಡುಕೋಣೆ 'ಪದ್ಮಾವತಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆ

ದೀಪಿಕಾ ಪಡುಕೋಣೆ 'ಪದ್ಮಾವತಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆ

Posted By:
Subscribe to Filmibeat Kannada

ಬಾಲಿವುಡ್ ನ ಬಹು ನಿರೀಕ್ಷಿತ 'ಪದ್ಮಾವತಿ' ಚಿತ್ರದ ಫಸ್ಟ್ ಲುಕ್ ಇದೀಗ ಬಿಡುಗಡೆಯಾಗಿದೆ. 'ಪದ್ಮಾವತಿ'ಯಾಗಿ ಕಾಣಿಸಿಕೊಂಡಿರುವ ದೀಪಿಕಾ ಪಡುಕೋಣೆ ಲುಕ್ ನೋಡಿ ಎಲ್ಲರೂ ಜೈಕಾರ ಹಾಕಿದ್ದಾರೆ.

'ಪದ್ಮಾವತಿ' ಚಿತ್ರದಲ್ಲಿ ದೀಪಿಕಾ ಹೇಗೆ ಕಾಣಿಸುತ್ತಾರೆ ಎಂಬುದು ಎಲ್ಲರ ಕುತೂಹಲವಾಗಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದ್ದು, ಅಂತು ಪ್ರೇಕ್ಷಕರಿಗೆ 'ಪದ್ಮಾವತಿ'ಯ ದರ್ಶನವಾಗಿದೆ. ಅಂದಹಾಗೆ, ನಟಿ ದೀಪಿಕಾ ಪಡುಕೋಣೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡಿದ್ದಾರೆ.

'Padmavati' movie first look released

ಬಾಲಿವುಡ್ ಚಿತ್ರರಂಗದ ಮ್ಯಾಜಿಕಲ್ ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿ ಅವರ ಕನಸಿನ ಸಿನಿಮಾ ಇದಾಗಿದೆ. 'ರಾಮ್ ಲೀಲಾ' ಮತ್ತು 'ಬಾಜೀರಾವ್ ಮಸ್ತಾನಿ' ಚಿತ್ರಗಳ ಬಳಿಕ ಮತ್ತೆ ಬನ್ಸಾಲಿ ದೀಪಿಕಾ ಜೋಡಿ ಒಂದಾಗಿದೆ.

'ಪದ್ಮಾವತಿ' ಸಿನಿಮಾ ರಾಣಿ ಪದ್ಮಾವತಿಯ ಕಥೆ ಆಗಿದೆ. ಚಿತ್ರದಲ್ಲಿ ಶಾಹಿದ್ ಕಪೂರ್ ಮತ್ತು ರಣ್ ವೀರ್ ಸಿಂಗ್ ನಟಿಸಿದ್ದಾರೆ. ಅದಿತಿ ರಾವ್ ಹೈದರಿ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

English summary
Actress Deepika Padukone's 'Padmavati' movie first look released. the movie directed by Sanjay Leela Bhansali.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada