For Quick Alerts
  ALLOW NOTIFICATIONS  
  For Daily Alerts

  ರಾಜ್ ಕಪೂರ್, ದಿಲೀಪ್ ಕುಮಾರ್ ಮನೆ ಖರೀದಿಗೆ ಮುಂದಾದ ಪಾಕ್ ಪ್ರಾಂಥೀಯ ಸರ್ಕಾರ

  |

  ಭಾರತೀಯ ಸಿನಿಮಾದ ದಿಗ್ಗಜರಾದ ರಾಜ್ ಕಪೂರ್ ಹಾಗು ದಿಲೀಪ್ ಕುಮಾರ್ ಅವರ ಮೂಲ ಮನೆಯನ್ನು ಖರೀದಿಸಲು ಪಾಕಿಸ್ತಾನದ ಕೈಬರ್ ಫಕ್ತುಂಖ್ವಾ ಪ್ರಾಥೀಯ ಸರ್ಕಾರ ಮುಂದಾಗಿದೆ.

  ಈ ಇಬ್ಬರು ದಿಗ್ಗಜರ ಮನೆಗಳು ಪೇಶಾವರ ನಗರದಲ್ಲಿವೆ. ರಾಷ್ಟ್ರೀಯ ಸ್ಮಾರಕವನ್ನಾಗಿ ಈ ಮನೆಗಳನ್ನು ಈಗಾಗಲೇ ಘೋಷಿಸಲಾಗಿದ್ದು, ಮನೆಗಳನ್ನು ಕೊಂಡುಕೊಳ್ಳಲು ಹಣ ಬಿಡುಗಡೆ ಮಾಡಲು ಪ್ರಾಂಥೀಯ ಸರ್ಕಾರ ನಿಶ್ಚಯಿಸಿದೆ.

  ಪೇಶಾವರದ ಕಿಸ್ಸಾ ಖಾನ್ವಿ ಬಜಾರ್‌ ನಲ್ಲಿರುವ ಕಪೂರ್ ಹವೇಲಿಯನ್ನು 1918-1922 ರ ಅವಧಿಯಲ್ಲಿ ಪಂಡಿತ ಬಸವೇಶ್ವರನಾಥ್ ಕಪೂರ್ ಅವರು ನಿರ್ಮಿಸಿದ್ದರು. ಇದೇ ಮನೆಯಲ್ಲಿ ರಾಜ್ ಕಪೂರ್ ಜನಿಸಿದ್ದರು ಮತ್ತು ಬಾಲ್ಯವನ್ನು ಇಲ್ಲಿಯೇ ಕಳೆದಿದ್ದರು.

  ದಿಲೀಪ್ ಕುಮಾರ್ ಮನೆ ಸಹ ಇಲ್ಲಿಯೇ ಇದೆ

  ದಿಲೀಪ್ ಕುಮಾರ್ ಮನೆ ಸಹ ಇಲ್ಲಿಯೇ ಇದೆ

  ಭಾರತೀಯ ಸಿನಿಮಾರಂಗದ ಮತ್ತೊಬ್ಬ ದಿಗ್ಗಜ ದಿಲೀಪ್ ಕುಮಾರ್ ಮನೆ ಸಹ ಇದೇ ಪ್ರದೇಶದಲ್ಲಿದೆ. ದಿಲೀಪ್ ಕುಮಾರ್ ಜನಿಸಿದ ಮನೆ ಅದಾಗಿದೆ. ಆ ಮನೆಗೆ 100 ವರ್ಷಕ್ಕೂ ಹಳೆಯ ಇತಿಹಾಸವಿದೆ. ಇವೆರಡನ್ನೂ ರಾಷ್ಟ್ರೀಯ ಸ್ಮಾರಕವಾಗಿ ಪಾಕ್ ಸರ್ಕಾರ ಘೋಷಿಸಿದೆ.

  200 ಕೋಟಿ ಬೇಡಿಕೆ ಇಟ್ಟಿರುವ ಈಗಿನ ಮಾಲೀಕ

  200 ಕೋಟಿ ಬೇಡಿಕೆ ಇಟ್ಟಿರುವ ಈಗಿನ ಮಾಲೀಕ

  ಕಪೂರ್ ಹವೇಲಿಯ ಈಗಿನ ಮಾಲೀಕರಾಗಿರುವ ಅಲಿ ಕ್ವಾದರ್, ಮನೆಯನ್ನು ಪಾಕ್ ಪ್ರಾಂಥೀಯ ಸರ್ಕಾರಕ್ಕೆ ಮಾರಲು ಒಪ್ಪಿದ್ದು, ಇದಕ್ಕಾಗಿ ಅವರು 200 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ.

  ದಿಲೀಪ್ ಕುಮಾರ್ ಮನೆಯನ್ನು ಕೆಡವಲು ಯತ್ನಿಸಲಾಗಿತ್ತು

  ದಿಲೀಪ್ ಕುಮಾರ್ ಮನೆಯನ್ನು ಕೆಡವಲು ಯತ್ನಿಸಲಾಗಿತ್ತು

  ದಿಲೀಪ್ ಕುಮಾರ್ ನಿವಾಸವನ್ನು ಕೆಡವಲು ಅದರ ಪ್ರಸ್ತುತ ಮಾಲೀಕರು ಹಲವು ಯತ್ನಗಳನ್ನು ಮಾಡಿದರು ಆದರೆ ಸರ್ಕಾರ ಅದಕ್ಕೆ ಅವಕಾಶ ನೀಡಲಿಲ್ಲ. ನ್ಯಾಯಾಲಯದಲ್ಲೂ ಪ್ರಸ್ತುತ ಮಾಲೀಕರಿಗೆ ಹಿನ್ನಡೆಯಾಯಿತು. ಈಗ ಅಂತಿಮವಾಗಿ ಎರಡೂ ಕಟ್ಟಡವನ್ನು ಸರ್ಕಾರ ಅಧಿಕೃತವಾಗಿ ಕೊಂಡುಕೊಳ್ಳಲಿದೆ.

  ಜೊತೆ ಜೊತೆಯಲಿ ಮೇಘ ಶೆಟ್ಟಿಗೆ ಬಂತು ಬಂಪರ್ ಆಫರ್ | Filmibeat Kannada
  ಕಪೂರ್ ಕವೇಲಿ ಸಂಗ್ರಹಾಲಯ ಮಾಡಲು ನಿರ್ಧಾರ

  ಕಪೂರ್ ಕವೇಲಿ ಸಂಗ್ರಹಾಲಯ ಮಾಡಲು ನಿರ್ಧಾರ

  ಕಪೂರ್ ಹವೇಲಿಯನ್ನು ಸಂಗ್ರಹಾಲಯ ಮಾಡುವಂತೆ ರಿಶಿ ಕಪೂರ್ ಅವರು 2018 ರಲ್ಲಿ ಪಾಕಿಸ್ತಾನ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅವರ ಮನವಿಯನ್ನು ಪುರಸ್ಕರಿಸಿದ್ದ ಸರ್ಕಾರ ಕಪೂರ್ ಹವೇಲಿಯನ್ನು ಸಂಗ್ರಹಾಲಯ ಮಾಡಲು ನಿಶ್ಚಯಿಸಿತ್ತು, ಆದರೆ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

  English summary
  Pakistan's provincial government decided to but Raj Kapoor and Dilip Kumar's house which were in Peshawar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X