For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್ ರಜಪೂತ್ ಪಾತ್ರದಲ್ಲಿ ಪಾಕಿಸ್ತಾನ ನಟ!

  |

  ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದಲ್ಲಿ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಇದು ಸಹಜ ಸಾವು ಅಥವಾ ಕೊಲೆಯೂ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಈಗ ತಾನೆ ಸಿಬಿಐ ಅಧಿಕಾರಿಗಳು ಈ ಕೇಸ್‌ ತನಿಖೆ ಆರಂಭಿಸಿದ್ದಾರೆ.

  ಬ್ರಹ್ಮ ಚಿತ್ರದಲ್ಲಿನ Upendra Pranitha ಮುಂಬೈನ ಕ್ಲಬ್‌ನಲ್ಲಿ ಹಾಡಿನ ಚಿತ್ರೀಕರಣ | Filmibeat Kannada

  ಇಷ್ಟರ ಮಧ್ಯೆ ಸುಶಾಂತ್ ಸಿಂಗ್ ರಜಪೂತ್ ಅವರ ಕುರಿತು ವೆಬ್ ಸಿರೀಸ್ ಮಾಡಲು ಬಾಲಿವುಡ್ ಮಂದಿ ಮುಂದಾಗಿದ್ದಾರೆ. ಈ ಚಿತ್ರದಲ್ಲಿ ಪಾಕಿಸ್ತಾನ ನಟ ಹಸನ್ ಖಾನ್, ಸುಶಾಂತ್ ಅವರ ಪಾತ್ರ ನಿಭಾಯಿಸಲಿದ್ದಾರೆ ಎಂದು ತಿಳಿದು ಬಂದಿದೆ.

  ಸುಶಾಂತ್ ಸಿಂಗ್ ಕೇಸ್: ಅಡುಗೆ ಕೆಲಸದವನಿಗೆ 11 ಪ್ರಶ್ನೆ, ಸಿಬಿಐಗೂ ಕಾಡಿದೆ

  ಸ್ವತಃ ಹಸನ್ ಖಾನ್ ಈ ಕುರಿತು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. 'ಸುಶಾಂತ್ ಸಿಂಗ್ ಕುರಿತು ತಯಾರಾಗುತ್ತಿರುವ ಭಾರತೀಯ ವೆಬ್ ಸಿರೀಸ್‌ನಲ್ಲಿ ನಾನು ಸುಶಾಂತ್ ಪಾತ್ರ ಮಾಡುತ್ತಿದ್ದೇನೆ. ಇದು ನನ್ನ ಹೃದಯಕ್ಕೆ ಹತ್ತಿರದ ಪಾತ್ರ'' ಎಂದು ತಿಳಿಸಿದ್ದಾರೆ.

  ಡಾ ರಾಜ್ ಗುಪ್ತಾ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದು, ಮುಸ್ವೀರ್ ಖಾನ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ ಎಂದು ಆ ಪೋಸ್ಟರ್‌ನಲ್ಲಿ ವರದಿಯಾಗಿದೆ. ಹಸನ್ ಖಾನ್ ಜೊತೆ ಇಶಾ, ಆರೋನಾ ಸೇರಿದಂತೆ ಇತರೆ ಕಲಾವಿದರು ನಟಿಸಲಿದ್ದಾರೆ ಎಂದು ಹೇಳಲಾಗಿದೆ.

  ಆದರೆ, ಈ ವೆಬ್ ಸಿರೀಸ್‌ಗೆ ನೆಟ್ಟಿಗರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಸುಶಾಂತ್ ಸಿಂಗ್ ಸಾವಿನ ಬಗ್ಗೆ ಸ್ಪಷ್ಟತೆಯ ಸಿಕ್ಕಿಲ್ಲ, ಸಿಬಿಐ ತನಿಖೆ ನಡೆಯುತ್ತಿದೆ. ಅಷ್ಟರಲ್ಲಿ ಇಂತಹ ಯೋಚನೆ ಸರಿಯಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

  English summary
  Pakistani actor Hasan Khan in a web series to play a role on the life of Bollywood actor Sushant Singh Rajput.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X