For Quick Alerts
  ALLOW NOTIFICATIONS  
  For Daily Alerts

  ಪಾಕಿಸ್ತಾನಿ ನಟಿಯರು ಹನಿಟ್ರ್ಯಾಪ್‌ಗೆ ಬಳಕೆ: ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದ ನಟಿಯ ಮೇಲೂ ಆರೋಪ!

  By ಫಿಲ್ಮಿಬೀಟ್ ಡೆಸ್ಕ್
  |

  ಹನಿಟ್ರ್ಯಾಪ್ ಎಂಬುದು ರಾಜಕೀಯದಲ್ಲಿ ಅತಿಯಾಗಿ ಬಳಕೆಯಾಗುತ್ತಿದೆ. ಈ ಕಾರ್ಯಕ್ಕೆ ಸಿನಿಮಾ, ಧಾರಾವಾಹಿ ನಟಿಯರನ್ನು ಬಳಸಿಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿಯೂ ಕಳೆದ ವರ್ಷ ಇಂಥಹದ್ದೊಂದು ಜಾಲ ಪತ್ತೆಯಾಗಿತ್ತು.

  ಇದೀಗ ಹೊರಬಿದ್ದಿರುವ ಆಘಾತಕಾರಿ ಸಂಗತಿಯೆಂದರೆ ಪಾಕಿಸ್ತಾನದ ಕೆಲವು ನಟಿಯರನ್ನು ಹನಿಟ್ರ್ಯಾಪ್‌ಗೆ ಅಲ್ಲಿನ ದೊಡ್ಡ ಸರ್ಕಾರಿ ಸಂಸ್ಥೆಗಳೇ ಬಳಸಿಕೊಳ್ಳುತ್ತಿವೆಯಂತೆ. ಈ ವಿಷಯವನ್ನು ಪಾಕಿಸ್ತಾನದ ಮಾಜಿ ಮಿಲಿಟರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

  'ಸೋಲ್ಜರ್ ಸ್ಪೀಕ್ಸ್' ಹೆಸರಿನ ಯೂಟ್ಯೂಬ್ ಚಾನೆಲ್‌ ನಡೆಸುವ ಪಾಕಿಸ್ತಾನದ ಮಾಜಿ ಮಿಲಿಟರಿ ಅಧಿಕಾರಿಯೊಬ್ಬ ತಮ್ಮ ವ್ಲಾಗ್‌ನಲ್ಲಿ ಈ ವಿಷಯವನ್ನು ಹೇಳಿದ್ದು, ಪಾಕಿಸ್ತಾನದ ಹಲವು ನಟಿಯರನ್ನು ಕೆಲವು ಉನ್ನತ ಸರ್ಕಾರಿ ಸಂಸ್ಥೆಗಳು ಹನಿಟ್ರ್ಯಾಪ್‌ಗೆ ಬಳಕೆ ಮಾಡುತ್ತವೆ ಎಂದಿದ್ದಾರೆ. ನಟಿಯರ ಹೆಸರುಗಳನ್ನು ಆ ಅಧಿಕಾರಿ ಹೇಳಿಲ್ಲವಾದರು ನಟಿಯರ ಇನ್‌ಶಿಯಲ್‌ಗಳನ್ನು ಹೇಳಿದ್ದಾರೆ.

  ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾಜಿ ಅಧಿಕಾರಿ ಹೇಳಿದ ಇನ್‌ಶಿಯಲ್‌ಗಳನ್ನು ಆಧರಿಸಿ ನಟಿಯರ ಹೆಸರುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಪಾಕ್ ಅಧಿಕಾರಿ ಹೇಳಿದ ಹೆಸರಿನಲ್ಲಿ ಬಾಲಿವುಡ್‌ನ ನಟಿಸಿರುವ ಒಬ್ಬ ನಟಿಯ ಹೆಸರೂ ಇದೆ.

  ಶ್ರೀದೇವಿ ನಟಿಸಿದ್ದ 'ಮಾಮ್' ಸಿನಿಮಾದಲ್ಲಿ ಶ್ರಿದೇವಿಯ ಮಗಳ ಪಾತ್ರದಲ್ಲಿ ನಟಿಸಿರುವ ನಟಿ ಸಾಜಲ್ ಅಲಿಯ ಹೆಸರು ಸಹ ಇದೆ. ಈ ನಟಿಯನ್ನೂ ಹನಿಟ್ರ್ಯಾಪ್‌ಗೆ ಬಳಸಿಕೊಳ್ಳಲಾಗಿದೆಯಾ? ಭಾರತದಲ್ಲಿ ಈ ನಟಿ ಹನಿ ಟ್ರ್ಯಾಪ್ ಮಾಡಿದ್ದಾರಾ ಎಂಬ ಗುಮಾನಿ ಇದೀಗ ಶುರುವಾಗಿದೆ.

  ಆದರೆ ಮಾಜಿ ಮಿಲಿಟರಿ ಅಧಿಕಾರಿಯ ಹೇಳಿಕೆಯನ್ನು ಖಂಡಿಸಿರುವ ನಟಿ ಸಾಜಲ್ ಅಲಿ ಈ ಕುರಿತು ಟ್ವೀಟ್ ಮಾಡಿದ್ದು, ''ನಮ್ಮ ದೇಶವು ನೈತಿಕವಾಗಿ ಅಧಃಪತನವಾಗುತ್ತಿರುವುದು ಮತ್ತು ಕೊಳಕು ಆಲೋಚನೆಗಳಿಂದ ತುಂಬಿಕೊಳ್ಳುತ್ತಿರುವುದು ದುಃಖಕರ, ಮತ್ತೊಬ್ಬರ ಮಾನ ಹಾನಿ ಮಾಡುವುದು ಅತ್ಯಂತ ಹೇಯ ಪಾಪ'' ಎಂದಿದ್ದಾರೆ.

  ಸಾಜಲ್ ಮಾತ್ರವಲ್ಲದೆ ಇನ್ನೂ ಹಲವು ನಟಿಯರು ಮಾಜಿ ಮಿಲಿಟರಿ ಅಧಿಕಾರಿಯ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

  ಭಾರತದ ಹಲವು ಸಿನಿಮಾಗಳಲ್ಲಿ ಪಾಕಿಸ್ತಾನದ ನಟ-ನಟಿಯರು ಈ ಹಿಂದೆ ನಟಿಸಿದ್ದಾರೆ. ಆದರೆ ಉರಿ ದಾಳಿಯ ಬಳಿಕ ಪಾಕಿಸ್ತಾನದ ನಟ-ನಟಿಯರು ಭಾರತದ ಸಿನಿಮಾಗಳಲ್ಲಿ ನಟಿಸದಂತೆ ನಿಷೇಧ ಹೇರಲಾಗಿದೆ.

  ಪಾಕಿಸ್ತಾನ ಮಾತ್ರವೇ ಅಲ್ಲದೆ, ಹಲವು ದೇಶಗಳು ಶತ್ರು ದೇಶಗಳ ಭದ್ರತೆಯಲ್ಲಿ ಲೋಪವೆಸಗಲು, ಶತ್ರು ದೇಶದ ಖಾಸಗಿ ಮಾಹಿತಿ ಪಡೆದುಕೊಳ್ಳಲು ಹನಿಟ್ರ್ಯಾಪ್ ಅನ್ನು ಬಳಸುತ್ತವೆ ಎನ್ನಲಾಗುತ್ತದೆ.

  English summary
  Pakistani actresses used for honey trap said Pakistan ex military officer in his youtube video.
  Thursday, January 5, 2023, 13:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X