For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ ಸಿನಿಮಾ ಮೂಲಕ ನಟನೆ ಆರಂಭಿಸಿದ ಈ ಸ್ಟಾರ್ ನಟ ಈಗ ದಕ್ಷಿಣದ ಸಿನಿಮಾಗಳಲ್ಲಿ ನಟಿಸಲ್ವಂತೆ!

  By ಫಿಲ್ಮಿಬೀಟ್ ಡೆಸ್ಕ್
  |

  ಚಿತ್ರರಂಗದಲ್ಲಿ ಸ್ಟಾರ್ ನಟರುಗಳಷ್ಟೆ ಪೋಷಕ ನಟರೂ ಸಹ ಮುಖ್ಯ. ಆದರೆ ಸ್ಟಾರ್‌ಗಳಿಗೆ ಸಿಕ್ಕಷ್ಟು ಖ್ಯಾತಿ ಎಲ್ಲ ಪೋಷಕ ನಟರಿಗೂ ಸಿಗುವುದಿಲ್ಲ. ಸ್ಟಾರ್ ನಟರಿಗಿಂತಲೂ ಹೆಚ್ಚು ಸಿನಿಮಾಗಳಲ್ಲಿ ನಟಿಸುವ, ಹೆಚ್ಚು ಅವಕಾಶ, ಖ್ಯಾತಿ ಗಳಿಸುವ ಅದೃಷ್ಟ ಪೋಷಕ ನಟರದ್ದು. ಆದರೆ ಖ್ಯಾತಿ ಗಳಿಸಲು ಪ್ರತಿಭೆ, ಪರಿಶ್ರಮದ ಜೊತೆಗೆ ತುಸು ಅದೃಷ್ಟವೂ ಬೇಕಷ್ಟೆ.

  ದೊಡ್ಡ ಮಟ್ಟಿಗೆ ಹೆಸರು ಮಾಡಿರುವ, ಸ್ಟಾರ್‌ಗಳೆನಿಸಿಕೊಂಡಿರುವ ಕೆಲವು ಪೋಷಕ ನಟರು, ವಿಲನ್‌ಗಳು ಪ್ರಸ್ತುತ ಭಾರತದ ಚಿತ್ರರಂಗದಲ್ಲಿದ್ದಾರೆ. ಅದರಲ್ಲಿ ಪ್ರಮುಖವಾಗಿ ವಿಜಯ್ ಸೇತುಪತಿ, ಹಿಂದಿಯ ನವಾಜುದ್ದೀನ್ ಸಿದ್ಧಿಕಿ, ಜಗಪತಿ ಬಾಬು ಇವರೆಲ್ಲರ ಸಾಲಿಗೆ ಸೇರುತ್ತಾರೆ ಹಿಂದಿಯ ಜನಪ್ರಿಯ ನಟ ಪಂಕಜ್ ತ್ರಿಪಾಠಿ.

   15 ಸೆಟ್‌ಗಳಲ್ಲಿ 28 ದಿನ 'ಘೋಸ್ಟ್' ಆಗಿದ್ದ ಶಿವಣ್ಣ, ಮಲಯಾಳಂ ಸ್ಟಾರ್ ನಟ ಜಯರಾಮ್! 15 ಸೆಟ್‌ಗಳಲ್ಲಿ 28 ದಿನ 'ಘೋಸ್ಟ್' ಆಗಿದ್ದ ಶಿವಣ್ಣ, ಮಲಯಾಳಂ ಸ್ಟಾರ್ ನಟ ಜಯರಾಮ್!

  ಹೋಟೆಲ್‌ನಲ್ಲಿ ಸರ್ವರ್ ಕೆಲಸ ಮಾಡುತ್ತಿದ್ದ ಪಂಕಜ್ ತ್ರಿಪಾಠಿ ಇಂದು ಬಾಲಿವುಡ್‌ನ ಸ್ಟಾರ್ ವಿಲನ್ ಹಾಗೂ ಪೋಷಕ ನಟ. ವಿಶೇಷವೆಂದರೆ ಇವರಿಗೆ ಮೊದಲ ಸಿನಿಮಾ ಅವಕಾಶ ಲಭಿಸಿದ್ದು ಕನ್ನಡದ ಸಿನಿಮಾದಿಂದ. ಅದೂ ಶಿವರಾಜ್ ಕುಮಾರ್ ನಟಿಸಿರುವ ಸಿನಿಮಾದಿಂದ! ಆದರೆ ಈಗ ಇವರು ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸುವುದಿಲ್ಲವೆಂದಿದ್ದಾರೆ. ಹಾಗೆಂದು ಇವರಿಗೆ ದಕ್ಷಿಣದ ಚಿತ್ರರಂಗದ ಬಗ್ಗೆ ಅಗೌರವ ಎಂದೇನೂ ಇಲ್ಲ. ತಾವು ದಕ್ಷಿಣ ಸಿನಿಮಾಗಳಲ್ಲಿ ನಟಿಸದೇ ಇರುವುದಕ್ಕೆ ಸೂಕ್ತ ಕಾರಣವನ್ನೂ ನೀಡಿದ್ದಾರೆ.

  ಕನ್ನಡ ಸಿನಿಮಾ ಮೂಲಕ ನಟನೆಗೆ ಎಂಟ್ರಿ

  ಕನ್ನಡ ಸಿನಿಮಾ ಮೂಲಕ ನಟನೆಗೆ ಎಂಟ್ರಿ

  ಶಿವರಾಜ್ ಕುಮಾರ್ ನಟಿಸಿರುವ ಸೂಪರ್ ಹಿಟ್ ಸಿನಿಮಾ 'ಚಿಗುರಿದ ಕನಸು' ಸಿನಿಮಾದಲ್ಲಿ ಪಂಕಜ್ ತ್ರಿಪಾಠಿ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ್ದರು. ಆ ಸಿನಿಮಾದ ಕತೆಯಲ್ಲಿ ಶಿವರಾಜ್ ಕುಮಾರ್, ಮುಂಬೈನ ಹಾಸ್ಟೆಲ್‌ನಲ್ಲಿದ್ದಾಗ ಅವರ ಗೆಳೆಯನ ಪಾತ್ರದಲ್ಲಿ ಮನೋಜ್ ತ್ರಿಪಾಠಿ ನಟಿಸಿದ್ದರು. ಆ ಸಿನಿಮಾದ ಬಳಿಕ ಅವರ ವೃತ್ತಿ ಬದುಕೇ ಬದಲಾಗಿಬಿಟ್ಟಿತು.

  ಕಾರಣ ತಿಳಿಸಿರುವ ಪಂಕಜ್ ತ್ರಿಪಾಠಿ

  ಕಾರಣ ತಿಳಿಸಿರುವ ಪಂಕಜ್ ತ್ರಿಪಾಠಿ

  ಇದೀಗ, ಪಂಕಜ್ ತ್ರಿಪಾಠಿ ಅವರು, ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದಿದ್ದು, ಅದಕ್ಕೆ ಸೂಕ್ತ ಕಾರಣವನ್ನೂ ನೀಡಿದ್ದಾರೆ. ಗೋವಾ ಚಿತ್ರೋತ್ಸವದಲ್ಲಿ ಈ ಬಗ್ಗೆ ಮಾತನಾಡಿರುವ ಪಂಕಜ್ ತ್ರಿಪಾಠಿ, ''ನಾನು ಹಿಂದಿ ಸಿನಿಮಾಗಳಿಗೆ ಮೊದಲ ಆದ್ಯತೆ ನೀಡುತ್ತೇನೆ. ಯಾಕೆಂದರೆ ಹಿಂದಿ ಭಾಷೆ ನನಗೆ ಚೆನ್ನಾಗಿ ಅರ್ಥವಾಗುತ್ತದೆ. ಆ ಭಾಷೆಯಲ್ಲಿ ಭಾವನೆಗಳನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ, ಪ್ರಕಟ ಮಾಡಬಲ್ಲೆ. ಹಾಲಿವುಡ್​ ಬಿಡಿ, ಮಲಯಾಳಂ ಮತ್ತು ತೆಲುಗು ಚಿತ್ರರಂಗದಿಂದಲೂ ನನಗೆ ಆಫರ್​ ಬರುತ್ತದೆ. ಆ ಭಾಷೆಗಳನ್ನು ನಾನು ಮಾತನಾಡಲು ಸಾಧ್ಯವಿಲ್ಲದ ಕಾರಣ ಆ ಪಾತ್ರಗಳಿಗೆ ನನ್ನಿಂದ ನ್ಯಾಯ ಒದಗಿಸಲು ಆಗಲ್ಲ ಎನಿಸುತ್ತದೆ. ಆದರೆ ನನಗೆ ಭಾಷೆಯ ಗಡಿ ಇಲ್ಲ'' ಎಂದಿದ್ದಾರೆ.

  ಕಂಡಿಷನ್ ಹಾಕಿದ ಪಂಕಜ್ ತ್ರಿಪಾಠಿ

  ಕಂಡಿಷನ್ ಹಾಕಿದ ಪಂಕಜ್ ತ್ರಿಪಾಠಿ

  ''ಹಿಂದಿಯಲ್ಲಿ ಮಾತನಾಡುವ ಪಾತ್ರವನ್ನು ಯಾರಾದರೂ ನನಗೆ ನೀಡಿದರೆ ಯಾವುದೇ ಭಾಷೆಯ ಸಿನಿಮಾದಲ್ಲಿ ನಟಿಸಲು ನಾನು ಸಿದ್ಧ' ಎಂದು ಕಂಡೀಷನ್ ಅನ್ನು ಪಂಕಜ್ ತ್ರಿಪಾಠಿ ಹಾಕಿದ್ದಾರೆ. ಪಂಕಜ್ ತ್ರಿಪಾಠಿ ಮೊದಲು ನಟಿಸಿದ್ದ 'ಚಿಗುರಿದ ಕನಸು' ಸಿನಿಮಾದಲ್ಲಿ ಅವರು ಹಿಂದಿಯಲ್ಲಿಯೇ ಮಾತನಾಡಿದ್ದರು. ಕೆಲವು ಕನ್ನಡ ಪದಗಳನ್ನಷ್ಟೆ ಅವರು ಆ ಸಿನಿಮಾದಲ್ಲಿ ಮಾತನಾಡಿದ್ದರು. ಶಿವರಾಜ್ ಕುಮಾರ್ ಹಾಗೂ ಪಂಕಜ್ ತ್ರಿಪಾಠಿ ಒಟ್ಟಿಗೆ ನಟಿಸಿರುವ ಕೆಲವು ದೃಶ್ಯದ ತುಣುಕುಗಳು ಯೂಟ್ಯೂಬ್‌ನಲ್ಲಿ ಲಭ್ಯವಿದೆ.

  ಸ್ಪೂರ್ತಿದಾಯಕ ಪಯಣ ಪಂಕಜ್ ತ್ರಿಪಾಠಿಯವರದ್ದು

  ಸ್ಪೂರ್ತಿದಾಯಕ ಪಯಣ ಪಂಕಜ್ ತ್ರಿಪಾಠಿಯವರದ್ದು

  ಯಾವುದೇ ಗಾಡ್‌ಫಾದರ್‌ಗಳಿಲ್ಲದೆ ಸ್ವಯಂ ಶಕ್ತಿಯಿಂದ ಬಾಲಿವುಡ್‌ಗೆ ಬಂದ ಪಂಕಜ್ ತ್ರಿಪಾಠಿ ಆರಂಭದಲ್ಲಿ ಹೆಸರೇ ಇಲ್ಲದ ಪಾತ್ರಗಳಲ್ಲಿ ನಟಿಸುತ್ತಿದ್ದರು. ನಿಧಾನಕ್ಕೆ ಉತ್ತಮ ಪಾತ್ರಗಳಲ್ಲಿ ನಟಿಸುತ್ತಾ ಬಂದ ಪಂಕಜ್ ಇಂದು ಬಾಲಿವುಡ್‌ನ ಅತಿ ಬ್ಯುಸಿ ಪೋಷಕ ನಟ. ಇವರ ನಟನೆಯ 'ಮಿರ್ಜಾಪುರ್' ವೆಬ್ ಸರಣಿ ದೊಡ್ಡ ಹಿಟ್ ಆಗಿದೆ. ಹಲವು ಸಿನಿಮಾಗಳಲ್ಲಿ ಮುಖ್ಯ ವಿಲನ್ ಪಾತ್ರದಲ್ಲಿಯೂ ನಟಿಸಿದ್ದಾರೆ. ನವಾಜುದ್ದೀನ್ ಸಿದ್ಧಿಕಿಗೆ ಜೀವ ನೀಡಿದ 'ಗ್ಯಾಂಗ್ಸ್ ಆಫ್ ವಾಸೇಪುರ್' ಸಿನಿಮಾದಿಂದ ಇವರ ಜೀವನವೂ ಬದಲಾಯ್ತು.

  English summary
  Pankaj Tripathi said he is not acting in South Indian movies because of language barrier. He said he does not know the language other than Hindi.
  Thursday, November 24, 2022, 7:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X