»   » ಮೋದಿಯಾಗಿ ಪರೇಶ್, ತಾರೆಗಳ ಜತೆ ಮೋದಿ

ಮೋದಿಯಾಗಿ ಪರೇಶ್, ತಾರೆಗಳ ಜತೆ ಮೋದಿ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ನಲ್ಲಿ ಈಗ ಜೀವನಚರಿತ್ರೆಗಳ ಟ್ರೆಂಡ್ ಆರಂಭವಾಗಿರುವ ಹಾಗೆ ಕಾಣುತ್ತದೆ. ಮಿಲ್ಕಾ ಸಿಂಗ್ ಕುರಿತ ಭಾಗ್ ಮಿಲ್ಕಾ ಭಾಗ್ ಚಿತ್ರದ ಯಶಸ್ಸಿನ ನಂತರ ಬಾಕ್ಸರ್ ಮೇರಿ ಕೋಂ ಅವರ ಜೀವನಾಧಾರಿತ ಚಿತ್ರ ಬರುತ್ತಿದೆ. ಹಿನ್ನೆಲೆಗಾಯಕ ಕಿಶೋರ್ ಕುಮಾರ್ ಕುರಿತ ಚಿತ್ರದ ಬಗ್ಗೆ ರಣಬೀರ್ ಕಪೂರ್ ಹೇಳಿದ್ದಾರೆ.

ಈಗ ಈ ಪಟ್ಟಿಗೆ ನರೇಂದ್ರ ಮೋದಿ ಅವರ ಜೀವನಗಾಥೆ ಸೇರ್ಪಡೆಯಾಗಲಿದೆ. ಮೋದಿ ಅವರ ಜೀವನಾಧಾರಿತ ಚಿತ್ರವೊಂದನ್ನು ತಯಾರಿಸಲು ನಿರ್ಮಾಪಕ ಮತ್ತು ನಿರ್ದೇಶಕ ಮಿತೇಶ್ ಪಟೇಲ್ ಅವರು ಮುಂದಾಗಿದ್ದಾರೆ. ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಆಶೀರ್ವಾದ, ಅನುಮತಿ ಪಡೆದಿರುವ ಪಟೇಲ್ ಅವರು ಪಾತ್ರಧಾರಿಗಳ ಹುಡುಕಾಟದಲ್ಲಿದ್ದರು.

ಈಗ ಪಟೇಲ್ ಗೆ ಮೋದಿ ಪಾತ್ರಧಾರಿ ಸಿಕ್ಕಿದ್ದಾರಂತೆ. ಮೋದಿ ಅವರ ಬಾಲ್ಯದಿಂದ, ಮುಖ್ಯಮಂತ್ರಿಯಾದ ಕ್ಷಣದವರೆಗಿನ ಎಲ್ಲಾ ಸಂಗತಿಗಳು ತೆರೆಯ ಮೇಲೆ ಸಮರ್ಥವಾಗಿ ಬಿಂಬಿಸಬಲ್ಲ ವ್ಯಕ್ತಿ ಎಂದರೆ ಅದು ಪರೇಶ್ ರಾವಲ್ ಮಾತ್ರ ಎಂದು ನಿರ್ದೇಶಕ ಪಟೇಲ್ ಹೇಳಿದ್ದಾರೆ.

'ನಾನು ಮೋದಿಯವರ ಜೀವನದಿಂದ ಅತ್ಯಂತ ಪ್ರಭಾವಿತನಾಗಿದ್ದೇನೆ, ಟೀ ಸ್ಟಾಲ್ ನಲ್ಲಿ ಕೆಲಸ ಮಾಡುತ್ತಿದ್ದ ಸಾಮಾನ್ಯ ಮನುಷ್ಯನೊಬ್ಬನಿಂದ ಹಿಡಿದು ಮುಖ್ಯಮಂತ್ರಿಯಾಗುವವರೆಗಿನ ಮೋದಿ ಜೀವನ ಸ್ಫೂರ್ತಿದಾಯಕವಾಗಿದೆ. ಅವರ ಬಾಲ್ಯ, ಆರ್ ಎಸ್ ಎಸ್ ಸಂಘಟನೆಯ ಕಾರ್ಯಕತನಾಗಿ ನಂತರ ಮುಖ್ಯಮಂತ್ರಿಯಾಗುವವರೆಗಿನ ಅವರ ಬದುಕಿನ ವಿವಿಧ ಆಯಾಮಗಳ ಬಗ್ಗೆ ನಮ್ಮ ಸಿನಿಮಾದಲ್ಲಿ ತೋರಿಸಲು ಪ್ರಯತ್ನಿಸುತ್ತೇವೆ ಎಂದು ಪಟೇಲ್ ಹೇಳಿದ್ದಾರೆ.

ಸಿನಿಮಾದಲ್ಲಿ ಕಾಲ್ಪನಿಕ ಸನ್ನಿವೇಶಗಳಿಗೂ ಅವಕಾಶವಿರುತ್ತದೆ ಇದು ಶೇ.100ರಷ್ಟು ಮೋದಿ ಸಿನಿಮಾವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಹಾಗಾದರೆ ಈ ಚಿತ್ರದಲ್ಲಿ ಮತ್ತೇನಿದೆ? ಮೋದಿ ಅವರನ್ನು ಇತ್ತೀಚ್ಗೆ ಭೇಟಿ ಮಾಡಿದ ಬಾಲಿವುಡ್, ಟಾಲಿವುಡ್ ಸ್ಟಾರ್ ಗಳು ಯಾರು ಎಂಬುದನ್ನು ಮುಂದೆ ಓದಿ

ನಿರ್ದೇಶಕರ ಹೇಳಿಕೆ

ಗುಜರಾತಿನಲ್ಲಿ ಸಿನಿಮಾದ ಚಿತ್ರೀಕರಣಕ್ಕಾಗಿ ಲೊಕೇಶನ್ ಹುಡುಕುತ್ತಿದ್ದು, ಪಾತ್ರಗಳ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ, ಸಿನಿಮಾದ ಎಲ್ಲಾ ಪಾತ್ರಗಳನ್ನು ಬಾಲಿವುಡ್ ಮಂದಿಯೇ ನಿರ್ವಹಿಸಲಿದ್ದಾರೆ ಎಂದು ಅಮೆರಿಕ ನಿವಾಸಿ ಮಿತೇಶ್ ಹೇಳಿದ್ದಾರೆ.

ಚಿತ್ರಕ್ಕೆ ಚುನಾವಣೆ ಅಡ್ಡಿ

ಮೋದಿ ಕುರಿತಾದ ಚಿತ್ರೀಕರಣ ಬಹುತೇಕ ಮುಂದಿನ ವರ್ಷ ಫೆಬ್ರವರಿ ಹೊತ್ತಿಗೆ ನಡೆಯುವ ಸಾಧ್ಯತೆಯಿದ್ದು, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಕಷ್ಟವಾಗಬಹುದು.

ಆದರೆ, ಸರಿಯಾದ ಯೋಜನೆ ಹಾಕಿಕೊಂಡರೆ ಪ್ರಚಾರಕ್ಕೆ ಸೂಕ್ತ ವಿಧಾನವಾಗಿ ಈ ಚಿತ್ರ ಹೊರ ಹೊಮ್ಮಬಹುದು. ಇಲ್ಲದಿದ್ದರೆ ಚುನಾವಣೆ ಮುಗಿಯುವ ತನಕ ಈ ಚಿತ್ರ ತೆರೆ ಕಾಣುವುದು ಕಷ್ಟವಾಗಲಿದೆ.

ಪರೇಶ್, ಅಕ್ಷಯ್ ಜೊತೆ ಮೋದಿ

ಗುಜರಾತಿನಲ್ಲಿ ಕ್ರೀಡೆ ಮತ್ತು ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳು ಹಾಗೂ ಆಗಬೇಕಿರುವ ಸುಧಾರಣೆಗಳ ಬಗ್ಗೆ ನರೇಂದ್ರ ಮೋದಿ ಅವರು ಇಬ್ಬರು ನಟರಿಗೆ ವಿವರಿಸಿದ್ದಾರೆ. ಅಕ್ಷಯ್ ಕುಮಾರ್ ಹಾಗೂ ಪರೇಶ್ ರಾವಲ್ ಅವರು ತಮ್ಮ ಕೈಲಾಗುವ ನೆರವು ನೀಡಲು ಒಪ್ಪಿಕೊಂಡಿದ್ದರು

ಚಿತ್ರರಂಗಕ್ಕೆ ಕಾಲಿಡುವ ಮುನ್ನ ಕರಾಟೆ ಕಲೆ ಹೇಳಿಕೊಡುವ ಶಿಕ್ಷಕರಾಗಿ ಅನುಭವ ಹೊಂದಿರುವ ಅಕ್ಷಯ್ ಕುಮಾರ್ ಅವರು ಜ್ಯೂಡೋ ಹಾಗೂ ಕರಾಟೆ ಕ್ರೀಡೆಗಳ ಅಭಿವೃದ್ಧಿಗೆ ಶ್ರಮಿಸಲು ಪಣ ತೊಟ್ಟಿದ್ದಾರೆ. ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಯ ಉದ್ದೇಶಕ್ಕೆ ಇದು ಪೂರಕವಾಗಲಿದೆ ಎಂದು ಮೋದಿ ಅವರು ಹರ್ಷ ವ್ಯಕ್ತಪಡಿಸಿದ್ದರು

ಪರೇಶ್, ಅಕ್ಷಯ್ ಜೊತೆ ಮೋದಿ

ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ ಜತೆಗೆ ಯೋಗ ವಿಶ್ವವಿದ್ಯಾಲಯ ಸ್ಥಾಪನೆ ಬಗ್ಗೆ ಕೂಡಾ ಅಕ್ಷಯ್ ಹಾಗೂ ಪರೇಶ್ ಜತೆ ಮೋದಿ ಅವರು ಮಾತುಕತೆ ನಡೆಸಿದ್ದರು.

ಅಮಿತ್ ಶಾ ಮೂಲಕ ಆಹ್ವಾನ

ಅಹಮದಾಬಾದಿನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಭಾರತ ಹಾಗೂ ಪಾಕಿಸ್ತಾನ ಟಿ 20 ನೋಡಲು ಪರೇಶ್ ರಾವಲ್ ಅವರು ಬಂದಿದ್ದಾಗ ಮೋದಿ ಅವರ ಆಪ್ತ ಅಮಿತ್ ಶಾ ಅವರು ಸಿಎಂ ಕಚೇರಿಗೆ ಬರುವಂತೆ ಆಹ್ವಾನ ನೀಡಿದ್ದರು. ಸುಮಾರು ಆರು ತಿಂಗಳ ನಂತರ ಅಕ್ಷಯ್ ಕುಮಾರ್ ಹಾಗೂ ಪರೇಶ್ ರಾವಲ್ ಅವರು ಮೋದಿ ಜತೆ ಮಾತುಕತೆ ನಡೆಸಿದ್ದರು

ಜಾನ್ ಅಬ್ರಹಾಂ ಭೇಟಿ

ವನ್ಯಜೀವಿಗಳ ಸಂರಕ್ಷಣೆ ಅಭಿಯಾನದಲ್ಲಿ ಪಾಲ್ಗೊಂಡಿರುವ ಜಾನ್ ಅಬ್ರಹಾಂ ಅವರು ಕಳೆದ ಐದು ತಿಂಗಳಲ್ಲಿ ಎರಡು ಬಾರಿ ಮೋದಿ ಅವರನ್ನು ಭೇಟಿ ಮಾಡಿದ್ದರು.

ಗುಜರಾತಿನ ವನ್ಯಜೀವಿ ಪ್ರವಾಸೋದ್ಯಮದ ಪ್ರಚಾರಕ್ಕೆ ಜಾನ್ ಅಬ್ರಹಾಂ ಅವರನ್ನು ಬಳಸಿಕೊಳ್ಳಲು ಮೋದಿ ಇ‌ಚ್ಚಿಸಿದ್ದಾರೆ ಎನ್ನಲಾಗಿತ್ತು.

ರಾಯಭಾರಿ ಅಮಿತಾಬ್

ಗುಜರಾತ್ ನ ಸಾಂಸ್ಕೃತಿಕ, ಪ್ರವಾಸೋದ್ಯಮ ರಾಯಭಾರಿಯಾಗಿರುವ ಅಮಿತಾಬ್ ಬಚ್ಚನ್, ನರೇಂದ್ರ ಮೋದಿ ಪ್ರಧಾನಿಯಾಗಲು ಬೆಂಬಲ ಸೂಚಿಸಿದ್ದಾರೆ ಎಂಬ ವಿಡಿಯೋ ತುಣುಕು ಇತ್ತೀಚೆಗೆ ಭಾರಿ ವಿವಾದ ಎಬ್ಬಿಸಿತ್ತು. ಇದರ ಬಗ್ಗೆ ಹೆಚ್ಚಿನ ವಿವರ ಇಲ್ಲಿ ಓದಿ

ತೆಲುಗು ನಟರ ಜತೆ

ಹೈದರಾಬಾದ್ ಸಮಾವೇಶದ ಸಂದರ್ಭದಲ್ಲಿ ತೆಲುಗು ನಟ ಜಗಪತಿ ಬಾಬು, ಸುಮನ್ ಜತೆ ಮೋದಿ.
* ಸಮಾವೇಶದ ಸಂಪೂರ್ಣ ವರದಿ ಇಲ್ಲಿ ಓದಿ
* ಸಮಾವೇಶದ ಚಿತ್ರಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತೆಲುಗು ಸಿನಿತಾರೆಯರು

ನವಭಾರತ್ ಯುವಭೇರಿ' ಸಮಾವೇಶದ ನಂತರ ಕೆ. ರಾಘವೇಂದ್ರ ರಾವ್ ಜತೆ ನರೇಂದ್ರ ಮೋದಿ

ಮೋಹನ್ ಬಾಬು ಫ್ಯಾಮಿಲಿ

ಮೋದಿ ಅವರ ಅಭಿಮಾನಿಯಾದ ನಟ ಮೋಹನ್ ಬಾಬು ಅವರು ಸಕುಟುಂಬ ಸಮೇತ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಹೈದರಾಬಾದಿನ ಸಿನಿತಾರೆಯರು

ಹೈದರಾಬಾದಿನ ನವಭಾರತ್ ಯುವಭೇರಿ' ಸಮಾವೇಶ ಮೋದಿ ಜತೆ ಸಿನಿತಾರೆಯರು

ಸಿನಿತಾರೆಯರು

ಗುಜರಾತ್ ಮುಖ್ಯಮಂತ್ರಿ ಮೋದಿ, ವೆಂಕಯ್ಯ ನಾಯ್ಡು ಜೊತೆ ನಟ ರಾಣಾ ದಗ್ಗುಬಾಟಿ

ಕೀರವಾಣಿ ಜತೆ ಮೋದಿ

ಖ್ಯಾತ ಸಂಗೀತಗಾರ ಎಂಎಂ ಕೀರವಾಣಿ ಜತೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ

ಸಿನಿತಾರೆಯರು

ಜಗಪತಿ ಬಾಬು ಜತೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ

ಸಿನಿತಾರೆಯರು

ಖ್ಯಾತ ಚಿತ್ರಕರ್ಮಿ ಕೆ ರಾಘವೇಂದ್ರರಾವ್ ಜತೆ ಮೋದಿ ಮಾತುಕತೆ

ದಿಲ್ ರಾಜು ಜತೆ ಮೋದಿ

ಅಖಂಡ ಆಂಧ್ರ ಉಳಿಯಲಿ ಎಂದು ಬಿಗ್ ಬಜೆಟ್ ನಿರ್ಮಾಪಕ ದಿಲ್ ರಾಜ್ ಅವರು ಮೋದಿ ಹತ್ತಿರ ತಮ್ಮ ಬಯಕೆ ತೋಡಿಕೊಂಡರು.

English summary
With biopics being the new virus in town, we now hear that talented actor Paresh Rawal will be soon playing the character of Narendra Nodi in an upcoming film.
Please Wait while comments are loading...