For Quick Alerts
  ALLOW NOTIFICATIONS  
  For Daily Alerts

  ಅಡ್ವಾನ್ಸ್ ಬುಕಿಂಗ್‌ನಲ್ಲಿ ಐದನೇ ಸ್ಥಾನಕ್ಕೇರಿದ ಪಠಾಣ್; ಕೆಜಿಎಫ್ 2 ದಾಖಲೆ ಮುರಿಯುತ್ತಾ?

  |

  ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ಬಹು ನಿರೀಕ್ಷಿತ ಚಿತ್ರ ಪಠಾಣ್ ಬಿಡುಗಡೆಗೆ ಸಜ್ಜಾಗಿದೆ. ಚಿತ್ರ ಇದೇ ಜನವರಿ 25ರಂದು ತೆರೆಗೆ ಬರಲಿದ್ದು, ದಿನಗಣನೆ ಆರಂಭವಾಗಿದೆ. ಬೇಷರಮ್ ರಂಗ್ ಹಾಡೊಂದರಿಂದಲೇ ವಿವಾದ ಹಾಗೂ ರೀಚ್ ಪಡೆದುಕೊಂಡ ಪಠಾಣ್ ಚಿತ್ರಕ್ಕೆ ಬಿಡುಗಡೆಗೂ ಮುನ್ನವೇ ದೊಡ್ಡ ವಿರೋಧ ಹುಟ್ಟುಕೊಂಡಿದೆ. ಬಾಯ್‌ಕಾಟ್ ಪಠಾಣ್ ಹ್ಯಾಷ್‌ಟ್ಯಾಗ್‌ಗಳುಳ್ಳ ಟ್ವೀಟ್ ಹಾಗೂ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದರೂ ಸಹ ಚಿತ್ರದ ಹವಾ ಮಾತ್ರ ಕಡಿಮೆಯಾಗಿಲ್ಲ.

  2018ರಲ್ಲಿ ಬಿಡುಗಡೆಗೊಂಡಿದ್ದ ಜೀರೋ ಚಿತ್ರದ ಬಳಿಕ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮೂರ್ನಾಲ್ಕು ಚಿತ್ರಗಳು ತೆರೆಕಂಡರೂ ಸಹ ಶಾರುಖ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ಯಾವೊಂದು ಚಿತ್ರವೂ ಸಹ ಬಿಡುಗಡೆಯಾಗಲಿಲ್ಲ. ಹೀಗೆ ಜೀರೋ ಬಳಿಕ ಐದು ವರ್ಷಗಳ ಬಳಿಕ ಶಾರುಖ್ ಖಾನ್ ನಟನೆಯ ಚಿತ್ರ ತೆರೆಗೆ ಬರುತ್ತಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಚಿತ್ರವನ್ನು ಬಹಳ ವರ್ಷಗಳ ಬಳಿಕ ಮೊದಲ ಶೋ ವೀಕ್ಷಿಸಲು ಕಾತರರಾಗಿದ್ದಾರೆ.

  ಇನ್ನು ದೇಶದ ಬಹುತೇಕ ಎಲ್ಲಾ ಪ್ರಮುಖ ನಗರಗಳಲ್ಲಿಯೂ ಚಿತ್ರದ ಮುಂಗಡ ಬುಕಿಂಗ್ ತೆರೆದಿದ್ದು, ದರ ದುಬಾರಿಯಾಗಿದ್ದರೂ ಸಹ ಅಭಿಮಾನಿಗಳು ಟಿಕೆಟ್ ಖರೀದಿಗಾಗಿ ಮುಗಿಬಿದ್ದಿದ್ದಾರೆ. ಹೀಗಾಗಿ ಚಿತ್ರ ಬಿಡುಗಡೆಗೆ ಇನ್ನೂ ಐದು ದಿನಗಳು ಬಾಕಿ ಇರುವಾಗಲೇ ಚಿತ್ರದ ಮುಂಗಡ ಬುಕಿಂಗ್‌ನಲ್ಲಿ ಮಾರಾಟವಾದ ಟಿಕೆಟ್‌ಗಳ ಸಂಖ್ಯೆ ಒಂದು ಲಕ್ಷವನ್ನು ದಾಟಿದ್ದು, ಭಾರತದಲ್ಲಿ ಬಿಡುಗಡೆಗೂ ಮುನ್ನ ಅತಿಹೆಚ್ಚು ಮಾರಾಟವಾದ ಟಿಕೆಟ್ ಮಾರಾಟವಾದ ಚಿತ್ರಗಳ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ.

  ಇನ್ನು ಈ ಪಟ್ಟಿಯಲ್ಲಿ ಕೆಜಿಎಫ್ ಚಾಪ್ಟರ್ 2 ಹಿಂದಿ ಅವತರಣಿಕೆ ಅಗ್ರಸ್ಥಾನದಲ್ಲಿದ್ದು, ಈ ದಾಖಲೆಯನ್ನು ಪಠಾಣ್ ಮುರಿಯುತ್ತಾ ಅಥವಾ ವಿಫಲಗೊಳ್ಳುತ್ತಾ ಎಂಬ ಕುತೂಹಲ ಈಗ ಮೂಡಿದೆ. ಮುಂಗಡವಾಗಿ ಅತಿಹೆಚ್ಚು ಟಿಕೆಟ್ ಮಾರಾಟವಾದ ಚಿತ್ರಗಳ ಟಾಪ್ 5 ಪಟ್ಟಿ ಈ ಕೆಳಕಂಡಂತಿದೆ..

  1. ಕೆಜಿಎಫ್ ಚಾಪ್ಟರ್: 5.05 ಲಕ್ಷ ಟಿಕೆಟ್‌ಗಳು

  2. ಬ್ರಹ್ಮಾಸ್ತ್ರ: 3.04 ಲಕ್ಷ ಟಿಕೆಟ್‌ಗಳು

  3. 83: 1.30 ಲಕ್ಷ ಟಿಕೆಟ್‌ಗಳು

  4. ದೃಶ್ಯಂ 2: 1.16 ಲಕ್ಷ ಟಿಕೆಟ್‌ಗಳು

  5. ಪಠಾಣ್: 1.12 ಲಕ್ಷ ಟಿಕೆಟ್‌ಗಳು ( ಬಿಡುಗಡೆಗೆ ಐದು ದಿನಗಳು ಬಾಕಿ ಇರುವಾಗ )

  English summary
  Pathaan advance booking crossed 1 lakh ticket sold in India. Take a look
  Friday, January 20, 2023, 17:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X