For Quick Alerts
  ALLOW NOTIFICATIONS  
  For Daily Alerts

  ಅಡ್ವಾನ್ಸ್ ಬುಕಿಂಗ್‌ನಲ್ಲಿ ಕೆಜಿಎಫ್ ಚಾಪ್ಟರ್ 2 ದಾಖಲೆ ಮುರಿದ ಶಾರುಖ್ ಖಾನ್ 'ಪಠಾಣ್'!

  |

  ಕಳೆದೆರಡು ವರ್ಷಗಳಿಂದ ಬಾಲಿವುಡ್‌ನ ಯಾವ ಸ್ಟಾರ್ ನಟನ ಚಿತ್ರಗಳೂ ಸಹ ಗೆಲುವು ಕಂಡಿಲ್ಲ. ಸಾಧಾರಣ ಎಂಬ ಕಥೆಯನ್ನು ಹೊಂದಿದ್ದರೂ ಕನಿಷ್ಟ ಇನ್ನೂರು ಮುನ್ನೂರು ಕೋಟಿ ರೂಪಾಯಿ ಕಲೆಕ್ಷನ್ ಅನ್ನು ಸುಲಭವಾಗಿ ಮಾಡುತ್ತಿದ್ದ ಬಾಲಿವುಡ್‌ ಸ್ಟಾರ್ ನಟರ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿಯನ್ನೂ ಕಲೆ ಹಾಕದೇ ಹಾಕಿದ್ದ ಬಂಡವಾಳದಷ್ಟೂ ಸಹ ಗಳಿಸಲಾಗದೇ ಮಕಾಡೆ ಮಲಗಿದ್ದವು.

  ಹೌದು, ಆಮೀರ್ ಖಾನ್ ರೀತಿಯ ದಿಗ್ಗಜ ನಟನ ಚಿತ್ರಗಳೂ ಸಹ ನೂರು ಕೋಟಿ ಗ್ರಾಸ್ ಕಲೆಕ್ಷನ್ ಮಾಡಲಾಗದೇ ಬಾಕ್ಸ್ ಆಫೀಸ್‌ನಲ್ಲಿ ತೊಳಲಾಡಿದವು. ಇನ್ನು ಕಂಟೆಂಟ್ ಇದ್ದ ಚಿತ್ರಗಳನ್ನು ಮಾತ್ರ ಬಾಲಿವುಡ್ ಸಿನಿ ರಸಿಕರು ವೀಕ್ಷಿಸಿ ಗೆಲ್ಲಿಸಿದರು. ಅದರಲ್ಲಿಯೂ ಹಿಂದಿಗೆ ಡಬ್ ಆದ ದಕ್ಷಿಣ ಭಾರತದ ಭಾಷೆಗಳ ಚಿತ್ರಗಳು ಬಾಲಿವುಡ್ ಚಿತ್ರಗಳಿಗಿಂತ ಹೆಚ್ಚಿನ ಕಲೆಕ್ಷನ್ ಅನ್ನು ಹಿಂದಿ ಬೆಲ್ಟ್‌ನಲ್ಲಿ ಮಾಡಿದವು. ಹೀಗೆ ಗಳಿಕೆಯಲ್ಲಿ, ಗೆಲುವಿನಲ್ಲಿ ಮಕಾಡೆ ಮಲಗಿದ ಬಾಲಿವುಡ್ ಚಿತ್ರರಂಗವನ್ನು ಶಾರುಖ್ ಖಾನ್ ಮಾತ್ರ ಕಾಪಾಡಲು ಸಾಧ್ಯ, ಆತನ ಚಿತ್ರಗಳು ಮಾತ್ರ ಹಳೆಯ ಬಾಲಿವುಡ್ ಸಿನಿಮಾಗಳ ಗತ್ತನ್ನು ವಾಪಸ್ ತರಲು ಸಾಧ್ಯ ಎಂಬ ಅಭಿಪ್ರಾಯ ಹಾಗೂ ವಿಶ್ವಾಸವನ್ನು ಹಲವು ಸಿನಿ ರಸಿಕರು ವ್ಯಕ್ತಪಡಿಸಿದ್ದರು.

  ಅದರಂತೆ ಇಂದು ( ಜನವರಿ 25 ) ಬಿಡುಗಡೆಯಾಗುತ್ತಿರುವ ಶಾರುಖ್ ಖಾನ್ ನಟನೆಯ ಬಹುನಿರೀಕ್ಷಿತ ಚಿತ್ರ ಪಠಾಣ್ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ ಹಾಗೂ ಬಿಡುಗಡೆಗೂ ಮುನ್ನವೇ ಅಡ್ವಾನ್ಸ್ ಬುಕಿಂಗ್ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಹೌದು, ಸುಮಾರು ನಾಲ್ಕು ವರ್ಷಗಳ ಬಳಿಕ ತೆರೆ ಕಾಣುತ್ತಿರುವ ಶಾರುಖ್ ಖಾನ್ ನಟನೆಯ ಚಿತ್ರವನ್ನು ಮೊದಲ ದಿನವೇ ಚಿತ್ರಮಂದಿರಗಳಲ್ಲಿ ವೀಕ್ಷಿಸಲು ಮುಗಿಬಿದ್ದ ಅಭಿಮಾನಿಗಳು ಹಾಗೂ ಸಿನಿ ರಸಿಕರು ದೊಡ್ಡ ಸಂಖ್ಯೆಯಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಿರುವ ಕಾರಣ ಮೊದಲ ದಿನದ ಅಡ್ವಾನ್ಸ್ ಬುಕಿಂಗ್‌ನಲ್ಲಿ ಪಠಾಣ್ ಚಿತ್ರ ಕೆಜಿಎಫ್ ಚಾಪ್ಟರ್ 2 ದಾಖಲೆಯನ್ನೂ ಸಹ ಹಿಂದಿಕ್ಕಿದೆ. ಹಾಗಿದ್ದರೆ ಮೊದಲ ದಿನದ ಅಡ್ವಾನ್ಸ್ ಬುಕಿಂಗ್‌ನಲ್ಲಿ ಪಠಾಣ್ ಚಿತ್ರದ ಎಷ್ಟು ಟಿಕೆಟ್‌ಗಳು ಮಾರಾಟವಾಗಿವೆ ಹಾಗೂ ಎಷ್ಟು ಹಣವನ್ನು ಗಳಿಸಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

  ಮೊದಲ ದಿನದ ಅಡ್ವಾನ್ಸ್ ಬುಕಿಂಗ್‌ನಲ್ಲಿ ಕೆಜಿಎಫ್ ಹಿಂದಿಕ್ಕಿದ ಪಠಾಣ್

  ಮೊದಲ ದಿನದ ಅಡ್ವಾನ್ಸ್ ಬುಕಿಂಗ್‌ನಲ್ಲಿ ಕೆಜಿಎಫ್ ಹಿಂದಿಕ್ಕಿದ ಪಠಾಣ್

  ಭಾರತದಲ್ಲಿ ಇರುವ ಪಿವಿಆರ್, ಐನಾಕ್ಸ್ ಹಾಗೂ ಗೋಪಾಲನ್ ರೀತಿಯ ನ್ಯಾಷನಲ್ ಮಲ್ಟಿಪ್ಲೆಕ್ಸ್ ಚೈನ್‌ನ ಚಿತ್ರಮಂದಿರಗಳ ಬಿಡುಗಡೆ ದಿನದ ಮುಂಗಡ ಬುಕಿಂಗ್‌ನಲ್ಲಿ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರ ಕೆಜಿಎಫ್ ಚಾಪ್ಟರ್ 2 ಹಿಂದಿ ವರ್ಷನ್‌ನ ಮುಂಗಡ ಬುಕಿಂಗ್ ಅನ್ನು ಹಿಂದಿಕ್ಕಿದೆ. ಹೌದು, ಬಿಡುಗಡೆ ದಿನಕ್ಕಾಗಿ ನಡೆದ ಅಡ್ವಾನ್ಸ್ ಬುಕಿಂಗ್‌ನಲ್ಲಿ ಪಠಾಣ್ ಚಿತ್ರದ 5.56 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದರೆ, ಕೆಜಿಎಫ್ ಚಾಪ್ಟರ್ 2 ಹಿಂದಿ ವರ್ಷನ್‌ನ 5.15 ಟಿಕೆಟ್‌ಗಳು ಮಾರಾಟವಾಗಿದ್ದವು. ಈ ಮೂಲಕ ಪಠಾಣ್ ಮುಂಗಡ ಬುಕಿಂಗ್‌ನಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಹಿಂದಿಕ್ಕಿ ಮುಂಗಡ ಬುಕಿಂಗ್‌ನಲ್ಲಿ ಅತಿಹೆಚ್ಚು ಟಿಕೆಟ್ ಮಾರಾಟವಾದ ಚಿತ್ರಗಳ ಹಿಂದಿ ಚಿತ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿಕೆ ಕಂಡಿದೆ.

  ಬಾಹುಬಲಿ 2 ಇಂದಿಗೂ ನಂಬರ್ ಒನ್

  ಬಾಹುಬಲಿ 2 ಇಂದಿಗೂ ನಂಬರ್ ಒನ್

  ಇನ್ನು ಮೊದಲ ದಿನದ ಟಿಕೆಟ್‌ಗಾಗಿ ನಡೆದ ಮುಂಗಡ ಬುಕಿಂಗ್‌ನಲ್ಲಿ ಅತಿಹೆಚ್ಚು ಟಿಕೆಟ್‌ಗಳು ಮಾರಾಟವಾದ ಚಿತ್ರಗಳ ಪಟ್ಟಿಯಲ್ಲಿ ಇಂದಿಗೂ ಸಹ ಎಸ್ ಎಸ್ ರಾಜಮೌಳಿ ಅವರ ದೃಶ್ಯಕಾವ್ಯ ಬಾಹುಬಲಿ 2 ಅಗ್ರಸ್ಥಾನದಲ್ಲಿದೆ. ಬಾಹುಬಲಿ 2 ಚಿತ್ರದ ಹಿಂದಿ ವರ್ಷನ್‌ನ ಬರೋಬ್ಬರಿ 6.50 ಲಕ್ಷ ಟಿಕೆಟ್‌ಗಳು ಅಡ್ವಾನ್ಸ್ ಬುಕಿಂಗ್‌ನಲ್ಲಿ ಮಾರಾಟವಾಗಿದ್ದವು.

  ಅತಿಹೆಚ್ಚು ಮುಂಗಡ ಬುಕಿಂಗ್ ಆದ ಚಿತ್ರಗಳ ಪಟ್ಟಿ

  ಅತಿಹೆಚ್ಚು ಮುಂಗಡ ಬುಕಿಂಗ್ ಆದ ಚಿತ್ರಗಳ ಪಟ್ಟಿ

  ಬಿಡುಗಡೆ ದಿನಕ್ಕಾಗಿ ನಡೆದ ಮುಂಗಡ ಬುಕಿಂಗ್‌ನಲ್ಲಿ ಅತಿಹೆಚ್ಚು ಟಿಕೆಟ್ ಮಾರಾಟವಾದ ಹಿಂದಿ ಚಿತ್ರಗಳ ( ಡಬ್ ಆದ ಚಿತ್ರಗಳನ್ನೂ ಸೇರಿಸಿ ) ಟಾಪ್ 10 ಪಟ್ಟಿ ಈ ಕೆಳಕಂಡಂತಿದೆ..


  1. ಬಾಹುಬಲಿ 2 - 6.50 ಲಕ್ಷ ಟಿಕೆಟ್‌ಗಳು

  2. ಪಠಾಣ್ - 5.56 ಲಕ್ಷ ಟಿಕೆಟ್‌ಗಳು

  3. ಕೆಜಿಎಫ್ ಚಾಪ್ಟರ್ 2 - 5.15 ಲಕ್ಷ ಟಿಕೆಟ್‌ಗಳು

  4. ವಾರ್ - 4.05 ಲಕ್ಷ ಟಿಕೆಟ್‌ಗಳು

  5. ಥಗ್ಸ್ ಆಫ್ ಹಿಂದೂಸ್ತಾನ್ - 3.46 ಲಕ್ಷ ಟಿಕೆಟ್‌ಗಳು

  6. ಪ್ರೇಮ್ ರಥನ್ ಧನ್ ಪಾಯೊ - 3.40 ಲಕ್ಷ ಟಿಕೆಟ್‌ಗಳು

  7. ಭಾರತ್ - 3.15 ಲಕ್ಷ ಟಿಕೆಟ್‌ಗಳು

  8. ಸುಲ್ತಾನ್ - 3.10 ಲಕ್ಷ ಟಿಕೆಟ್‌ಗಳು

  9. ದಂಗಲ್ - 3.05 ಲಕ್ಷ ಟಿಕೆಟ್‌ಗಳು

  10. ಬ್ರಹ್ಮಾಸ್ತ್ರ - 3.02 ಲಕ್ಷ ಟಿಕೆಟ್‌ಗಳು

  English summary
  Pathaan beats KGF Chapter 2 in advance booking records. Read on,
  Wednesday, January 25, 2023, 11:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X