For Quick Alerts
  ALLOW NOTIFICATIONS  
  For Daily Alerts

  ಕಂಗನಾ ಸಿನಿಮಾ 'ಧಾಖಡ್' ಧಾರುಣ ಸೋಲು: ಗೇಲಿ ಮಾಡಿದ ಸಹ ನಟಿ

  |

  ನಟಿ ಕಂಗನಾ ರನೌತ್‌ ಸ್ವತಃ ತಾವೇ ಹೇಳಿಕೊಂಡಿರುವಂತೆ ಬಾಲಿವುಡ್‌ನಲ್ಲಿ ಅವರಿಗ್ಯಾರೂ ಗೆಳೆಯರಿಲ್ಲ. ಅದು ಬಹುತೇಕ ನಿಜವೂ ಹೌದು, ಸದಾ ತಮ್ಮ ಕಠು ಮಾತುಗಳಿಂದ ಬಾಲಿವುಡ್‌ ಅನ್ನು, ಬಾಲಿವುಡ್ ಮಂದಿಯನ್ನು ನಿಂದಿಸುವ ಕಂಗನಾಗೆ ನಿಜಕ್ಕೂ ಬಾಲಿವುಡ್‌ನಲ್ಲಿ ಗೆಳೆಯರು ವಿರಳಾತಿ ವಿರಳ.

  ಕೆಲವು ದಿನಗಳ ಹಿಂದಷ್ಟೆ ಕಂಗನಾ ರನೌತ್ ನಟನೆಯ 'ಧಾಖಡ್' ಸಿನಿಮಾ ಬಿಡುಗಡೆ ಆಗಿದೆ. ಈ ಆಕ್ಷನ್ ಸಿನಿಮಾದಲ್ಲಿ ಗೂಢಚಾರಿಯ ಪಾತ್ರದಲ್ಲಿ ಕಂಗನಾ ಮಿಂಚಿದ್ದಾರೆ. ಆದರೆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧಾರುಣ ಸೋಲು ಕಂಡಿದೆ.

  ಕಂಗನಾ ಸಿನಿಮಾ ಸೋಲು ಕಂಡು ಬಾಲಿವುಡ್‌ನ ಹಲವರು ಒಳಗೊಳಗೆ ಖುಷಿ ಪಟ್ಟಿದ್ದಾರೆ, ಅದರಲ್ಲಿಯೂ ಕಂಗನಾರಿಂದ ತಾರಾ-ಮಾರಾ ಟೀಕೆಗೊಳಗಾದವರು ಖಂಡಿತ ಖುಷಿ ಪಟ್ಟಿದ್ದಾರೆ ಆದರೆ ಯಾರೂ ಬಹಿರಂಗವಾಗಿ ವ್ಯಕ್ತಪಡಿಸಿಲ್ಲ, ಆದರೆ ನಟಿಯೊಬ್ಬಾಕೆ ಮಾತ್ರ, 'ಧಾಖಡ್' ಸಿನಿಮಾದ ಸೋಲನ್ನು ಬಹಳ ಎಂಜಾಯ್ ಮಾಡಿದ್ದಾರೆ, ಬಹಿರಂಗವಾಗಿಯೇ ಕಂಗನಾರನ್ನು ಗೇಲಿ ಮಾಡಿದ್ದಾರೆ.

  ಸಿನಿಮಾ ಸೋಲಲಿ ಎಂದಿದ್ದ ಪಾಯಲ್

  ಸಿನಿಮಾ ಸೋಲಲಿ ಎಂದಿದ್ದ ಪಾಯಲ್

  ನಟಿ ಪಾಯಲ್ ರೊಹಟ್ಗಿ, ಕಂಗನಾರ ಸಿನಿಮಾ ಸೋತಿದ್ದಕ್ಕೆ ಬಹಳ ಖುಷಿಯಾಗಿದ್ದು, ತಮ್ಮ ಖುಷಿಯನ್ನು ಇನ್‌ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಮುಕ್ತಾಯವಾದ 'ಲಾಕ್ ಅಪ್' ರಿಯಾಲಿಟಿ ಶೋನಲ್ಲಿ ಪಾಯಲ್ ಭಾಗವಹಿಸಿದ್ದರು, ಕಂಗನಾ ನಡೆಸಿಕೊಟ್ಟ ಈ ರಿಯಾಲಿಟಿ ಶೋನಲ್ಲಿ ಪಾಯಲ್ ಗೆಲ್ಲಲಿಲ್ಲ, ಇದರಿಂದ ಸಿಟ್ಟಿಗೆದ್ದಿದ್ದ ಪಾಯಲ್, ಈ ಮೊದಲೂ ಸಹ ಕಂಗನಾರ 'ಧಾಖಡ್' ಸಿನಿಮಾ ಸೋಲಲಿ ಎಂದು ಆಶಿಸಿದ್ದರು. ಅವರ 'ಆಶಯ'ದಂತೆ ಸಿನಿಮಾ ಸೋತಿದ್ದರಿಂದ ಬಹಳ ಖುಷಿಯಾಗಿದ್ದಾರೆ ಈ ನಟಿ.

  ಕಂಗನಾ ಸಿನಿಮಾ ಸೋತಿದ್ದಕ್ಕೆ ಗೇಲಿ ಮಾಡಿದ ನಟಿ

  ಕಂಗನಾ ಸಿನಿಮಾ ಸೋತಿದ್ದಕ್ಕೆ ಗೇಲಿ ಮಾಡಿದ ನಟಿ

  'ಧಾಖಡ್' ಸಿನಿಮಾ ಮೊದಲ ದಿನ 50 ಲಕ್ಷ ಅಷ್ಟೆ ಗಳಿಸಿದೆ ಎಂಬ ಸುದ್ದಿಯನ್ನು ಹಂಚಿಕೊಂಡಿರುವ ಪಾಯಲ್, ''ಕರ್ಮ ಎಂಬುದು ಬಹಳ ಕೆಟ್ಟದ್ದು, ಯಾರಿಗೆ 18 ಲಕ್ಷ ಮತಗಳು ಸಿಕ್ಕಿತ್ತೊ ಅವರು ಸಿನಿಮಾ ಬಗ್ಗೆ ಪ್ರಚಾರ ಮಾಡಲಿಲ್ಲ, ಅಥವಾ ಅವನ ಬಾಟ್ (ನಕಲಿ ಫಾಲೋವರ್ಸ್) ಗಳು ಬಂದು ಸಿನಿಮಾ ನೋಡಲಿಲ್ಲ. ಸೀತೆಯ ಬಗ್ಗೆ ಕಂಗನಾ ಸಿನಿಮಾ ಮಾಡಲಿದ್ದಾರೆ, ಸೀತಾ ಮಾತೆಯನ್ನು ಅಪಮಾನಿಸಿದವನಿಗೆ ಅದರಲ್ಲಿ ಪಾತ್ರ ಸಿಕ್ಕರೂ ಸಿಗಬಹುದು. ಏಕೆಂದರೆ ಅವರಿಗೆ ತಮ್ಮತನವನ್ನು ಸಮಾಜಕ್ಕೆ ತೋರಿಸಬೇಕಾಗಿದೆ'' ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

  ಮುನಾವರ್ ಅನ್ನು ಗೆಲ್ಲಿಸಿದ್ದಕ್ಕೆ ಆಕ್ಷೇಪ

  ಮುನಾವರ್ ಅನ್ನು ಗೆಲ್ಲಿಸಿದ್ದಕ್ಕೆ ಆಕ್ಷೇಪ

  ಲಾಕ್ ಅಪ್ ರಿಯಾಲಿಟಿ ಶೋನಲ್ಲಿ ಮುನಾವರ್ ಫಾರುಖಿಯನ್ನು ಗೆಲ್ಲಿಸಿದಾಗಲೇ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರಹಾಕಿದ್ದ ಪಾಯಲ್ ರೊಹಟ್ಗಿ, ''ಸಲ್ಮಾನ್ ಖಾನ್‌ ಅರೇಂಜ್ ಮಾಡಿದ್ದ ಪಾರ್ಟಿಗೆ ಹೋದ ಬಳಿಕ ಮುನಾವರ್‌ ಅನ್ನು ಕಂಗನಾ ಗೆಲ್ಲಿಸಿದರು. ಗೆದ್ದ ವ್ಯಕ್ತಿಗೆ ಹೆಂಡತಿ ಮತ್ತು ಮಗು ಇದೆ. ಶೋನಲ್ಲಿ ಒಬ್ಬಾಕೆಯೊಂದಿಗೆ ಆತ ಚೆಕ್ಕಂದ ಆಡುತ್ತಿದ್ದ, ಒಬ್ಬಳನ್ನು ಗರ್ಲ್‌ಫ್ರೆಂಡ್ ಮಾಡಿಕೊಂಡಿದ್ದ. ಆದರೂ ಅವನ ವ್ಯಕ್ತಿತ್ವವನ್ನು ಕೊಂಡಾಡಲಾಯಿತು'' ಎಂದು ಆಕ್ಷೇಪ ವ್ಯಕ್ತಿಡಿಸದ್ದ ಪಾಯಲ್, ಕಂಗನಾರನ್ನು ಅನ್‌ಫಾಲೋ ಮಾಡಿದ್ದರು, ಹಾಗೂ 'ಧಾಖಡ್' ಸಿನಿಮಾ ಸೋಲಲಿ ಎಂದು ಆಶಿಸಿದ್ದರು.

  ಕಳಪೆ ಗಳಿಕೆ ಮಾಡಿದ 'ಧಾಖಡ್'

  ಕಳಪೆ ಗಳಿಕೆ ಮಾಡಿದ 'ಧಾಖಡ್'

  ಇನ್ನು ಕಂಗನಾ ರನೌತ್ ನಟನೆಯ 'ಧಾಖಡ್' ಸಿನಿಮಾ ಮೇ 20 ರಂದು ಬಿಡುಗಡೆ ಆಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಧಾರುಣ ಸೋಲು ಕಂಡಿದೆ. ಈವರೆಗೆ 2 ಕೋಟಿ ಸಹ ಗಳಿಸಿಲ್ಲ ಸಿನಿಮಾ. ನಿನ್ನೆಯಂತೂ ಕೆಲವು ಕಡೆ ಸಿನಿಮಾಕ್ಕೆ ಜನ ಬಾರದ ಕಾರಣ ಶೋ ಅನ್ನು ಸಹ ರದ್ದು ಮಾಡಲಾಗಿದೆ. ಸಿನಿಮಾವನ್ನು ದೀಪಕ್ ಮುಕುಟ್ ಹಾಗೂ ಸೋಹೆಲ್ ಮಕ್ಲಾಯಿ ನಿರ್ಮಾಣ ಮಾಡಿದ್ದರು. ಸಿನಿಮಾ ನಿರ್ದೇಶನ ಮಾಡಿದ್ದು ರಜನೀಶ್ ಘೈ, ಸಿನಿಮಾದಲ್ಲಿ ಕಂಗನಾ ಜೊತೆಗೆ ಅರ್ಜುನ್ ರಾಮ್‌ಪಾಲ್ ವಿಲನ್ ಪಾತ್ರದಲ್ಲಿ ನಟಿಸಿದ್ದರು.

  English summary
  Actress Payal Rohatgi make fun of actress Kangana Ranaut for her movie Dhaakad failure at box office.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X