For Quick Alerts
  ALLOW NOTIFICATIONS  
  For Daily Alerts

  ಸೋನು ಸೂದ್ ಭೇಟಿಗೆ ನೂರಾರು ಮೈಲಿ ದೂರದಿಂದ ಬರುತ್ತಿರುವ ಜನ

  |

  ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಬಿಡುವಿಲ್ಲದೆ ಶ್ರಮಿಕರು, ಕಾರ್ಮಿಕರಾಗಿ ಕೆಲಸ ಮಾಡಿದ ಸೋನು ಸೂದ್ ಇನ್ನೂ ವಿರಮಿಸಿಲ್ಲ, ತಮ್ಮನ್ನು ಸಹಾಯಕ್ಕಾಗಿ ಬೇಡಿದ ಬಹುತೇಕ ಎಲ್ಲರಿಗೂ ಸಹಾಯ ಹಸ್ತ ಚಾಚುತ್ತಿದ್ದಾರೆ ಸೂನು ಸೂದ್.

  ಸೋನು ಸೂದ್ ಹೋದಲ್ಲೆಲ್ಲಾ ಅವರನ್ನು ಜನರು ಮುತ್ತಿಕೊಳ್ಳುತ್ತಿದ್ದಾರೆ. ಅವರಿಂದ ಸಹಾಯ ಪಡೆಯಲೆಂದು ದೂರ-ದೂರದ ಊರುಗಳಿಂದ ಕುಟುಂಬ ಸಮೇತರಾಗಿ ಜನ ಆಗಮಿಸುತ್ತಿದ್ದಾರೆ. ಹಾಗೆ ಬಂದವರನ್ನು ಭೇಟಿಯಾಗುತ್ತಿದ್ದಾರೆ ಸೋನು ಸೂದ್.

  ಕೊರೊನಾ ಲಾಕ್‌ಡೌನ್ ಅಂತ್ಯವಾದ ಬಳಿಕ ಸೋನು ಸೂದ್ ಮತ್ತೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಹೈದರಾಬಾದ್‌ನಲ್ಲಿ ತೆಲುಗು ಸಿನಿಮಾವೊಂದರ ಚಿತ್ರೀಕರಣದಲ್ಲಿದ್ದಾರೆ ಸೋನು. ಆದರೆ ಅಲ್ಲಿಗೂ ಸೋನು ಸೂದ್ ಅನ್ನು ಹುಡುಕಿಕೊಂಡು ಪ್ರತಿದಿನ ಜನ ಬರುತ್ತಿದ್ದಾರಂತೆ.

  ಚಿತ್ರೀಕರಣ ಸೆಟ್‌ಗೆ ಬರುತ್ತಿರುವ ಜನ

  ಚಿತ್ರೀಕರಣ ಸೆಟ್‌ಗೆ ಬರುತ್ತಿರುವ ಜನ

  ನೂರಾರು ಕಿ.ಮೀಗಳು ಕ್ರಮಿಸಿ ಹೈದರಾಬಾದ್‌ನಲ್ಲಿ ಚಿತ್ರೀಕರಣದಲ್ಲಿರುವ ಸೋನು ಸೂದ್‌ರಿಂದ ನೆರವು ಪಡೆಯಲು ಆಗಮಿಸಿದವರೊಂದಿಗೆ ಸೋನು ಮಾತನಾಡಿ, ಅವರ ಕಷ್ಟ ಕೇಳುತ್ತಿರುವ ವಿಡಿಯೋ ಒಂದನ್ನು ಹಿರಿಯ ಸಿನಿಮಾ ಪತ್ರಕರ್ತ, ವಿಮರ್ಶಕ ರಮೇಶ್ ಬಾಲಾ ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ.

  'ಸಹಾಯ ಮಾಡಲು ದೇವರು ಕಳಿಸಿದ್ದಾನೋ ಏನೊ?'

  'ಸಹಾಯ ಮಾಡಲು ದೇವರು ಕಳಿಸಿದ್ದಾನೋ ಏನೊ?'

  ರಮೇಶ್ ಬಾಲಾ ಅವರ ವಿಡಿಯೋಗೆ ಪ್ರತಿಕ್ರಿಯಿಸಿರುವ ಸೋನು ಸೂದ್, ಕಷ್ಟದಲ್ಲಿರುವವರಿಗೆ ಸಹಾಯ ಮಾಡಲೆಂದೇ ದೇವರು ನನ್ನನ್ನು ಕಳುಹಿಸಿದ್ದಾನೆಯೋ ಏನೋ? ನಿಮ್ಮ ಈ ಬೆನ್ನುತಟ್ಟುವ ನುಡಿಗಳಿಗೆ ಧನ್ಯವಾದ ಎಂದಿದ್ದಾರೆ ಸೋನು ಸೂದ್.

  ಸಾಮಾಜಿಕ ಜಾಲತಾಣದಲ್ಲಿ ಸಹ ಮನವಿ

  ಸಾಮಾಜಿಕ ಜಾಲತಾಣದಲ್ಲಿ ಸಹ ಮನವಿ

  ಸೋನು ಸೂದ್‌ ನೆರವು ಅಪೇಕ್ಷಿಸಿ ಹಲವಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ, ದೂರವಾಣಿ ಮೂಲಕ ಸಂಪರ್ಕಿಸುತ್ತಲೇ ಇರುತ್ತಾರೆ. ಅಂಥಹವರಿಗೆ ಸಹಾಯ ಮಾಡುವ ಸೋನು ಸೂದ್, ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಲಾಕ್‌ಡೌನ್ ಅಂತ್ಯವಾದ ನಂತರವೂ ಅವರು ತಮ್ಮ ಸೇವೆ ನಿಲ್ಲಿಸಿಲ್ಲ.

  Recommended Video

  ಒಂದು ವರ್ಷದ ಬಳಿಕ ಶೈನ್ ಶೆಟ್ಟಿ ಮನೆಗೆ ಬಂದ ಅದೃಷ್ಟ ಲಕ್ಷ್ಮಿ | Shine Shetty | Filmibeat Kannada
  ಪ್ರತಿದಿನ ರಾಶಿ-ರಾಶಿ ಪತ್ರಗಳು ಬರುತ್ತವೆ

  ಪ್ರತಿದಿನ ರಾಶಿ-ರಾಶಿ ಪತ್ರಗಳು ಬರುತ್ತವೆ

  ಇತ್ತೀಚೆಗೆ ರಾಶಿ ರಾಶಿ ಪತ್ರಗಳ ಚಿತ್ರವೊಂದನ್ನು ಸೋನು ಸೂದ್ ಹಂಚಿಕೊಂಡಿದ್ದರು. ಇವೆಲ್ಲವೂ ನೆರವು ಕೇಳಿ ಬಂದಿರುವ ಪತ್ರಗಳು. ಎಲ್ಲ ಪತ್ರಗಳಿಗೂ, ಮನವಿಗಳಿಗೂ ಸ್ಪಂದಿಸುವ ಕಾರ್ಯ ಮಾಡುತ್ತೇವೆ. ಒಂದು ದಿನ ಈ ರೀತಿಯ ಪತ್ರಗಳು ನಿಂತುಹೋಗಲಿ, ಜನರು ಕಷ್ಟಗಳಿಂದ ದೂರಾಗಲಿ ಎಂದಿದ್ದಾರೆ ಸೂನು ಸೂದ್.

  English summary
  Sonu Sood in Hyderabad. people visiting movie set to meet Sonu Sood and seek help from him.
  Tuesday, December 15, 2020, 15:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X