For Quick Alerts
  ALLOW NOTIFICATIONS  
  For Daily Alerts

  ನನ್ನಿಂದ ಜನರು ಅತಿ ಹೆಚ್ಚು ಬಯಸುತ್ತಾರೆ; ಅಮೀರ್

  |
  ಬಾಲಿವುಡ್ ಸೂಪರ್ ಸ್ಟಾರ್ ಗಳಲ್ಲಿ ಶಾರುಖ್ ಖಾನ್, ಅಮೀರ್ ಖಾನ್ ಹಾಗೂ ಸಲ್ಮಾನ್ ಖಾನ್ ಈ ಮೂವರ ಹೆಸರುಗಳೂ ಕೇಳಿ ಬರುತ್ತಿವೆ. ಆದರೆ ಅವಕಾಶ ಹಾಗೂ ಜನಪ್ರಿಯತೆ ದೃಷ್ಟಿಯಲ್ಲಿ ನೋಡಿದಾಗ ಈ ಮೂವರಲ್ಲಿ ಸಾಮ್ಯತೆಗಿಂತ ಭಿನ್ನತೆಯೇ ಜಾಸ್ತಿ. ಅಮೀರ್ ಖಾನ್ ಅವರನ್ನು ಮಿಸ್ಟರ್ ಪರ್ಫೆಕ್ಟ್ ಎಂದೇ ಕರೆಯುವ ಬಾಲಿವುಡ್ ಹಾಗೂ ಪ್ರೇಕ್ಷಕರು ಅವರಿಂದ ಹೆಚ್ಚು ಒಳ್ಳೆಯ ಹಾಗೂ ಸಾಮಾಜಿಕ ಮೌಲ್ಯಗಳುಳ್ಳ ಸಿನಿಮಾಗಳನ್ನು ನಿರೀಕ್ಷಿಸುತ್ತಾರೆ.

  ಈ ವಿಷಯ ಸ್ವತಃ ಅಮೀರ್ ಖಾನ್ ಅವರಿಗೂ ಗೊತ್ತಾಗಿದೆ. ಅಮೀರ್ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದಲೂ ಸಾಕಷ್ಟು ವಿಭಿನ್ನ ಪಾತ್ರಗಳನ್ನು ಪೋಷಿಸಿಕೊಂಡು ಬಂದಿರುವ ನಟ. 'ಲಗಾನ್', 'ತಾರೆ ಜಮೀನ್ ಪರ್' ಹಾಗೂ 'ತ್ರೀ ಈಡಿಯಟ್ಸ್' ಚಿತ್ರಗಳ ನಂತರ ಅಮೀರ್ ಖಾನ್ ಅವರನ್ನು ಪ್ರೇಕ್ಷಕರು ಮಾತ್ರವಲ್ಲದೇ ಇಡೀ ಜಗತ್ತಿನ ಜನರು ಬುದ್ಧಿವಂತ, ಕ್ರಿಯೇಟರ್ ಹಾಗೂ 'ಮೋಸ್ಟ್ ಟ್ಯಾಲೆಂಟೆಡ್' ಎಂದೇ ಗುರುತಿಸುತ್ತಾರೆ.

  "ತಲಾಶ್ ಚಿತ್ರದಲ್ಲಿ ನಾನು ಪೊಲೀಸ್ ಯುನಿಫಾರ್ಮ್ ಧರಿಸಿದ್ದೇ ತಡ, ನನ್ನನ್ನು ಈ ಮೊದಲು ಪೊಲೀಸ್ ಪಾತ್ರಗಳಲ್ಲಿ ನಟಿಸಿರುವ ಅಜಯ್ ದೇವಗನ್, ಸಲ್ಮಾನ್ ಖಾನ ಹಾಗೂ ಅಕ್ಷಯ್ ಕುಮಾರ್ ಅವರಿಗಿ ಹೋಲಿಸಿ ಅದಕ್ಕಿಂತ ನಾನು ಚೆನ್ನಾಗಿ ಮಾಡಬಹುದೆಂದು ಹಾಗೂ ಮಾಡಬೇಕೆಂದು ಬಯಸುತ್ತಾರೆ. ಇದು ನನಗೆ ಇಷ್ಟವಾಗುವುದಿಲ್ಲ. ನಾನು ಯಾರೊಂದಿಗೂ ಸ್ಪರ್ಧಿಸುವುದಿಲ್ಲ. ನಾನೇ ಬೇರೆ, ನನ್ನ ಚಿತ್ರದ ಪಾತ್ರವೇ ಬೇರೆ. ನಾನು ಒತ್ತಡವನ್ನು ಸಹಿಸಲಾರೆ" ಎಂದಿದ್ದಾರೆ ಅಮೀರ್.

  ಬರಲಿರುವ ಅಮೀರ್ ಖಾನ್ ನಟನೆಯ 'ತಲಾಶ್' ಚಿತ್ರದಲ್ಲಿ ಅಮೀರ್ ಪತ್ನಿಯಾಗಿ ರಾಣಿ ಮುಖರ್ಜಿ ನಟಿಸಿದ್ದರೆ ಸೆಕ್ಸ್ ವರ್ಕರ್ ಪಾತ್ರದಲ್ಲಿ ಕರೀನಾ ಕಪೂರ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅಮೀರ್ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರಾದರೂ ಸಂಪೂರ್ಣವಾಗಿ ಅದು ಯಾವ ರೀತಿ ಪಾತ್ರ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಒಟ್ಟಿನಲ್ಲಿ, ತಮ್ಮಿಂದ ಪ್ರೇಕ್ಷಕರು ಅತಿ ಹೆಚ್ಚು ಬಯಸುತ್ತಾರೆ ಎಂಬುದು ಅಮೀರ್ ಗಮನಕ್ಕೆ ಬಂದಿದೆ. ಆದರೆ ಆ 'ಒತ್ತಡ'ವನ್ನು ತಾವು ಸಹಿಸುವುದಿಲ್ಲ ಎಂಬುದನ್ನು ಅಮೀರ್ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

  English summary
  Aamir Khan, who is all set for Talaash, says there will always be pressure which is good as people expect more from him.
 
  Sunday, October 21, 2012, 12:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X