»   » ಚಿತ್ರಗಳಲ್ಲಿ : ಹೆಚ್ಚು ಓದಿರುವ ಹಿಂದಿ ಸ್ಟಾರ್ ಗಳು

ಚಿತ್ರಗಳಲ್ಲಿ : ಹೆಚ್ಚು ಓದಿರುವ ಹಿಂದಿ ಸ್ಟಾರ್ ಗಳು

Posted By:
Subscribe to Filmibeat Kannada

ಹಿಂದಿ ಚಿತ್ರರಂಗದ ತಾರೆಯರು ಬರೀ ತಳಕು ಬಳಕು ಜೀವನ ನಡೆಸುವುದರಲ್ಲೇ ನಿಸ್ಸೀಮರು ಎಷ್ಟೋ ಮಂದಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ ಎನ್ನುವ ಮಾತಿದೆ. ಆದರೆ, ಈ ಚಿತ್ರಸರಣಿ ಲೇಖನ ಓದಿದ ಮೇಲೆ ನಿಮ್ಮ ಅಭಿಪ್ರಾಯ ಖಂಡಿತ ಬದಲಾಗಲಿದೆ.

ಹಿಂಚಿ ಚಿತ್ರರಂಗದಲ್ಲಿ ಒಂದು ಚಾನ್ಸ್ ಸಿಕ್ಕರೆ ಸಾಕು ಓದಿಗೆ ತಿಲಾಂಜಲಿ ನೀಡುವೆ ಎನ್ನುವ ಕಾಲದಲ್ಲೂ ಯಶಸ್ಸು ಗಳಿಸಿರುವ ಸಿನಿ ತಾರೆಯರು ತಮ್ಮ ಓದನ್ನು ಮುಂದುವರೆಸಿದ ಉದಾಹರಣೆಗಳಿದೆ. ಓದಿಗೂ, ನಟನೆಗೂ ತೀರಾ ಹತ್ತಿರದ ಸಂಬಂಧವಿಲ್ಲದಿದ್ದರೂ ಉತ್ತಮ ಕಲಿಕೆ ಗ್ಲಾಮರ್ ಜಗತ್ತಿನ ತಾರೆಯರ ಸಂಸ್ಕಾರ ಹೆಚ್ಚಿಸುವುದರಲ್ಲಿ ಸಂಶಯವಿಲ್ಲ.

ಅಮಿತಾಬ್ ಬಚ್ಚನ್ ಅವರು ಸಾಹಿತಿ ಹರಿವಂಶ್ ರಾಯ್ ಬಚ್ಚನ್ ಅವರ ಪುತ್ರರಾಗಿದ್ದರಿಂದಲೋ ಏನೋ ಸಾಹಿತ್ಯ, ಶಿಕ್ಷಣದ ಕಡೆ ಹೆಚ್ಚಿನ ಆಸಕ್ತಿ ತೋರಿ ಉತ್ತಮ ಸಾಧನೆ ತೋರಿದ್ದಾರೆ. ಡಿಗ್ರಿ ಪಡೆದ ಮೇಲೆ ಬಾಲಿವುಡ್ ನಲ್ಲಿ ಹೆಚ್ಚಿನ ಸಮಯ ತೊಡಗಿಸಿಕೊಂಡಿದ್ದ್ ಎಂಬುದು ಇನ್ನೊಂದು ವಿಶೇಷ. [ಅತಿ ಕಡಿಮೆ ಓದಿರುವ ರಾಜಕಾರಣಿಗಳನ್ನು ನೋಡಿ]

ಹೀಗೆ ಒಬ್ಬೊಬ್ಬ ಸ್ಟಾರ್ ಗಳದ್ದು ಒಂದೊಂದು ಕಥೆ.. ನಿಮ್ಮ ನೆಚ್ಚಿನ ತಾರೆಯರು ಎಲ್ಲಿ ತನಕ ಓದಿದ್ದಾರೆ ಎಂಬುದನ್ನು ಇಂದಿನ ಚಿತ್ರಸರಣಿಯಲ್ಲಿ ಕಾಣಿರಿ...

ಜಾನ್ ಅಬ್ರಹಾಂ

ಬಾಂಬೆ ಸ್ಕಾಟೀಶ್ ಶಾಲೆಯಲ್ಲಿ ವಿದ್ಯಾಭ್ಯಾಸ ನಂತರ ಜೈ ಹಿಂದ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಜಾನ್ ಅಬ್ರಹಾಂ ಪದವಿ ಪಡೆದಿದ್ದಾರೆ. ನಂತರ ಮ್ಯಾನೇಜ್ ಮೆಂಟ್ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ(ಮಾಸ್ಟರ್ಸ್) ಪಡೆದಿದ್ದಾರೆ.

ಸೋನಮ್ ಕಪೂರ್

ಸಿಂಗಪುರದಲ್ಲಿರುವ ಯುನೈಟೆಡ್ ವರ್ಲ್ಡ್ ಕಾಲೇಜ್ ಆಫ್ ಸೌತ್ ಈಸ್ಟ್ ಏಷ್ಯಾದಲ್ಲಿ ವಿದ್ಯಾಭ್ಯಾಸ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದವಿ ಪಡೆದಿದ್ದಾರೆ. ಜೊತೆಗೆ ಈಸ್ಟ್ ಲಂಡನ್ ವಿಶ್ವವಿದ್ಯಾಲಯದಿಂದ ರಾಜನೀತಿ ಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಷಯವನ್ನು ಅಧ್ಯಯನ ಮಾಡಿದ್ದಾರೆ.

ಆಯುಷ್ಮಾನ್ ಖುರಾನ

ಆಯುಷ್ಮಾನ್ ಖುರಾನ ಅವರು ಚಂದೀಗಢದ ಪಂಜಾಬ್ ವಿಶ್ವ ವಿದ್ಯಾಲಯದಸ್ಕೂಲ್ ಆಫ್ ಕಮ್ಯೂನಿಕೇಷನ್ ಸ್ಟಡೀಸ್ ನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಮೇಜರ್ ಆಗಿ ಪಡೆದು ಸಾಮೂಹಿಕ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಸೋನಾಕ್ಷಿ ಸಿನ್ಹಾ

ಮುಂಬೈನ ಶ್ರೀಮತಿ ನಾಥಿ ಬಾಯಿ ದಾಮೋದರೆ ಥಾಕರೆ ಮಹಿಳಾ ವಿಶ್ವವಿದ್ಯಾಲಯದಲ್ಲಿ ಫ್ಯಾಶನ್ ಡಿಸೈನೈಂಗ್ ಕೋರ್ಸ್ ನಲ್ಲಿ ಸೋನಾಕ್ಷಿ ಸಿನ್ಹಾ ಪದವಿ ಪಡೆದಿದ್ದಾರೆ.

ಅಮಿತಾಬ್ ಬಚ್ಚನ್

ವಿಜ್ಞಾನ ಹಾಗೂ ಕಲೆ ವಿಭಾಗದಲ್ಲಿ ಡಬಲ್ ಡಿಗ್ರಿ ಪಡೆದಿದ್ದಾರೆ. ದೆಹಲಿಯ ಕಿರೊರಿ ಮಾಲ್ ಕಾಲೇಜಿನಲ್ಲಿ ಅಮಿತಾಬ್ ಬಚ್ಚನ್ ಅಧ್ಯಯನ ಮಾಡಿದ್ದಾರೆ.

ಪ್ರೀತಿ ಜಿಂಟಾ

ಇಂಗ್ಲೀಷ್ ಹಾನರ್ಸ್ ಡಿಗ್ರಿ ಪಡೆದ ಮೇಲೆ ಪ್ರೀತಿ ಜಿಂಟಾ ಅವರು ಕ್ರಿಮಿನಲ್ ಸೈಕಾಲಜಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ರಣದೀಪ್ ಹೂಡಾ

ಮಾರ್ಕೆಟಿಂಗ್ ವಿಷಯದಲ್ಲಿ ಪದವಿ ಪಡೆದಿರುವ ರಣದೀಪ್ ಹೂಡಾ ನಂತರ ಬಿಸಿನೆಸ್ ಮ್ಯಾನೇಜ್ಮೆಂಟ್ ಹಾಗೂ ಮಾನವ ಸಂಪನ್ಮೂಲ ನಿರ್ವಹಣೆ ವಿಷಯದಲ್ಲಿ ಆಸ್ಟ್ರೇಲಿಯಾ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಸೋಹಾ ಅಲಿ ಖಾನ್

ನವದೆಹಲಿಯ ದಿ ಬ್ರಿಟಿಷ್ ಸ್ಕೂಲ್ಹಾಗೂ ಆಕ್ಸ ಫರ್ಡ್ ನ ಬಲ್ಲಿಯೋಲ್ ಕಾಲೇಜಿನಲ್ಲಿ ಸೋಹಾ ಅಲಿ ಖಾನ್ ವಿದ್ಯಾಭಯಸ. ಅಂತಾರಾಷ್ಟ್ರೀಯ ವ್ಯವಹಾರಗಳ ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಹಾಗೂ ಪೊಲಿಟಿಕಲ್ ಸೈನ್ಸ್ ನಿಂದ ಸ್ನಾತಕೋತ್ತರ ಪದವಿ

ಸೋನು ಸೂದ್

ಸೋನು ಸೂದ್ ಅವರು ಯಶವಂತ್ ರಾವ್ ಚವಾಣ್ ಕಾಲೇಜ್ ಆಫ್ ಇಂಜಿನಿಯರಿಂಗ್ ನಿಂದ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ

ವಿದ್ಯಾ ಬಾಲನ್

ಸೈಂಟ್ ಕ್ಸೇವಿಯರ್ ಕಾಲೇಜಿನಿಂದ ಸೋಷಿಯಾಲಜಿ ವಿಷಯದಲ್ಲಿ ವಿದ್ಯಾಬಾಲನ್ ಪದವಿ ಪಡೆದಿದ್ದಾರೆ.

ಆರ್ ಮಾಧವನ್

ಎಲೆಕ್ಟ್ರಾನಿಕ್ಸ್ ಪದವಿ ಪಡೆದಿರುವ ಮಾಧವನ್ ಅವರು ಮಹಾರಾಷ್ಟ್ರದ ಶ್ರೇಷ್ಠ ವಿದ್ಯಾರ್ಥಿ ಪ್ರಶಸ್ತಿ ಕೂಡಾ ಗಳಿಸಿದ್ದರು.

ಅಮೀಷಾ ಪಟೇಲ್

ಮುಂಬೈನ ಕಾಥೆಡ್ರಿಲ್ ಹಾಗೂ ಜಾನ್ ಕಾನನ್ ಸ್ಕೂಲ್ ಗಳಲ್ಲಿ ವಿದ್ಯಾಭ್ಯಾಸ ನಂತರ ಮಾಸ್ಸಾಚುಟೆಸ್ ಮೆಡ್ ಫೋರ್ಡ್ ನ ಟುಫ್ಟ್ಸ್ ವಿಶ್ವವಿದ್ಯಾಲಯದಿಂದ ಎಕಾನಾಮಿಕ್ಸ್ ನಲ್ಲಿ ಪದವಿ

ಸಿದ್ದಾರ್ಥ್

ನವದೆಹಲಿಯ ಕಿರೋರಿ ಮಾಲ್ ಕಾಲೇಜಿನಿಂದ ಕಾಮರ್ಸ್ (ಹಾನರ್ಸ್) ಪದವಿ, ಮುಂಬೈನ ಎಸ್ ಪಿ ಜೈನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಹಾಗೂ ರಿಸರ್ಚ್ ನಿಂದ ಎಂಬಿಎ ಪದವಿಯನ್ನು ಸಿದ್ದಾರ್ಥ್ ಪಡೆದಿದ್ದಾರೆ.

ನೇಹಾ ಶರ್ಮ

ಭಗಲ್ ಪುರದ ಮೌಂಟ್ ಕಾರ್ಮೆಲ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡಿದ ನಂತರ ನವದೆಹಲಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಿಂದ ಫ್ಯಾಷನ್ ಡಿಸೈನರ್ ಪದವಿ

English summary
Have you ever thought how educated your favourite star is? Some of them are highly intelligent and were toppers in their school, while for some Education was never their cup of tea. While there are few actors who completed their studies and then entered the world of glamour.
Please Wait while comments are loading...