For Quick Alerts
  ALLOW NOTIFICATIONS  
  For Daily Alerts

  'ಪಿಎಂ ನರೇಂದ್ರ ಮೋದಿ' ಬಯೋಪಿಕ್ ನಿರ್ಮಾಪಕರಿಗೆ ಜೀವ ಬೆದರಿಕೆ: ದೂರು ದಾಖಲು

  |

  ಕೊರೊನಾ ಲಾಕ್ ಡೌನ್ ಬಳಿಕ ರೀ ರಿಲೀಸ್ ಆಗಲು ಸಿದ್ಧವಾಗಿರುವ 'ಪಿಎಂ ನರೇಂದ್ರ ಮೋದಿ' ಬಯೋಪಿಕ್ ನಿರ್ಮಾಪಕರಿಗೆ ಜೀವ ಬೆದರಿಕೆ ಬಂದಿರುವ ಬಗ್ಗೆ ಸುದ್ದಿಯಾಗಿದೆ. ಈ ಬಗ್ಗೆ ಚಿತ್ರದ ಸಹ ನಿರ್ಮಾಪಕ ಅಮಿತಾ ಬಿ ವಾಧ್ವಾನಿ ಮುಂಬೈ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

  'ಪಿಎಂ ನರೇಂದ್ರ ಮೋದಿ' ಬಯೋಪಿಕ್ ಕಳೆದ ವರ್ಷ ರಿಲೀಸ್ ಆಗಿತ್ತು. ನಿರೀಕ್ಷೆಯ ಮಟ್ಟಕ್ಕೆ ಸಿನಿಮಾ ಯಶಸ್ಸು ಕಂಡಿರಲಿಲ್ಲ. ಚಿತ್ರದಲ್ಲಿ ಮೋದಿ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್ ಕಾಣಿಸಿಕೊಂಡಿದ್ದರು. ಇದೀಗ ಈ ಸಿನಿಮಾವನ್ನು ಮತ್ತೆ ರಿಲೀಸ್ ಮಾಡಲು ಸಿನಿಮಾತಂಡ ನಿರ್ಧರಿಸಿ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ.

  ಮತ್ತೆ ಥಿಯೇಟರ್ ಅಂಗಳಕ್ಕೆ ಮೋದಿ ಬಯೋಪಿಕ್ ಸಿನಿಮಾ

  ಈ ನಡುವೆ ನಿರ್ಮಾಪಕರಿಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಬಂದಿದೆ. ಆಪ್ಟಿಮಿಸ್ಟಿಕ್ಸ್ ಹೆಸರಿನ ಫೇಸ್ ಬುಕ್ ಖಾತೆಯಿಂದ ಜೀವ ಬೆದರಿಕೆ ಬಂದಿರುವುದಾಗಿ ಸಹ ನಿರ್ಮಾಪಕ ಅಮಿತ್ ದೂರಿನಲ್ಲಿ ತಿಳಿಸಿದ್ದಾರೆ. 'ಸಿನಿಮಾ ರೀ ರಿಲೀಸ್ ಆಗುತ್ತಿದೆ ಎಂದು ಘೋಷಣೆ ಮಾಡಿದ್ದಕ್ಕಾಗಿ ಬೆದರಿಕೆ ಬಂದಿದೆ. ಅದೂ ಪ್ರಧಾನಮಂತ್ರಿ ಜೀವನಚರಿತ್ರೆ ಇದು ನನಗೆ ಆಘಾತವುಂಟುಮಾಡಿದೆ. ನನ್ನ ಸಿನಿಮಾ ರೀ ರಿಲೀಸ್ ಆಗುತ್ತಿದೆ ಎಂದು ಹೇಳುವುದರಲ್ಲಿ ಏನು ಅತಿರೇಕ ಇರಲಿಲ್ಲ. ಕೆಟ್ಟ ಪ್ರಚಾರಕ್ಕಾಗಿ ನಮ್ಮನ್ನು ಗುರಿ ಮಾಡುವುದು ದುರದೃಷ್ಟಕರ' ಎಂದು ಸಹ ನಿರ್ಮಾಪಕ ಅಮಿತ್ ಹೇಳಿದ್ದಾರೆ.

  ಪ್ರಣಿತಾ ಹೆಸರು ಹೇಳಿ 13 ಲಕ್ಷ ಕೊಳ್ಳೆ ಹೊಡೆದ ಖದೀಮರು | Filmibeat Kannada

  ನಿರ್ದೇಶಕ ಓಮಂಗ್ ಕುಮಾರ್ ಸಾರಥ್ಯದಲ್ಲಿ ಸಿನಿಮಾ ಮೂಡಿಬಂದಿದೆ. ಕಳೆದ ವರ್ಷ ಮೇ 24ರಂದು ಸಿನಿಮಾ ರಿಲೀಸ್ ಆಗಿತ್ತು. ಇದೀಗ 7 ತಿಂಗಳುಗಳ ಬಳಿಕ ಚಿತ್ರಮಂದಿರಗಳು ಓಪನ್ ಆಗುತ್ತಿವೆ. ಪಿಎಂ ಮೋದಿ ಸಿನಿಮಾ ಪ್ರದರ್ಶನವಾಗುತ್ತಿದೆ. ಕೊರೊನಾ ಸಮಯದಲ್ಲಿ ಚಿತ್ರಮಂದಿರಕ್ಕೆ ಜನ ಬರ್ತಾರಾ, ಪಿಎಂ ಮೋದಿ ಸಿನಿಮಾಗೆ ಈ ಬಾರಿ ಯಾವ ರೀತಿ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂದು ಕಾದುನೋಡಬೇಕು.

  English summary
  PM Narendra Modi Biopic Producer receives Threats on Social media.Producer file a complaint with Mumbai police cyber police.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X