For Quick Alerts
  ALLOW NOTIFICATIONS  
  For Daily Alerts

  ಏಳು ದಿನದಲ್ಲಿ 'ಪಿಎಂ ಮೋದಿ' ಸಿನಿಮಾ ಗಳಿಸಿದ ಹಣವೆಷ್ಟು?

  |

  ಭಾರತದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಎರಡನೇ ಬಾರಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ಪಡೆದುಕೊಂಡಿದ್ದಾರೆ. ಇಡೀ ದೇಶ ಮೋದಿ ಮತ್ತು ಮೋದಿ ಕ್ಯಾಬಿನೆಟ್ ಕುರಿತು ಮಾತನಾಡುತ್ತಿದೆ.

  ಮತ್ತೊಂದೆಡೆ ಮೋದಿ ಬಯೋಪಿಕ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೈಲೆಂಟ್ ಆಗಿ ಸದ್ದು ಮಾಡ್ತಿದೆ. ಮೇ 24 ರಂದು ತೆರೆಕಂಡಿದ್ದ ಪಿಎಂ ನರೇಂದ್ರ ಮೋದಿ ಸಿನಿಮಾ ಯಶಸ್ವಿ ಒಂದು ವಾರ ಪೂರೈಸಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಬಂದಿದ್ದರೂ ಮೋದಿ ತಿಳಿಯುವ ಕುತೂಹಲದಿಂದ ಜನ ಚಿತ್ರಮಂದಿರದ ಕಡೆ ಬರ್ತಿದ್ದಾರೆ.

  ''ನೀವು ಮೋದಿ ಫ್ಯಾನಾ?'' ಎಂಬ ಪ್ರಶ್ನೆಗೆ ದರ್ಶನ್ ನೀಡಿದ ಉತ್ತರವಿದು!

  ಮೊದಲ ದಿನ 2.88 ಕೋಟಿ ಗಳಿಸಿದ್ದ ಮೋದಿ ಸಿನಿಮಾ ಮೊದಲ ಮೂರು ದಿನದಲ್ಲಿ 11 ಕೋಟಿ ಕಲೆಕ್ಷನ್ ಮಾಡಿತ್ತು. ಸಾಧಾರಣವಾಗಿ ಪ್ರದರ್ಶನ ಕಾಣುತ್ತಿರುವ ಚಿತ್ರ ಈಗ ಏಳು ದಿನಕ್ಕೆ 19.21 ಕೋಟಿ ಗಳಿಕೆ ಕಾಣುವ ಮೂಲಕ ನಿಟ್ಟುಸಿರು ಬಿಟ್ಟಿದೆ.

  ಹಾಗ್ನೋಡಿದ್ರೆ ಸಿನಿಮಾದ ಬಜೆಟ್ ಕೇವಲ 8 ಕೋಟಿ ಎನ್ನಲಾಗಿದೆ. ಅದಕ್ಕೆ ಹೋಲಿಸಿಕೊಂಡರೇ 19.21 ಕೋಟಿ ಉತ್ತಮ ಮೊತ್ತ. ಪಿಎಂ ನರೇಂದ್ರ ಮೋದಿ ಪಾತ್ರದಲ್ಲಿ ವಿವೇಕ್ ಒಬೆರಾಯ್ ನಟಿಸಿದ್ದು, ಓಮಂಗ್ ಕುಮಾರ್ ನಿರ್ದೇಶನ ಮಾಡಿದ್ದಾರೆ.

  English summary
  Pm Narendra modi movie box office collection day 7: after completing first week in theaters modi biopic collect decent amount.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X