For Quick Alerts
  ALLOW NOTIFICATIONS  
  For Daily Alerts

  ಪೂನಂ ಪಾಂಡೆ ಅಸಭ್ಯ ವಿಡಿಯೋ ಚಿತ್ರೀಕರಣ: ಪೊಲೀಸ್ ಅಧಿಕಾರಿ ಅಮಾನತು

  |

  ಬಾಲಿವುಡ್ ನಟಿ ಕಮ್ ಮಾಡೆಲ್ ಪೂನಂ ಪಾಂಡೆಗೆ ಗೋವಾದಲ್ಲಿ ಅಸಭ್ಯ ವಿಡಿಯೋ ಚಿತ್ರೀಕರಿಸಲು ಅನುಮತಿ ನೀಡಿದ ಹಿನ್ನೆಲೆ ಓರ್ವ ಪೊಲೀಸ್ ಅಧಿಕಾರಿಯನ್ನು ಹುದ್ದೆಯಿಂದ ಅಮಾನತುಗೊಳಿಸಲಾಗಿದೆ.

  ಗೋವಾದ ಕಾನಕೋಣದ ಚಾಪೋಲಿ ಡ್ಯಾಮ್ ಬಳಿ ಅಸಭ್ಯವಾಗಿ ವಿಡಿಯೋ ಶೂಟ್ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ನಟಿ ಪೂನಂ ಹಂಚಿಕೊಂಡಿದ್ದರು. ಈ ವಿಡಿಯೋ ಭಾರಿ ವಿರೋಧ ವ್ಯಕ್ತವಾಗಿತ್ತು. ರಾಜಕೀಯವಾಗಿ ಭಾರಿ ಟೀಕೆಗೆ ಗುರಿಯಾಗಿತ್ತು.

  ಗೋವಾದಲ್ಲಿ ರಾಜಕೀಯ ತಿರುವು ಪಡೆದ ಪೂನಂ ಪಾಂಡೆ ಅಸಭ್ಯ ವಿಡಿಯೋಗೋವಾದಲ್ಲಿ ರಾಜಕೀಯ ತಿರುವು ಪಡೆದ ಪೂನಂ ಪಾಂಡೆ ಅಸಭ್ಯ ವಿಡಿಯೋ

  ನಿರ್ಬಂಧಿತ ಪ್ರದೇಶದಲ್ಲಿ ವಿಡಿಯೋ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟ ಸರ್ಕಾರದ ವಿರುದ್ಧ ವಿರೋಧ ಪಕ್ಷದವರು ಟೀಕಾಪ್ರಹಾರ ನಡೆಸಿದರು. ಕೆಲವು ಸಂಘಟನೆಗಳು ಪ್ರತಿಭಟನೆ ಸಹ ಮಾಡಿವೆ. ಈ ಸಂಬಂಧ ಗೋವಾ ಫಾರ್ವರ್ಡ್ ಪಾರ್ಟಿ ದೂರು ದಾಖಲಿಸಿದ್ದು, ನಟಿ ವಿರುದ್ಧ ಎಫ್‌ಐಆರ್ ನಮೂದಿಸಲಾಗಿದೆ.

  ಈ ವೀಡಿಯೋ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಉತ್ತೇಜನ ನೀಡುವಂತಿದ್ದು, ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಕಾನಕೋಣಕ್ಕೆ ಅಪಮಾನವಾಗಿದೆ. ಈ ವಿಡಿಯೋವನ್ನು ಸರ್ಕಾರಿ ಆಸ್ತಿಯಲ್ಲಿ ಹೇಗೆ ಚಿತ್ರೀಕರಿಸಲಾಗಿದೆ ಮತ್ತು ಯಾರ ಅನುಮತಿಯೊಂದಿಗೆ ಚಿತ್ರಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗೋವಾ ಫಾರ್ವರ್ಡ್ ಪಾರ್ಟಿ ದೂರಿದೆ.

  ಈ ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಕೆನಕೋನಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ತುಕಾರಂ ಚವಾಣ್ ಅವರನ್ನು ಅಮಾನತುಗೊಳಿಸಲಾಗಿದೆ. ಈ ಕುರಿತು ಉಪ ಪೊಲೀಸ್ ವರಿಷ್ಠಾಧಿಕಾರಿ ನೆಲ್ಸನ್ ಅಲ್ಬುಕರ್ಕ್ ಕೆನಕೋನಾದ ಪ್ರತಿಭಟನಾಕಾರರಿಗೆ ತಿಳಿಸಿದ್ದಾರೆ.

  Ambi ತಮಾಷೆಗೆ ಹೇಳಿದ್ದನ್ನ Vishnu ಸೀರಿಯಸ್ ಆಗಿ ತಗೊಂಡಿದ್ರು | Untold Story | Filmibeat Kannada

  ವಿವಾದಾತ್ಮಕ ಫೋಟೋಶೂಟ್‌ಗೆ ಸಂಬಂಧಿಸಿದಂತೆ ಗೋವಾ ಪೊಲೀಸರಿಗೆ ಸುಮಾರು ಅರ್ಧ ಡಜನ್ ಲಿಖಿತ ದೂರುಗಳು ಬಂದಿವೆ ಎನ್ನಲಾಗಿದೆ.

  English summary
  Poonam Pandey Controversy: Police inspector Suspended Who Permitted Shoot to Poonam Pandey Obscene Video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X