twitter
    For Quick Alerts
    ALLOW NOTIFICATIONS  
    For Daily Alerts

    The Kashmir Files : 'ದಿ ಕಾಶ್ಮೀರಿ ಫೈಲ್ಸ್' ಚಿತ್ರದ ಲಿಂಕ್ ಕ್ಲಿಕ್ ಮಾಡಿದ್ರೆ, ನಿಮ್ಮ ಖಾತೆಯ ಹಣ ಚೆಕ್ ಮಾಡ್ಕೊಳ್ಳಿ!

    |

    'ದಿ ಕಾಶ್ಮೀರಿ ಫೈಲ್ಸ್' ಸಿನಿಮಾ ಎಲ್ಲೆಡೆ ಚರ್ಚೆಗೆ ಕಾರಣವಾದ ಸಿನಿಮಾ. ಒಂದು ಸಿನಿಮಾದಿಂದ ಈಗಲೂ ಹಲವು ಕಡೆಗಳಲ್ಲಿ ಪರ ವಿರೋಧದ ಚರ್ಚೆಗಳು ನಡೆಯುತ್ತಿದೆ. ಮಾರ್ಚ್ 11ರಂದು ಯಾವುದೇ ಪ್ರಚಾರ ಇಲ್ಲದೇ, ಸೈಲೆಂಟ್‌ ಆಗಿ ತೆರೆಕಂಡ ಸಿನಿಮಾ ಈ 'ದಿ ಕಾಶ್ಮೀರಿ ಫೈಲ್ಸ್' .

    ರಿಲೀಸ್ ಆಗಿ ಒಂದೆರೆಡು ದಿನ ಈ ಸಿನಿಮಾದ ಬಗ್ಗೆ ಹೆಚ್ಚಾಗಿ ಯಾರು ತಲೆಕೆಡಿಸಿಕೊಂಡಿರಲಿಲ್ಲಾ. ಇದೀಗ ಈ ಸಿನಿಮಾವನ್ನು ಜನ ಮುಗಿಬಿದ್ದು ನೋಡುತ್ತಿದ್ದಾರೆ. ಯಾಕೆಂದರೆ ಈ ಚಿತ್ರ 1990ರಲ್ಲಿ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧದ ಕುರಿತು ಸಿನಿಮಾದಲ್ಲಿ ಸೆರೆ ಹಿಡಿಯಲಾಗಿದೆ.

    ಚಿತ್ರೀಕರಣ ನಡೆಸದಂತೆ ನಮ್ಮ ಮೇಲೆ ಫತ್ವಾ ಹೊರಡಿಸಲಾಗಿತ್ತು: ನಿರ್ಮಾಪಕಿ ಪಲ್ಲವಿ ಜೋಶಿಚಿತ್ರೀಕರಣ ನಡೆಸದಂತೆ ನಮ್ಮ ಮೇಲೆ ಫತ್ವಾ ಹೊರಡಿಸಲಾಗಿತ್ತು: ನಿರ್ಮಾಪಕಿ ಪಲ್ಲವಿ ಜೋಶಿ

    ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಈ ಸಿನಿಮಾದಲ್ಲಿ ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆಯ ಬಗ್ಗೆ ತುಂಬಾ ನೈಜವಾಗಿ ತೋರಿಸಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರಕ್ಕೆ ಹೆಚ್ಚು ಸ್ಕೋಪ್ ಸಿಗುತ್ತಿರೋದ್ರಿಂದ ಕೆಲ ಕಿಡಿಗೇಡಿಗಳು ಈ ಸಿನಿಮಾದ ಹೆಸರಲ್ಲಿ ಜನರನ್ನು ಯಾಮಾರಿಸುತ್ತಿದ್ದಾರೆ.

    ಚಿತ್ರ ನೋಡಲು ಈ ಲಿಂಕ್ ಕ್ಲಿಕ್ ಮಾಡಿ ಎಂಬ ಸಂದೇಶ

    ಚಿತ್ರ ನೋಡಲು ಈ ಲಿಂಕ್ ಕ್ಲಿಕ್ ಮಾಡಿ ಎಂಬ ಸಂದೇಶ

    ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಅನ್ನೇ ಸೃಷ್ಟಿಸಿದೆ. ಥಿಯೇಟರ್‌ಗೆ ಬಂದು ಧೂಳೆಬ್ಬಿಸುತ್ತಿರುವ ಈ ಬಾಲಿವುಡ್ ಸಿನಿಮಾಗಳಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಮೊದಲ ಸ್ಥಾನದಲ್ಲಿದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡಿದೆ. ಥಿಯೇಟರ್‌ಗೆ ಬಂದು ಧೂಳೆಬ್ಬಿಸುತ್ತಿರುವ ಬಾಲಿವುಡ್ ಸಿನಿಮಾಗಳಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಮೊದಲ ಸ್ಥಾನದಲ್ಲಿದೆ. ಈ ಹೊತ್ತಲ್ಲಿ ಇದೇ ಚಿತ್ರದ ಲಿಂಕ್ ನೋಡಲು ಕ್ಲಿಕ್ ಮಾಡಿ ಎಂಬ ಸಂದೇಶ ಮತ್ತು ಲಿಂಕ್ ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿದೆ.

    ನಾನು ಸಿಂಗಲ್ ಎಂದ ನಟ ಆಮಿರ್ ಖಾನ್, ಗಾಸಿಪ್‌ಗೆ ಬ್ರೇಕ್!ನಾನು ಸಿಂಗಲ್ ಎಂದ ನಟ ಆಮಿರ್ ಖಾನ್, ಗಾಸಿಪ್‌ಗೆ ಬ್ರೇಕ್!

    ಲಿಂಕ್ ಕ್ಲಿಕ್ ಮಾಡಿ ಸಿನಿಮಾ ಡೌನ್‌ಲೋಡ್ ಮಾಡಿದ್ರಾ?

    ಲಿಂಕ್ ಕ್ಲಿಕ್ ಮಾಡಿ ಸಿನಿಮಾ ಡೌನ್‌ಲೋಡ್ ಮಾಡಿದ್ರಾ?

    ಈ ಲಿಂಕ್ ಬಳಸಿ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಡೌನ್‌ಲೋಡ್ ಮಾಡಿ, ಆ ಲಿಂಕ್ ಬಳಸಿ ಹೆಚ್‌ಡಿ ಕ್ವಾಲಿಟಿ ಸಿನಿಮಾ ಡೌನ್‌ಲೋಡ್ ಮಾಡಿ ಎಂದು ಹಲವು ಸಂದೇಶಗಳು ರವಾನೆ ಆಗುತ್ತಿರುವುದು ಇದೀಗ ತಿಳಿದು ಬಂದಿದೆ. ಲಿಂಕ್ ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡಿದ ವಾಟ್ಸಾಪ್ ಬಳಕೆದಾರರು ಬಳಿಕ ತಮ್ಮ ಹಣವನ್ನು ಕಳೆದುಕೊಂಡಿರೋದು ವರದಿ ಆಗಿದೆ. ಹೀಗಾಗಿ ನಿಮಗೂ ಈ ರೀತಿಯ ಲಿಂಕ್‌ಗಳು ಬಂದರೆ ತುಂಬಾ ಜಾಗರೂಕರಾಗಿರುವುದು ಉತ್ತಮ.

    ಬ್ಯಾಂಕ್‌ ಖಾತೆ ಹ್ಯಾಕ್ ಆಗುತ್ತೆ?

    ಬ್ಯಾಂಕ್‌ ಖಾತೆ ಹ್ಯಾಕ್ ಆಗುತ್ತೆ?

    ಹೌದು.. ಇದೊಂದು ಕಳ್ಳ ಮಾರ್ಗದಿಂದ ಬರುವ ಲಿಂಕ್. ಬಳಕೆದಾರರ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ದೋಚಲೆಂದೇ ಈ ಲಿಂಕ್ ಕಳುಹಿಸುತ್ತಾರೆ. ಒಮ್ಮೆ ಈ ಲಿಂಕ್ ಕ್ಲಿಕ್ ಮಾಡಿದರೆ, ಅವರ ಬ್ಯಾಂಕ್‌ ಖಾತೆಯಿಂದ ಹಣ ಗಾಯಬ್ ಆಗುತ್ತೆ. ಇಂತಹ ಹಲವು ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ. ಇದು ಹೇಗೆ ಆಯಿತು ಎಂಬ ಸುಳಿವು ಕೂಡ ಯಾರಿಗೂ ಸಿಗಲ್ಲ. ಹೀಗಾಗಿ ಇಂತಹ ಲಿಂಕ್‌ಗಳನ್ನು ಕ್ಲಿಕ್ ಮಾಡಿ ವಂಚನೆಗೆ ಒಳಗಾಗದೇ ಎಚ್ಚರವಹಿಸುವಂತೆ ಸೈಬರ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

    ಮುಂಬೈನಲ್ಲಿ ಮುಜುಗರಕ್ಕೆ ಒಳಗಾದ ಸಮಂತಾರನ್ನು ರಕ್ಷಿಸಿದ ವರುಣ್ ಧವನ್ಮುಂಬೈನಲ್ಲಿ ಮುಜುಗರಕ್ಕೆ ಒಳಗಾದ ಸಮಂತಾರನ್ನು ರಕ್ಷಿಸಿದ ವರುಣ್ ಧವನ್

    ಸಿನಿಮಾ ಶೇ. 100 ರಷ್ಟು ತೆರಿಗೆ ವಿನಾಯಿತಿ

    ಸಿನಿಮಾ ಶೇ. 100 ರಷ್ಟು ತೆರಿಗೆ ವಿನಾಯಿತಿ

    'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಹಿನ್ನೆಲೆಯಿರುವ ಸಿನಿಮಾ. ಭಯೋತ್ಪಾದಕರ ಚಿತ್ರಹಿಂಸೆಗೆ ನಲುಗಿ ಪ್ರಾಣಬಿಟ್ಟ ಹಲವು ಕಾಶ್ಮೀರಿ ಕುಟುಂಬದ ಕಥೆಯನ್ನೇ ಈ ಸಿನಿಮಾದಲ್ಲಿ ಹೇಳಾಗಿದೆ. ಆದರೆ, ಇದು ನೈಜತೆಗೆ ಹತ್ತಿರವಾಗಿಲ್ಲ ಅನ್ನೋ ಆರೋಪ ಕೇಳಿಬರುತ್ತಿದೆ. ಹಲವು ರಾಜ್ಯಗಳಲ್ಲಿ ಈ ಸಿನಿಮಾಗೆ ತೆರಿಗೆ ವಿನಾಯಿತಿ ಕೂಡ ಸಿಕ್ಕಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.

    English summary
    Police officials have cautioned people against clicking on suspicious links sent on social media and WhatsApp from unknown persons related to the movie.
    Thursday, March 17, 2022, 19:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X