»   » ಭಟ್ಟರ ಮಗಳು ವಿಚ್ಛೇದನ ಬಗ್ಗೆ ಟ್ವಿಟ್ಟರ್ ನಲ್ಲಿ ಘೋಷಣೆ

ಭಟ್ಟರ ಮಗಳು ವಿಚ್ಛೇದನ ಬಗ್ಗೆ ಟ್ವಿಟ್ಟರ್ ನಲ್ಲಿ ಘೋಷಣೆ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಪುತ್ರಿ ನಟಿ ಕಮ್ ನಿರ್ದೇಶಕಿ ಪೂಜಾ ಭಟ್ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ.ಈ ಬಗ್ಗೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಘೋಷಿಸಿದ್ದಾರೆ. ಮನೀಶ್ ಮಖೀಜ ಜೊತೆಗಿನ 11 ವರ್ಷಗಳ ಸುಖ ದಾಂಪತ್ಯ ಕೊನೆಗೊಳಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಮಹೇಶ್ ಭಟ್ ಅವರ ಹಿರಿಯ ಪುತ್ರಿ ಪೂಜಾ 2003ರಲ್ಲಿ ಚಾನೆಲ್ ವಿ ವಿಜೆ ಮನೀಶ್ ರನ್ನು ಮೆಚ್ಚಿ ಮದುವೆಯಾಗಿದ್ದರು, 'ಪಾಪ್' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಪೂಜಾ ಮತ್ತು ಮನೀಶ್ ಪ್ರೇಮಾಂಕುರವಾಗಿತ್ತು ನಂತರ ಗೋವಾದಲ್ಲಿ ಇಬ್ಬರು ಮದುವೆಯಾಗಿದ್ದರು.

Pooja Bhatt ends marriage with husband Manish Makhija announces it on Twitter

ಆಗಾಗ ಇಬ್ಬರ ದಾಂಪತ್ಯದಲ್ಲಿ ಬಿರುಕುಗಳು ಕಾಣಿಸಿಕೊಂಡಿತ್ತು ಹಾಗೂ ತೇಪೆ ಹಚ್ಚಿ ಸರಿಪಡಿಸಲಾಗುತ್ತಿತ್ತು. ಆದರೆ, ಈಗ ಪೂಜಾ ಅವರು ವಿವಾಹ ವಿಚ್ಛೇದನ ಪಡೆಯಲು ಸಿದ್ದವಾಗಿದ್ದು, ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ.

ವಿಶೇಷವೆಂದರೆ ಪೂಜಾ ಅವರ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಕ್ಯಾಬರೇ' ಗೆ ಮನೀಶ್ ಅವರೇ ಸಂಗೀತ ನೀಡಿದ್ದಾರೆ. ಈಗಾಗಲೇ ಇಬ್ಬರು ಬೇರೆ ಬೇರೆ ವಾಸಿಸುತ್ತಿದ್ದಾರೆ. ಆದರೆ, ಇನ್ಮುಂದೆ ಸಿನಿಮಾದಲ್ಲಿ ಒಟ್ಟಿಗೆ ಕಾರ್ಯ ನಿರ್ವಹಿಸುವುದಂತೂ ಸಾಧ್ಯವಿಲ್ಲ.

ಪೂಜಾ ಭಟ್ ಅವರು ಕ್ಯಾಬರೇ ಚಿತ್ರದ ಮೂಲಕ ಮತ್ತೊಮ್ಮೆ ನಿರ್ದೇಶಕಕ್ಕೆ ಮರಳಿದ್ದು, ಈ ಚಿತ್ರದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಹೊತ್ತಿರುವ ಕ್ರಿಕೆಟರ್ ಶ್ರೀಶಾಂತ್ ಅವರಿಗೂ ಚಾನ್ಸ್ ನೀಡಿದ್ದಾರೆ. ಈ ಮೂಲಕ ಶ್ರೀಶಾಂತ್ ನೃತ್ಯಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಒದಗಿಸಿಕೊಟ್ಟಿದ್ದಾರೆ.

English summary
Bollywood actress turned director, Pooja Bhatt and her husband Manish Makhija (former Channel V VJ and restaurateur) ended their marriage after 11 years of being together. The former actress confirmed the news on Twitter

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada