For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಭಟ್ ಪುತ್ರಿಗೆ ಅತ್ಯಾಚಾರ, ಕೊಲೆ ಬೆದರಿಕೆ: ಇನ್ಸ್ಟಾಗ್ರಾಮ್ ಖಾತೆ ಲಾಕ್ ಮಾಡಿದ ಪೂಜಾ ಭಟ್

  |

  ಬಾಲಿವುಡ್ ನಿರ್ದೇಶಕ ಮತ್ತು ನಿರ್ಮಾಪಕ ಮಹೇಶ್ ಭಟ್ ಪುತ್ರಿ ನಟಿ ಪೂಜಾ ಭಟ್ ಇನ್ಸ್ಟಾಗ್ರಾಮ್ ಖಾತೆಯನ್ನು ಲಾಕ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಕೊಲೆ ಮತ್ತು ಅತ್ಯಾಚಾರ ಬೆದರಿಕೆಗಳು ಹೆಚ್ಚಾಗಿರುವ ಕಾರಣ ಇನ್ಸ್ಟಾಗ್ರಾಮ್ ಖಾತೆ ಖಾಸಗಿ ಮಾಡುವುದಾಗಿ ಹೇಳಿ ನಟಿ ಪೂಜಾ ಭಟ್ ಖಾತೆಯನ್ನು ಲಾಕ್ ಮಾಡಿದ್ದಾರೆ.

  ಬ್ರಹ್ಮ ಚಿತ್ರದಲ್ಲಿನ Upendra Pranitha ಮುಂಬೈನ ಕ್ಲಬ್‌ನಲ್ಲಿ ಹಾಡಿನ ಚಿತ್ರೀಕರಣ | Filmibeat Kannada

  ಖಾಸಗಿ ಮಾಡಿರುವುದರಿಂದ ಯಾರಾದರು ಪೂಜಾ ಪ್ರಪಂಚಕ್ಕೆ ಎಂಟ್ರಿ ಕೊಡಬೇಕು ಎಂದರೆ ರಿಕ್ವೆಸ್ಟ್ ಕಳುಹಿಸುವಂತೆ ಹೇಳಿದ್ದಾರೆ. ಬೆದರಿಕೆ ಕರೆಗಳು ಬರುತ್ತಿರುವ ಕಾರಣ ಅನೇಕರು ಕಾಮೆಂಟ್ ಹೈಡ್ ಮಾಡುವಂತೆ ಹೇಳಿದ್ದರಂತೆ. ಆದರೆ ಪೂಜಾ ಭಟ್ ತನ್ನ ಖಾತೆಯನ್ನು ಖಾಸಗಿ ಮಾಡುವ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದಾರೆ. ಮುಂದೆ ಓದಿ...

  ಸಾಮಾಜಿಕ ಜಾಲತಾಣದಲ್ಲಿ ಮಹೇಶ್ ಭಟ್ ಕುಟುಂಬ ಟ್ರೋಲ್

  ಸಾಮಾಜಿಕ ಜಾಲತಾಣದಲ್ಲಿ ಮಹೇಶ್ ಭಟ್ ಕುಟುಂಬ ಟ್ರೋಲ್

  ಸುಶಾಂತ್ ಸಿಂಗ್ ಸಾವಿನ ಬಳಿಕ ಮಹೇಶ್ ಭಟ್ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. ನೆಪೋಟಿಸಂ ಆರೋಪ ಹೊತ್ತಿರುವ ಮಹೇಶ್ ಭಟ್, ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ನಡುವಿನ ಸಂಬಂಧ ಕೂಡ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಸುಶಾಂತ್ ಸಾವಿಗೆ ಮಹೇಶ್ ಭಟ್ ಕಾರಣರಾಗಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಸುಶಾಂತ್ ಮನೆಯಿಂದ ಹೊರಬಂದ ನಂತರ ರಿಯಾ, ಮಹೇಶ್ ಭಟ್ ಜೊತೆ ಚಾಟ್ ಮಾಡಿರುವ ಸ್ಕ್ರೀನ್ ಶಾಟ್ ಲೀಕ್ ಆಗಿದೆ.

  ಸಾಮಾಜಿಕ ಜಾಲತಾಣದಿಂದ ಅಂತರ ಕಾಯ್ದುಕೊಂಡ ಕುಟುಂಬ

  ಸಾಮಾಜಿಕ ಜಾಲತಾಣದಿಂದ ಅಂತರ ಕಾಯ್ದುಕೊಂಡ ಕುಟುಂಬ

  ಮಹೇಶ್ ಭಟ್ ಮತ್ತು ಮಕ್ಕಳಾದ ಅಲಿಯಾ ಹಾಗೂ ಪೂಜಾ ವಿರುದ್ಧವೂ ನೆಟ್ಟಿಗರು ಗರಂ ಆಗಿದ್ದಾರೆ. ಟ್ರೋಲ್ ಗಳನ್ನು ಎದುರಿಸಲಾಗದೆ ಮಹೇಶ್ ಭಟ್ ಕುಟುಂಬ ಸಾಮಾಜಿಕ ಜಾಲತಾಣದಿಂದ ಅಂತರ ಕಾಯ್ದುಕೊಂಡಿದೆ. ಇದೀಗ ಪೂಜಾ ಭಟ್ "ನಾನು ದ್ವೇಷಿಸುವವರನ್ನು ದ್ವೇಷಿಸಲು ಸಮಯ, ಶಕ್ತಿ ಅಥವಾ ಆಸಕ್ತಿ ಹೊಂದಿಲ್ಲ. ನಾನು ಪ್ರೀತಿ ತೋರಿಸುತ್ತಿರುವವರನ್ನು ಪ್ರೀತಿಸುವಲ್ಲಿ ಬ್ಯುಸಿಯಾಗಿದ್ದೀನಿ" ಎಂದು ಹೇಳಿ ಇನ್ಸ್ಟಾಗ್ರಾಮ್ ಲಾಕ್ ಮಾಡಿದ್ದಾರೆ.

  ಇನ್ಸ್ಟಾಗ್ರಾಮ್ ಖಾತೆ ಲಾಕ್ ಮಾಡಿರುವ ಪೂಜಾ ಭಟ್

  ಇನ್ಸ್ಟಾಗ್ರಾಮ್ ಖಾತೆ ಲಾಕ್ ಮಾಡಿರುವ ಪೂಜಾ ಭಟ್

  ದೀರ್ಘವಾಗಿ ಪೋಸ್ಟ್ ಹಾಕಿರುವ ಪೂಜಾ "ಇನ್ಸ್ಟಾಗ್ರಾಮ್ ಅನ್ನು ಅತ್ಯಾಚಾರ ಬೆದರಿಕೆ ಹಾಕಲು, ಸಾಯಲು ಹೋಗಿ ಎಂದು ದುರುಪಯೋಗಪಡಿಸಿಕೊಳ್ಳುವ ಸ್ಥಳವಾಗಿ ಮಾರ್ಪಟ್ಟಿದೆ. ಆದರೆ ಇದನ್ನು ನಾನು ನಿರ್ಲಕ್ಷಿಸುತ್ತಿದ್ದೆ. ಪ್ರೀತಿಯನ್ನು ಒಪ್ಪಕೊಂಡರೆ, ಟೀಕೆಗಳನ್ನು ಸಹ ಸ್ವೀಕರಿಸಬೇಕು.ಆದರೆ ಯಾರಾದರು ನಿಮ್ಮ ಕುಟುಂಬದ ಸಾವು, ಟೀಕೆ ಅಥವಾ ಬೆದರಿಸುವ ಪ್ರಯತ್ನವನ್ನು ಬಯಸುವಿರಾ? ನನ್ನ ಖಾತೆಯನ್ನು ಖಾಸಗಿ ಮಾಡಿದ್ದೀನಿ. ನನ್ನ ಪ್ರಪಂಚಕ್ಕೆ ಪ್ರವೇಶ ಬಯಸಿದರೆ ರಿಕ್ವೆಸ್ಟ್ ಕಳುಹಿಸಿ" ಎಂದು ಬರೆದುಕೊಂಡಿದ್ದಾರೆ.

  ಸಡಕ್-2 ರಿಲೀಸ್ ಗೆ ರೆಡಿಯಾಗಿದೆ

  ಸಡಕ್-2 ರಿಲೀಸ್ ಗೆ ರೆಡಿಯಾಗಿದೆ

  ಪೂಜಾ ಭಟ್ ಸದ್ಯ ಸಜಕ್-2 ರಿಲೀಸ್ ಗೆ ಕಾಯುತ್ತಿದ್ದಾರೆ. ಸಡಕ್-2 ಮಹೇಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಪೂಜಾ ಭಟ್ ಮತ್ತು ಅಲಿಯಾ ಭಟ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ ಟ್ರೈಲರ್ ರಿಲೀಸ್ ಆಗಿದ್ದು, ಅತೀ ಹೆಚ್ಚು ಡಿಸ್ ಲೈಕ್ ಪಡೆದುಕೊಂಡು ದಾಖಲೆ ನಿರ್ಮಿಸಿದೆ. ಆಗಸ್ಟ್ 28ಕ್ಕೆ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ.

  English summary
  Pooja Bhatt locked her Instagram account after received death threats.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X