»   » ಪೂನಂ ಪಾಂಡೆ ಮೊದಲ ಚಿತ್ರವೇ ವಯಸ್ಕರ ಚಿತ್ರ

ಪೂನಂ ಪಾಂಡೆ ಮೊದಲ ಚಿತ್ರವೇ ವಯಸ್ಕರ ಚಿತ್ರ

Posted By:
Subscribe to Filmibeat Kannada

ವಿವಾದಿತ ರಾಣಿ, ಟ್ವೀಟರ್ ನಲ್ಲಿ ಸರಣಿ ಸ್ಟ್ರೀಪ್ ಕ್ವೀನ್ ಪೂನಂ ಪಾಂಡೆ ಕೊನೆಗೂ ಬಾಲಿವುಡ್ ಚಿತ್ರವೊಂದರಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾಳಂತೆ. ಇದರಲ್ಲೂ ವಿಶೇಷವಿದೆ..ಪೂನಂ ಪಾಂಡೆ ಮೊದಲ ಚಿತ್ರ ವಯಸ್ಕರ ಚಿತ್ರವಂತೆ.

ಈ ಬಗ್ಗೆ ಸ್ವತಃ ಪೂನಂ ಬಾಯ್ಬಿಟ್ಟಿದ್ದಾಳೆ, ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಅದರಲ್ಲಿ ಸಾಕಷ್ಟು ಬೋಲ್ಡ್ ಹಾಗೂ ಹಾಟ್ ದೃಶ್ಯಗಳಿರುತ್ತದೆ. ಆದರೆ, ಸೆನ್ಸಾರ್ ಬೋರ್ಡ್ ಏನು ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎಂಬ ನಂಬಿಕೆ ಇದೆ ಎಂದಿದ್ದಾಳೆ.

ಜನ ನನ್ನನ್ನು ಯಾವ ನೋಡಲು ಇಷ್ಟಪಡುತ್ತಾರೋ ಆ ರೀತಿ ನಾನು ಕಾಣಿಸಿಕೊಳ್ಳಬೇಕಿದೆ. ಈ ಚಿತ್ರದಲ್ಲಿ ತುಂಬಾ ಬೋಲ್ಡ್ ಸೀನ್ ಗಳಿದೆ. ಚಿತ್ರಕಥೆಗೆ ಪೂರಕವಾಗಿ ಹಾಟ್ ಸೀನ್ ಗಳಲ್ಲಿ ನಟಿಸಿದ್ದೇನೆ. ನನ್ನ ಕುಟುಂಬ ಕೂಡಾ ಚಿತ್ರಕಥೆ ಓದಿ ಮೆಚ್ಚುಗೆ ಸೂಚಿಸಿದೆ ಎಂದು ಪೂನಂ ಹೇಳಿದ್ದಾಳೆ.

ಜಿಸ್ಮಂ ಚಿತ್ರ ಖ್ಯಾತಿಯ ಅಮಿತ್ ಸಕ್ಸೇನಾ ಅವರ ನಿರ್ದೇಶನದಲ್ಲಿ ನಟಿಸುತ್ತಿರುವುದು ಖುಷಿಕೊಟ್ಟಿದೆ. ಚಿತ್ರದಲ್ಲಿ ನನಗೆ ಪ್ರಧಾನ ಪಾತ್ರವಿರಬೇಕು. ಸುಮ್ಮನೆ ಹೀಗೆ ಬಂದು ಹಾಗೆ ಹೋಗೋ ಪಾತ್ರವಾದರೆ ಏನು ಚೆಂದ. ನನ್ನ ಅಭಿಮಾನಿಗಳಿಗೂ ಇದರಿಂದ ನಿರಾಶೆಯಾಗುತ್ತದೆ. ಹಾಗಾಗಿ ಪೂರ್ಣ ಪ್ರಮಾಣದ ನಾಯಕಿ ಪಾತ್ರಕ್ಕಾಗಿ ಇಷ್ಟು ದಿನ ಕಾಯುತ್ತಿದ್ದೆ ಎಂದು ಪೂನಂ ಹೇಳಿದ್ದಾಳೆ.

ಚಿತ್ರದ ಶೂಟಿಂಗ್ ಗೂ ಮೊದಲು ಕಾರ್ಯಾಗಾರ ನಡೆಸಲಾಯಿತು. ಅದರಲ್ಲಿ ಪ್ರಣಯ ದೃಶ್ಯಗಳಲ್ಲಿ ನಟಿಸುವುದರ ಬಗ್ಗೆ ಪ್ರಾಕ್ಟಿಕಲ್ ಕ್ಲಾಸ್ ಇತ್ತು. ಸಕತ್ ಥ್ರಿಲ್ ಆಗಿತ್ತು.ಚಿತ್ರದ ಫಸ್ಟ್ ಲುಕ್ ಇನ್ನೆರಡು ದಿನಗಳಲ್ಲಿ ಹೊರಬೀಳಲಿದ್ದು, ಚಿತ್ರದ ಕಥೆ ಬಗ್ಗೆ ನಾನು ಏನು ಹೇಳಲಾರೆ ಎಂದು ಪೂನಂ ಕಿಸಿಯುತ್ತಾಳೆ.

English summary
Poonam Pandey famous serial stripper of twitter confirms that her debut movie will indeed be 'an adult film'. Poonam Pandey set to start shooting for her debut Hindi movie.
Please Wait while comments are loading...