For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಲ್ಲಿ 'ನಶಾ' ಏರಿಸಲಿರುವ ಪೂನಂ ಪಾಂಡೆ

  By Rajendra
  |

  ರೂಪದರ್ಶಿ ಪೂನಂ ಪಾಂಡೆ ಕಡೆಗೂ ಬಾಲಿವುಡ್ ಅಂಗಳಕ್ಕೆ ಅಡಿಯಿಟ್ಟಿದ್ದಾರೆ. ಆಕೆ ಅಭಿನಯಿಸಲಿರುವ ಚಿತ್ರಕ್ಕೆ ನಶಾ ಎಂದು ಹೆಸರಿಡಲಾಗಿದೆ. ಚಿತ್ರದ ಪೋಸ್ಟರ್ ಸಹ ವಿಭಿನ್ನವಾಗಿದ್ದು ಅಕ್ಷರಗಳ ಬದಲಾಗಿ ದೇಹದ ವಿವಿಧ ಭಂಗಿಗಳನ್ನೇ ಬಳಸಿಕೊಂಡಿದ್ದಾರೆ ನಿರ್ದೇಶಕರು.

  ದೇಹವನ್ನೇ ರಬ್ಬರಿನಂತೆ ಹಿಗ್ಗಿಸಿ ಕುಗ್ಗಿಸಿ ಇಂಗ್ಲಿಷ್ ಅಕ್ಷರಮಾಲೆಯನ್ನಾಗಿ ಮಾಡಿಕೊಂಡು ಚಿತ್ರದ 'ನಶಾ' ಶೀರ್ಷಿಕೆ ರಚಿಸಲಾಗಿದೆ. ಈ ವಿಭಿನ್ನ ಪ್ರಯತ್ನಕ್ಕೆ ಪೂನಂ ಅಭಿಮಾನಿಗಳು ದಂಗುಬಡಿದಂತಾಗಿದ್ದಾರೆ. ಸದ್ಯಕ್ಕೆ ಪೂನಂ ಭೂಮಿ ಮೇಲೆ ನಿಲ್ಲುತ್ತಿಲ್ಲವಂತೆ.

  'ನಶಾ' ಚಿತ್ರದ ಪೋಸ್ಟರ್ ನೋಡಿದ ಕೆಲವರಂತೂ 2013ರ ಬಾಲಿವುಡ್ ಬ್ಲ್ಯಾಕ್ ಬಸ್ಟರ್ ಚಿತ್ರ ಎಂದು ಈಗಲೇ ಘೋಷಿಸಿದ್ದಾರೆ. ತಮ್ಮ ಅಭಿಮಾನಿಗಳ ಉತ್ಸಾಹ ನೋಡಿ ಪೂನಂ ಬೆರಗಾಗಿದ್ದಾರಂತೆ. ಇಷ್ಟಕ್ಕೂ ಚಿತ್ರದ ಕಥಾವಸ್ತು ಏನೆಂದರೆ, ಯುವಕರ ದುಶ್ಚಟಗಳ ಸುತ್ತ ಕಥೆ ತಿರುಗುತ್ತದೆ.

  ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು 'ಜಿಸ್ಮ್' ಖ್ಯಾತಿಯ ನಿರ್ದೇಶಕ ಅಮಿತ್ ಸಕ್ಸೇನಾ. ಆದಿತ್ಯ ಭಾಟಿಯಾ ನಿರ್ಮಿಸುತ್ತಿರುವ ಈ ಚಿತ್ರ ನವೆಂಬರ್ ತಿಂಗಳಲ್ಲೇ ಸೆಟ್ಟೇರಲಿದೆ. Addiction ಎಂಬುದು ಚಿತ್ರದ ಅಡಿಬರಹ.

  ಅಂದಹಾಗೆ ಈ ಚಿತ್ರದಲ್ಲಿ ತುಂಬಾ ಬೋಲ್ಡ್ ಸೀನ್ ಗಳಿವೆಯಂತೆ. ಇದು ವಯಸ್ಕರ ಚಿತ್ರವೋ ಅಥವಾ ಅದನ್ನೂ ಮೀರಿದ್ದೋ ಎಂಬ ಬಗ್ಗೆ ಸದ್ಯಕ್ಕೆ ನಿಖರವಾದ ಮಾಹಿತಿ ಇಲ್ಲ. ಚಿತ್ರದಲ್ಲಿ ನನಗೆ ಪ್ರಧಾನ ಪಾತ್ರವಿರಬೇಕು. ಸುಮ್ಮನೆ ಹೀಗೆ ಬಂದು ಹಾಗೆ ಹೋಗೋ ಪಾತ್ರವಾದರೆ ಏನು ಚೆಂದ. ನನ್ನ ಅಭಿಮಾನಿಗಳಿಗೂ ಇದರಿಂದ ನಿರಾಶೆಯಾಗುತ್ತದೆ. ಹಾಗಾಗಿ ಪೂರ್ಣ ಪ್ರಮಾಣದ ನಾಯಕಿ ಪಾತ್ರಕ್ಕಾಗಿ ಇಷ್ಟು ದಿನ ಕಾಯುತ್ತಿದ್ದೆ ಎಂದು ಪೂನಂ ಹೇಳಿದ್ದಾಳೆ. (ಏಜೆನ್ಸೀಸ್)

  English summary
  Actress Poonam Pandey’s first film is aptly titled Nasha, directed by Jism fame Amit Saxena, Nasha will go on the floors next week in Mumbai and is produced by Aditya Bhatia.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X