For Quick Alerts
  ALLOW NOTIFICATIONS  
  For Daily Alerts

  ಬ್ಲ್ಯಾಕ್ ಮೇಲ್ ಮಾಡಿದ್ರು..ಫೋನ್ ನಂಬರ್ ಲೀಕ್ ಮಾಡಿದ್ರು- ಕುಂದ್ರ ವಿರುದ್ಧ ಸಿಡಿದೆದ್ದ ಪೂನಂ

  |

  ಬ್ಲೂ ಫಿಲ್ಮ್ ದಂಧೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರ ವಿರುದ್ಧ ಕ್ಷಣಕ್ಕೊಂದು ಆರೋಪ ಕೇಳಿಬರುತ್ತಿದೆ. ಇದೀಗ ಅಡಲ್ಟ್ ನಟಿ, ಮಾಡೆಲ್ ಪೂನಂ ಪಾಂಡೆ, ರಾಜ್ ಕುಂದ್ರ ವಿರುದ್ಧ ಗಂಭೀರ ಆರೋಪ ಮಾಡುವ ಮೂಲಕ ಸಿಡಿದೆದಿದ್ದಾರೆ.

  2019ರಲ್ಲಿ ಪೂನಂ ಪಾಂಡೆ ರಾಜ್ ಕುಂದ್ರ ವಿರುದ್ಧ ಬಾಂಬೆ ಹೈಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದ್ದರು. ಅಲ್ಲಿಂದ ಪೂನಂ ಪಾಂಡೆ, ರಾಜ್ ಕುಂದ್ರ ವಿರುದ್ಧ ಕಾನೂನು ಹೋರಾಟ ಮಾಡುತ್ತಿದ್ದಾರೆ. ಇದೀಗ ರಾಜ್ ಕುಂದ್ರ ಬಂಧನದ ಬಳಿಕ ಪ್ರತಿಕ್ರಿಯೆ ನೀಡಿರುವ ಪೂನಂ ಪಾಂಡೆ, 'ರಾಜ್ ಕುಂದ್ರ ಜೊತೆ ಕೆಲಸ ಮಾಡಿರುವುದು ನನ್ನ ಜೀವನದ ದೊಡ್ಡ ತಪ್ಪು' ಎಂದು ಹೇಳಿದ್ದಾರೆ. ಮುಂದೆ ಓದಿ...

  ರಾಜ್ ಕುಂದ್ರ ಜೊತೆ ಪೂನಂ ಒಪ್ಪಂದ

  ರಾಜ್ ಕುಂದ್ರ ಜೊತೆ ಪೂನಂ ಒಪ್ಪಂದ

  ರಾಜ್ ಕುಂದ್ರ ತನಗೆ ಬ್ಲಾಕ್ ಮೇಲ್ ಮಾಡಿದ್ದಾರೆ. ತನ್ನ ಫೋನ್ ನಂಬರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಮಾಡಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಪೂನಂ ಪಾಂಡೆ, "ನಾನು ಅವರೊಂದಿಗೆ ಒಂದು ಒಪ್ಪಂದಕ್ಕೆ ಸಹಿ ಹಾಕಿದಾಗ, ಅದು ತಿಂಗಳ ಕಾಲ ನಡೆಯಿತು. ಬಳಿಕ ಅವರು ಮೋಸ ಮಾಡುತ್ತಿದ್ದಾರೆ, ವೃತ್ತಿಪರರಲ್ಲ ಎನ್ನುವುದು ತಿಂಗಳ ಬಳಿಕ ಸ್ಪಷ್ಟವಾಗಿ ಗೊತ್ತಾಯಿತು. ಇದರಿಂದ ನಾನು ತಕ್ಷಣ ನನ್ನ ಒಪ್ಪಂದವನ್ನು ಕೊನೆಗೊಳಿಸಿದೆ" ಎಂದಿದ್ದಾರೆ.

  ಒಪ್ಪಂದಕ್ಕೆ ಸಹಿ ಹಾಕಿರುವುದು ನನ್ನ ದೊಡ್ಡ ತಪ್ಪು

  ಒಪ್ಪಂದಕ್ಕೆ ಸಹಿ ಹಾಕಿರುವುದು ನನ್ನ ದೊಡ್ಡ ತಪ್ಪು

  "ಇವರ ಜೊತೆ ಕೆಲಸ ಮಾಡಲು ಒಪ್ಪಂದಕ್ಕೆ ಸಹಿ ಹಾಕಿರುವುದು ನನ್ನ ಜೀವನದಲ್ಲಿ ನಾನು ಮಾಡಿದ ದೊಡ್ಡ ತಪ್ಪು. ಅವರು ವಂಚಕರು. ನನ್ನ ಜೀವನ ತೆರೆದ ಪುಸ್ತಕ. ಮತ್ತೊಂದು ಹಂತದ ಆಘಾತ ಎದುರಿಸಿದೆ. ನನ್ನ ಪಾಸ್ ವರ್ಡ್ ಮತ್ತು ನನ್ನ ಮಾಹಿತಿಯನ್ನು ಅವರ ಜೊತೆ ಹಂಚಿಕೊಂಡಿದ್ದಕ್ಕೆ ನನ್ನನ್ನು ಶಪಿಸಿದೆ. ನಾನು ಒಪ್ಪಂದಕ್ಕೆ ಸಹಿ ಹಾಕಿ, ಅವರೊಂದಿಗೆ ಕೆಲಸ ಪ್ರಾರಂಭಿಸುವವರೆಗೂ ಹಣ ನೀಡಲಾಗುವುದಿಲ್ಲ ಎಂದು ನಮಗೆ ತಿಳಿಸಿದ್ದರು. ಆದರೆ ನಾನು ಇದನ್ನು ನಿರಾಕರಿಸಿದೆ. ರಾಜ್ ಕುಂದ್ರ ತಂಡ ನನ್ನ ಅಕೌಂಟ್ ಹ್ಯಾಕ್ ಮಾಡಿದರು" ಎಂದು ಪೂನಂ ಹೇಳಿದ್ದಾರೆ.

  ರಾಜ್ ಕುಂದ್ರ ನನ್ನನ್ನು ಸಂಪರ್ಕ ಮಾಡಿದ್ದರು- ಪೂನಂ

  ರಾಜ್ ಕುಂದ್ರ ನನ್ನನ್ನು ಸಂಪರ್ಕ ಮಾಡಿದ್ದರು- ಪೂನಂ

  ಹಾಟ್ ಶೂಟ್ ಆಫ್ ಗಾಗಿ ರಾಜ್ ಕುಂದ್ರ ತನ್ನನ್ನು ಸಂಪರ್ಕಿಸಿದ್ದರು ಎನ್ನುವುದನ್ನು ಪೂನಂ ಬಹಿರಂಗ ಪಡಿಸಿದ್ದಾರೆ. "ಅವರು ನನಗೆ ಮನವಲಿಸಲು ಸಾಧ್ಯವಿಲ್ಲ. ಯಾಕೆಂದರೆ ನಾನು ಕೆಲಸಕ್ಕಾಗಿ ಅವರ ಅಪ್ಲಿಕೇಶನ್ ಅವಲಂಬಿಸಿಲ್ಲ ಎಂದು ಅವರು ತಿಳಿದಿದ್ದರು. ನಾನು ಅವರ ಕಂಪನಿ ಜೊತೆಗೆನ ಎಲ್ಲಾ ಸಂಬಂಧವನ್ನು ಕೊನೆಗೊಳಿಸಲು ಬಯಸುತ್ತೇನೆ. ನನ್ನ ಹೆಸರಿನಲ್ಲಿ ಅವರು ರಚಿಸಿದ ಅಪ್ಲಿಕೇಶನ್ ಅನ್ನು ಇಂಟರ್ ನೆಟ್ ತೆಗೆದು ಹಾಕಿದೆ" ಎಂದಿದ್ದಾರೆ.

  ನನ್ನ ನಂಬರ್ ಲೀಕ್ ಮಾಡಿದ್ರು

  ನನ್ನ ನಂಬರ್ ಲೀಕ್ ಮಾಡಿದ್ರು

  "ಸ್ವಲ್ಪ ಸಮಯದ ನಂತರ ಹಾಟ್ ಶಾಟ್ ನಲ್ಲಿ ಮತ್ತೊಂದು ಅಪ್ಲಿಕೇಷನ್ ಭಾಗವಾಗಲು ರಾಜ್ ಕುಂದ್ರ ನನ್ನನ್ನು ವೈಯಕ್ತಿಕವಾಗಿ ಸಂಪರ್ಕಸಿದ್ದರು. ಇದು 100% ಬ್ಲ್ಯಾಕ್ ಮೇಲ್ ಆಗಿತ್ತು. ನಾನು ನಿರಾಕರಿಸಿದ್ದಕ್ಕೆ ನನ್ನ ಫೋನ್ ನಂಬರ್ ಲೀಕ್ ಮಾಡಲಾಗಿತ್ತು" ಎಂದುಹೇಳಿದ್ದಾರೆ.

  ಜೀವನ ಪಯಣ ಮುಗಿಸಿದ ಕನ್ನಡದ ಯಶಸ್ವಿ ನಾಯಕಿ
  ಜುಲೈ 27ರ ವರೆಗೂ ಪೊಲೀಸ್ ಕಸ್ಟಡಿ

  ಜುಲೈ 27ರ ವರೆಗೂ ಪೊಲೀಸ್ ಕಸ್ಟಡಿ

  ಜುಲೈ 19ರಂದು ಬಂಧನಕ್ಕೊಳಗಾಗಿರುವ ರಾಜ್ ಕುಂದ್ರ ಅವರನ್ನು 23ರ ವರೆಗೂ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಇಂದು ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು, ಇದೀಗ ಜುಲೈ 27ರ ವರೆಗೂ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

  English summary
  Poonam Pandey said that Raj Kundra cheated her and leaked her phone number on the Internet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X