twitter
    For Quick Alerts
    ALLOW NOTIFICATIONS  
    For Daily Alerts

    ಬ್ಲೂ ಫಿಲ್ಮ್ ದಂಧೆ ಪ್ರಕರಣ; ರಾಜ್ ಕುಂದ್ರ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್

    |

    ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಗೆ ಇವತ್ತು ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಇಂದು ಬಾಂಬೆ ಹೈಕೋರ್ಟ್ ರಾಜ್ ಕುಂದ್ರ ಮತ್ತು ಸಹಚರ ರಿಯಾನ್ ಥೋರ್ಪೆ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ರಾಜ್ ಕುಂದ್ರ ಮತ್ತು ರಿಯಾನ್ ಥೋರ್ಪೆ ತಕ್ಷಣ ಬಿಡುಗಡೆ ಕೋರಿ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ಕೋರ್ಟ್ ಜಾಮೀನನ್ನು ನಿರಾಕರಿಸಿದೆ.

    Recommended Video

    ರಾಜ್ ಕುಂದ್ರಾ ಬಗ್ಗೆ ಮತ್ತಷ್ಟು ಆಘಾತಕಾರಿ ವಿಷಯ ಬಿಚ್ಚಿಟ್ಟ ಮತ್ತೊಬ್ಬ ನಟಿ

    ಈ ಬಗ್ಗೆ ಎ ಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. "ಬಾಂಬೆ ಹೈಕೋರ್ಟ್ ಉದ್ಯಮಿ ರಾಜ್ ಕುಂದ್ರ ಮತ್ತು ರಿಯಾನ್ ಥೋರ್ಪೆ ತಕ್ಷಣ ಬಿಡುಗಡೆ ಕೋರಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ" ಎಂದು ವರದಿ ಮಾಡಿದೆ.

    ಬ್ಲೂ ಫಿಲ್ಮ್ ದಂಧೆ ಪ್ರಕರಣದಲ್ಲಿ ರಾಜ್ ಕುಂದ್ರ ಅವರನ್ನು ಜುಲೈ 19ರಂದು ಬಂಧಿಸಲಾಗಿತ್ತು. ಬಳಿಕ ರಾಜ್ ಕುಂದ್ರನನ್ನು ಪೊಲೀಸ್ ಕಸ್ಟಡಿಗೆ ವಹಿಸಲಾಯಿತು. ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸದ್ಯ ಕುಂದ್ರ ನ್ಯಾಯಾಂಗ ಬಂಧನದಲ್ಲಿದ್ದಾರೆ. ಬಂಧನದ ಬಳಿಕ ಕುಂದ್ರ ಹೈಕೋರ್ಟ್ ಮೊರೆಹೋಗಿದ್ದರು. ರಾಜ್ ಕುಂದ್ರ ಪರ ವಕೀಲರು ಬಂಧನ ಕಾನೂನು ಬಾಹಿರ ಎಂದು ಪರಿಗಣಿಸಿ ತಮ್ಮ ಅರ್ಜಿಯನ್ನು ಪ್ರಶ್ನಿಸಿದ್ದರು.

     Pornography case: Bombay HC rejects pleas filed by Raj Kundra

    ರಾಜ್ ಕುಂದ್ರ ಮತ್ತು ಸಹಚರ ರಿಯಾನ್ ಥೋರ್ಪೆ ಜಾಮೀನು ಅರ್ಜಿ ವಿಚಾರಣೆ ಆಗಸ್ಟ್ 10ರಂದು ಮುಂಬೈ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಲಿದೆ. ಆಗಸ್ಟ್ 10ಕ್ಕಾದರೂ ಕುಂದ್ರ ಜೈಲಿನಿಂದ ಹೊರಬರುತ್ತಾರಾ ಎನ್ನುವ ಕುತೂಹಲ ಮೂಡಿಸಿದೆ.

    ರಾಜ್ ಕುಂದ್ರ ಬಂಧನದ ಬಳಿಕ ಕಚೇರಿ ಮೇಲೆ ದಾಳಿ ನಡೆಸಿದ್ದ ಪೊಲೀಸರಿಗೆ 68ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ಸಿಕ್ಕಿವೆ ಎನ್ನುವ ಮಾಹಿತಿ ತಿಳಿದುಬಂದಿದೆ. "ರಾಜ್ ಕುಂದ್ರಾ ಹಾಟ್ ಶಾಟ್ಸ್ ಆಪ್‌ನ ನಿರ್ವಾಹಕರಾಗಿದ್ದಾರೆ. ಶೋಧದ ಸಮಯದಲ್ಲಿ ಕುಂದ್ರಾ ಕಚೇರಿಯಿಂದ ಲ್ಯಾಪ್‌ಟ್ಯಾಪ್ ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ 68 ಅಶ್ಲೀಲ ವೀಡಿಯೊಗಳು, ಲೈಂಗಿಕ ವಿಷಯದ ಸ್ಕ್ರಿಪ್ಟ್‌ಗಳು, ಹಾಟ್‌ಶಾಟ್ಸ್ ನ ಹಣಕಾಸು ಪ್ರೊಜೆಕ್ಷನ್, ಮಾರ್ಕೆಟಿಂಗ್ ಕೆಲಸಗಳ ಕಾಪಿ ಸಿಕ್ಕಿವೆ'' ಎಂದು ಪೊಲೀಸರ ಪರ ವಕೀಲ ಅರುಣ ಕಾಮತ್ ಕೋರ್ಟ್ ನಲ್ಲಿ ವಾದ ಮಂಡಿಸಿದ್ದರು.

    ಇನ್ನು ರಾಜ್ ಕುಂದ್ರ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ನಟಿ ಶರ್ಲಿನ್ ಚೋಪ್ರಾ ನಿನ್ನೆ (ಆಗಸ್ಟ್ 06) ಮುಂಬೈ ಅಪರಾಧ ವಿಭಾಗದ ಪೋಲೀಸರ ಮುಂದೆ ಹಾಜರಾಗಿದ್ದರು. ಈ ಪ್ರಕರಣ ಸಂಬಂಧ ಪೊಲೀಸರು ಶರ್ಲಿನ್ ಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದರು. ಅಂದರಂತೆ ಶರ್ಲಿನ್ ಮಧ್ಯಾಹ್ನ 11.30ಕ್ಕೆ ಮುಂಬೈ ಪೊಲೀಸರ ಮುಂದೆ ಹಾಜರಾಗಿದ್ದರು. ವಿಚಾರಣೆ ಬಳಿಕ ಶರ್ಲಿನ್ ರಾತ್ರಿ 8 ಗಂಟೆಗೆ ಕಚೇರಿಯಿಂದ ಹೊರಬಂದಿದ್ದಾರೆ. ಇದಕ್ಕೂ ಮುಂಚೆ ನಟಿ ಶೆರ್ಲಿನ್ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪೊಲೀಸರು ಸಮನ್ಸ್ ನೀಡಿದ್ದು, ಬಂಧಿಸುವ ಭೀತಿಯಿಂದ ಜಾಮೀನು ಮೊರೆ ಹೋಗಿದ್ದರು. ಆದರೆ ಕೋರ್ಟ್ ನಿರೀಕ್ಷಣಾ ಜಾಮೀನು ಕೊಟ್ಟಿರಲಿಲ್ಲ.

    ವಿಚಾರಣೆ ವೇಳೆ ರಾಜ್ ಕುಂದ್ರ ಜೊತೆಗಿನ ಸಂಬಂಧ, ವಿಡಿಯೋಗಳ ನಿರ್ಮಾಣ ಸೇರಿದಂತೆ ಅನೇಕ ಪ್ರಶ್ನೆಗಳನ್ನು ಮುಂಬೈ ಪೊಲೀಸರು ಕೇಳಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

    ಇನ್ನು ರಾಜ್ ಕುಂದ್ರ ಬಂಧನದ ಬಳಿಕ ಪತ್ನಿ, ಶಿಲ್ಪಾ ಶೆಟ್ಟಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಪತಿಯ ಬಂಧನದಿಂದ ತೀರ ಮುಜುಗರಕ್ಕೆ ಒಳಗಾಗಿರುವ ಶಿಲ್ಪಾ ಸಾಮಾಜಿಕ ಜಾಲತಾಣದಿಂದ ದೂರ ಇದ್ದರು. ಆದರೆ ಇತ್ತೀಚಿಗೆ ಮೌನ ಮುರಿದ ಶಿಲ್ಪಾ ಹೇಳಿಕೆ ಬಿಡುಗಡೆ ಮಾಡಿದ್ದರು. ತನ್ನ ಗೌಪತ್ಯೆಯನ್ನು ಗೌರವಿಸುವಂತೆ ಮನವಿ ಮಾಡಿಕೊಂಡಿದ್ದರು. ತಾಯಿಯಾಗಿ, ಕುಟುಂಬಕ್ಕಾಗಿ ಕೇಳಿಕೊಳ್ಳುತ್ತಿದ್ದೇನೆ ಖಾಸಗಿತನಕ್ಕೆ ಗೌರವ ನೀಡಿ ಎಂದು ಮನವಿ ಮಾಡಿ ದೀರ್ಘ ಪತ್ರ ಬರೆದ್ದರು. ಇನ್ನು ಶಿಲ್ಪಾ ಶೆಟ್ಟಿ ಪುತ್ರ ವಿಹಾನ್ ಕೂಡ ತಾಯಿಯ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದ್ದರು.

    ಶಿಲ್ಪಾ ಶೆಟ್ಟಿ ಪೋಸ್ಟ್ ಗೆ ಅನೇಕರು ಕಾಮೆಂಟ್ ನಿಮ್ಮ ಹೇಳಿಕೆ ಬೇಡ ಲಿಂಕ್ ಸೆಂಡ್ ಮಾಡಿ ಎಂದು ಕೇಳಿಕೊಂಡಿದ್ದರು. ಇನ್ನು ಅನೇಕರು ಶಿಲ್ಪಾ ಬೆಂಬಲಕ್ಕೆ ನಿಂತಿದ್ದಾರೆ.

    English summary
    Pornography case: Bombay High Court dismisses Raj Kundra's plea challenging remand order and seeking release
    Saturday, August 7, 2021, 16:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X