For Quick Alerts
  ALLOW NOTIFICATIONS  
  For Daily Alerts

  ವೈದ್ಯರ ವಿರುದ್ಧ ಪೋಸ್ಟ್; ಕಾಮಿಡಿಯನ್ ಸುನಿಲ್ ಪಾಲ್ ವಿರುದ್ಧ ದೂರು ದಾಖಲು

  |

  ಖ್ಯಾತ ಕಮಿಡಿಯನ್ ಸುನಿಲ್ ಪಾಲ್ ವಿರುದ್ಧ ಮುಂಬೈನ ಅಂಧೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  ಕಾಮಿಡಿಯನ್ ಸುನಿಲ್ ಪಾಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತುತ ಕೋವಿಡ್ ಸನ್ನಿವೇಶದ ಬಗ್ಗೆ ವಿಡಿಯೋ ಮಾಡಿ ಮಾತನಾಡುತ್ತಾ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನು ರಾಕ್ಷಸರು, ಕಳ್ಳರು ಎಂದು ಕರೆದಿದ್ದರು. ಇದೇ ಕಾರಣಕ್ಕೆ ಅವರ ವಿರುದ್ಧ ದೂರು ದಾಖಲಾಗಿದೆ.

  'ಕೋವಿಡ್ ಸನ್ನಿವೇಶದಲ್ಲಿ ವೈದ್ಯರು ರೋಗಿಗಳಿಂದ ಹಣ ಕೀಳುತ್ತಿದ್ದಾರೆ. ಬಿಳಿ ಬಟ್ಟೆ ಧರಿಸಿದ ರಾಕ್ಷಸರಂತೆ ವರ್ತಿಸುತ್ತಿದ್ದಾರೆ. ವೈದ್ಯರು ಹಗಲು ದರೋಡೆ ಮಾಡುತ್ತಿದ್ದಾರೆ' ಎಂದು ಸುನಿಲ್ ಪಾಲ್ ತಮ್ಮ ವಿಡಿಯೋದಲ್ಲಿ ಹೇಳಿದ್ದರು.

  ವಿಡಿಯೋವನ್ನು ಆಧಾರವಾಗಿಟ್ಟುಕೊಂಡು ಮುಂಬೈ ಮೆಡಿಕಲ್ ಅಸೋಸಿಯೇಷನ್‌ನ ಅಧ್ಯಕ್ಷೆ ವೈದ್ಯೆ ಸುಶ್ಮಿತಾ ಅವರು ಅಂಧೇರಿ ಪೊಲೀಸ್ ಠಾಣೆಯಲ್ಲಿ ಸುನಿಲ್ ಪಾಲ್ ವಿರುದ್ಧ ದೂರು ದಾಖಲಿಸಿದ್ದಾರೆ.

  ದೂರು ದಾಖಲಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುನಿಲ್ ಪಾಲ್, 'ನನ್ನ ಹೇಳಿಕೆಗೆ ನಾನು ಬದ್ಧವಾಗಿದ್ದೇನೆ. ಶೇ 90 ರಷ್ಟು ವೈದ್ಯರು ಹಗಲು ದರೋಡೆಗೆ ಇಳಿದಿದ್ದಾರೆ. ಕೇವಲ 10% ವೈದ್ಯರಷ್ಟೆ ನಿಸ್ವಾರ್ಥವಾಗಿ ಸೇವೆ ಮಾಡುತ್ತಿದ್ದಾರೆ' ಎಂದಿದ್ದಾರೆ.

  ಮುಂದುವರೆದು, 'ನಾನು ಮತ್ತೊಂದು ವಿಡಿಯೋ ಮಾಡಿ ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ದಾಖಲಾಗಿರುವ ದೂರನ್ನು ಕಾನೂನು ರೀತ್ಯಾ ಎದುರಿಸುತ್ತೇನೆ' ಎಂದಿದ್ದಾರೆ.

  ಸುನಿಲ್ ಪಾಲ್ ವಿರುದ್ಧ ಭಾರತೀಯ ದಂಡ ಸಂಹಿತೆ ಅಡಿ ಮಾನಹಾನಿ, ಸಾರ್ವಜನಿಕ ದುರ್ವರ್ತನೆ ಪ್ರಕರಣಗಳು ದಾಖಲಿಸಲಾಗಿದೆ.

  Recommended Video

  ರಾಕಿಂಗ್ ಸ್ಟಾರ್ ಯಶ್ ರ ಮುಂದಿನ‌ ಪ್ಯಾನ್ ಇಂಡಿಯಾ ಚಿತ್ರಕ್ಕೆ‌ ನರ್ತನ್ ಆ್ಯಕ್ಷನ್ ಕಟ್ | Filmibeat Kannada

  ಸುನಿಲ್ ಪಾಲ್ ಖ್ಯಾತ ಕಮಿಡಿಯನ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿದ್ದಾರೆ. ತಮ್ಮ ವಾರಗೆಯ ಹಾಗೂ ಕಿರಿಯ ಕಾಮಿಡಿಯನ್‌ಗಳ ಮೇಲೆ ಆರೋಪಗಳನ್ನು ಮಾಡಿ ಅವರು ಈ ಹಿಂದೆ ಸುದ್ದಿಯಲ್ಲಿದ್ದರು.

  English summary
  Complaint lodge against comedian Sunil Pal for calling Doctors demons and thieves.
  Thursday, May 6, 2021, 10:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X