»   » ಪ್ರಭಾಸ್ ಮತ್ತು ಅಮೀರ್ ನಡುವೆ ಮೆಗಾಫೈಟ್.! ಭಾರತದ ನಂ.1 ನಟ ಯಾರು?

ಪ್ರಭಾಸ್ ಮತ್ತು ಅಮೀರ್ ನಡುವೆ ಮೆಗಾಫೈಟ್.! ಭಾರತದ ನಂ.1 ನಟ ಯಾರು?

Written By: Naveen
Subscribe to Filmibeat Kannada

'ಬಾಹುಬಲಿ 2' ಸಿನಿಮಾ ಈಗ 1000 ಕೋಟಿ ಗಡಿ ದಾಟಿದೆ. ಭಾರತ ಚಿತ್ರರಂಗದಲ್ಲೇ ಯಾವ ಸಿನಿಮಾನೂ ಮಾಡದ ಬಹುದೊಡ್ಡ ದಾಖಲೆಯನ್ನ 'ಬಾಹುಬಲಿ 2' ನಿರ್ಮಿಸಿದೆ. ದಕ್ಷಿಣ ಚಿತ್ರರಂಗವನ್ನ ಬಾಲಿವುಡ್ ಮತ್ತೆ ತಿರುಗಿ ನೋಡುವ ಹಾಗೆ ನಿರ್ದೇಶಕ ರಾಜಮೌಳಿ ಮಾಡಿದ್ದಾರೆ.

'ಬಾಹುಬಲಿ 2' ಸಿನಿಮಾದಿಂದ ಪ್ರಭಾಸ್ ಭಾರತ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಸೌತ್ ಸಿನಿಲೋಕದ ಬಾಕ್ಸ್ ಆಫೀಸ್ ಕಿಂಗ್ ಎನಿಸಿಕೊಂಡಿರುವ ಪ್ರಭಾಸ್ ಈಗ ಬಿ-ಟೌನ್ ಖಾನ್ ಗಳನ್ನ ಮೀರಿಸಿದ್ದಾರೆ. [ಭಾರತ ಚಿತ್ರ ಜಗತ್ತಿಗೆ 'ಬಾಹುಬಲಿ ನಂ ೧', ಎಲ್ಲ ಹಳೆ ದಾಖಲೆ ಪುಡಿ.. ಪುಡಿ!]

ಆದರೆ, ಗಲ್ಲಾ ಪಟ್ಟಿಗೆಯ ಇತಿಹಾಸವನ್ನ ನೋಡಿದ್ರೆ ಅಲ್ಲಿ ಅಮೀರ್ ಖಾನ್ ಸಾಧನೆ ದೊಡ್ಡದಿದೆ. ಈಗ ಪ್ರಭಾಸ್ ಅಭಿನಯದ 'ಬಾಹುಬಲಿ 2' ಸಿನಿಮಾ 1000 ಕೋಟಿ ಗಳಿಕೆ ಮಾಡಿದೆ. ಹಾಗಾದ್ರೆ, ಇಬ್ಬರಲ್ಲಿ ಯಾರು ಗ್ರೇಟ್.?

ಪ್ರಭಾಸ್ 1000 ಕೋಟಿ 'ಕಿಂಗ್'!

ಪ್ರಭಾಸ್ ಅಭಿನಯದ 'ಬಾಹುಬಲಿ 2' ಸಿನಿಮಾ 1000 ಕೋಟಿ ಗಳಿಸಿದೆ. ಸಿನಿಮಾ ರಿಲೀಸ್ ಆದ 9 ದಿನಕ್ಕೆ ಭಾರತ ಚಿತ್ರರಂಗದ ಎಲ್ಲ ದಾಖಲೆಗಳನ್ನ 'ಬಾಹುಬಲಿ 2' ಪುಡಿ ಪುಡಿ ಮಾಡಿದೆ. ಬಾಲಿವುಡ್ ಬಿಗ್ ಸ್ಟಾರ್ ಗಳ ದಾಖಲೆಯನ್ನ ಪ್ರಭಾಸ್ ಒಂದೇ ಸಿನಿಮಾದಲ್ಲಿ ಮುರಿದು ಹಾಕಿದ್ದಾರೆ.['ಬಾಹುಬಲಿ-3' ಬಗ್ಗೆ ರಾಜಮೌಳಿ ಚಿಂತನೆ: ಕಥೆ ಏನಿರಬಹುದು?]

ಅಮೀರ್ ಖಾನ್ 'ಹಿಸ್ಟರಿ'!

ಇಂಡಿಯನ್ ಸಿನಿಮಾದ ಬಾಕ್ಸ್ ಆಫೀಸ್ ಕಿಂಗ್ 'ಅಮೀರ್ ಖಾನ್'. ಯಾಕಂದ್ರೆ, ಅತಿ ಹೆಚ್ಚು ಗಳಿಕೆ ಮಾಡಿರುವ ಭಾರತದ ಸಿನಿಮಾಗಳ ಟಾಪ್ 10 ಪಟ್ಟಿಯಲ್ಲಿ ಅಮೀರ್ ಖಾನ್ ನಟಿಸಿರುವ ಸಿನಿಮಾಗಳ ಸಂಖ್ಯೆ 4. ['ಬಾಹುಬಲಿ' ಅಬ್ಬರಕ್ಕೆ ಭಾರತೀಯ ಬಾಕ್ಸ್ ಆಫೀಸ್ ಖಲ್ಲಾಸ್!]

'ಪಿಕೆ' ಗಳಿಸಿದ್ದು 792 ಕೋಟಿ

'ಅಮೀರ್ ಖಾನ್' ನಟನೆಯಲ್ಲಿ ಬಂದ 'ಪಿ.ಕೆ' ಸಿನಿಮಾ 792 ಕೋಟಿ ಗಳಿಸಿ ಭಾರತದಲ್ಲಿಯೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿತ್ತು. ಈಗ ಈ ದಾಖಲೆಯನ್ನ 'ಬಾಹುಬಲಿ 2' ಮುರಿದಿದ್ದು, 'ಪಿ.ಕೆ' ಚಿತ್ರ ಎರಡನೇ ಸ್ಥಾನಕ್ಕೆ ಇಳಿದಿದೆ.

'ದಂಗಲ್' 770 ಕೋಟಿ

2016 ರಲ್ಲಿ ಬಂದ 'ದಂಗಲ್' ಸಿನಿಮಾ ಇದುವರೆಗೆ 770 ಕೋಟಿ ಗಳಿಸಿದೆ. ಇದು ಅಮೀರ್ ಸಿನಿ ಕೆರಿಯರ್ ನಲ್ಲೆ ಅತಿ ಹೆಚ್ಚು ಗಳಿಸಿದ ಸಿನಿಮಾಗಳಲ್ಲಿ ಒಂದಾಗಿದ್ದು, ಭಾರತದ ಮೂರನೇ ದೊಡ್ಡ ಸಿನಿಮಾ.[ರಾಜಮೌಳಿ 'ಬಾಹುಬಲಿ'ಯಿಂದ ಅಮೀರ್ 'ದಂಗಲ್' ದಾಖಲೆ ಬ್ರೇಕ್!]

'ಧೂಮ್-3' 585 ಕೋಟಿ

ಅಮೀರ್ ಖಾನ್ ನಟನೆಯ 'ಧೂಮ್ 3' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 585 ಕೋಟಿ ಗಳಿಸಿದ್ದು, ಭಾರತದ 6ನೇ ಅತಿ ದೊಡ್ಡ ಸಿನಿಮಾವಾಗಿದೆ.['ಬಾಹುಬಲಿ-2' ಕಲೆಕ್ಷನ್: ಬಾಕ್ಸ್ ಆಫೀಸ್ ನಲ್ಲಿ ಹೊಸ 'ಮೌಳಿ'ಗಲ್ಲು.!]

3 ಈಡಿಯೆಟ್ಸ್

ರಾಜ್ ಕುಮಾರ್ ಇರಾನಿ ನಿರ್ದೇಶನದಲ್ಲಿ ಬಂದ '3-ಈಡಿಯೆಟ್ಸ್' ಸಿನಿಮಾ 395 ಕೋಟಿ ಗಳಿಸಿದ್ದು, 10ನೇ ಸ್ಥಾನದಲ್ಲಿದೆ.

ಇಬ್ಬರಲ್ಲಿ ಯಾರು ಗ್ರೇಟ್?

ಅಮೀರ್ ಖಾನ್ ಅಭಿನಯದ ನಾಲ್ಕು ಸಿನಿಮಾಗಳು ಇಂಡಿಯನ್ ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿವೆ. ಇತ್ತ ಪ್ರಭಾಸ್ ಒಬ್ಬ ಸೌತ್ ಸಿನಿರಂಗದ ನಟನಾಗಿ ಒಂದೇ ಚಿತ್ರದಲ್ಲಿ ಬಾಲಿವುಡ್ ನಟರನ್ನ ಮಿರಿಸುವಷ್ಟು ಹಣ ಮಾಡಿದ್ದಾರೆ. ಹೀಗಾಗಿ, ಇಬ್ಬರಲ್ಲಿ ಯಾರು ಬಾಕ್ಸ್ ಆಫೀಸ್ ಕಿಂಗ್ ಎಂದು ಹೇಳುವುದು ಕಷ್ಟದ ಮಾತು. ಆದರೆ ಇಬ್ಬರ ಸಾಧನೆ ಸಹ ಮೆಚ್ಚುವಂತಹದ್ದು.

English summary
Who is Box Office King? Aamir khan or Prabhas.? Read the article to know the answer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada