For Quick Alerts
  ALLOW NOTIFICATIONS  
  For Daily Alerts

  "ಓಂ ಬಾ ನನ್ನ ರೂಮ್‌ಗೆ".. 'ಆದಿಪುರುಷ್' ಟೀಸರ್‌ ನೋಡಿ ಪ್ರಭಾಸ್ ಗರಂ: ವಿಡಿಯೋ ವೈರಲ್

  |

  'ಆದಿಪುರುಷ್' ಟೀಸರ್ ನೋಡಿ ಸಾಕಷ್ಟು ಜನ ನಿರ್ದೇಶಕ ಓಂ ರಾವುತ್ ಮೇಲೆ ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ. ಟೀಸರ್ ರಿಲೀಸ್ ಈವೆಂಟ್ ನಂತರ ಸ್ವತಃ ಪ್ರಭಾಸ್ ಕೂಡ ನಿರ್ದೇಶಕರ ಮೇಲೆ ಗರಂ ಆಗಿದ್ದರು ಎನ್ನಲಾಗ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.

  ಭಾನುವಾರಷ್ಟೇ ಅಯೋಧ್ಯೆಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ 'ಆದಿಪುರುಷ್' ಸಿನಿಮಾ ಟೀಸರ್ ಲಾಂಚ್ ಮಾಡಲಾಗಿತ್ತು. ರಾಮಾಯಣ ಕಾವ್ಯವನ್ನು ಆಧರಿಸಿ ಈ ಮೋಷನ್ ಕ್ಯಾಪ್ಚರ್ ಆನಿಮೇಷನ್ ಸಿನಿಮಾ ಕಟ್ಟಿಕೊಡಲಾಗ್ತಿದೆ. ಸಿನಿರಸಿಕರು ಸಿನಿಮಾ ಟೀಸರ್ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಆದರೆ ಚಿತ್ರತಂಡ ಭ್ರಮನಿರಸನ ಮಾಡಿದೆ. ಪ್ರಭಾಸ್ ಅಭಿಮಾನಿಗಳಂತೂ ಟೀಸರ್ ನೋಡಿ ನಿರ್ದೇಶಕ ಓಂ ರಾವುತ್ ಮೇಲೆ ಆಕ್ರೋಶಗೊಂಡಿದ್ದಾರೆ. ಮತ್ತೊಂದ್ಕಡೆ ಟೀಸರ್ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ.

  'ಆದಿಪುರುಷ್' ಗ್ರಾಫಿಕ್ಸ್ ಬಗ್ಗೆ ರೊಚ್ಚಿಗೆದ್ದ ಫ್ಯಾನ್ಸ್: ಬಹಿರಂಗ ಪತ್ರ ಬರೆದ ಗ್ರಾಫಿಕ್ಸ್ ಕಂಪನಿ!'ಆದಿಪುರುಷ್' ಗ್ರಾಫಿಕ್ಸ್ ಬಗ್ಗೆ ರೊಚ್ಚಿಗೆದ್ದ ಫ್ಯಾನ್ಸ್: ಬಹಿರಂಗ ಪತ್ರ ಬರೆದ ಗ್ರಾಫಿಕ್ಸ್ ಕಂಪನಿ!

  ಟೀಸರ್ ಲಾಂಚ್ ಕಾರ್ಯಕ್ರಮದ ನಂತರ ತಂಡ ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಭಾರೀ ಗಲಾಟೆ ನಡೀತು ಎನ್ನಲಾಗ್ತಿದೆ. ಖುದ್ದು ಪ್ರಭಾಸ್ ಸಿನಿಮಾ ಮೇಕಿಂಗ್ ಕ್ವಾಲಿಟಿ ಬಗ್ಗೆ ಆಕ್ರೋಶಗೊಂಡು ಕೂಗಾಡಿದ್ದಾರೆ ಎನ್ನುವ ಚರ್ಚೆ ನಡೀತಿದೆ. ಅದಕ್ಕೆ ಪುಷ್ಠಿ ನೀಡುವಂತಹ ವಿಡಿಯೋವೊಂದು ವೈರಲ್ ಆಗಿದೆ.

  ಓಂ ರಾವುತ್ ಮೇಲೆ ಪ್ರಭಾಸ್ ಗರಂ?

  ಓಂ ರಾವುತ್ ಮೇಲೆ ಪ್ರಭಾಸ್ ಗರಂ?

  ಅಷ್ಟಕ್ಕೂ ಟೀಸರ್ ರಿಲೀಸ್ ಈವೆಂಟ್ ನಂತರ ಏನಾಯಿತು ಎನ್ನುವುದು ಗೊತ್ತಿಲ್ಲ. ಹೋಟೆಲ್ ರೂಂ ಬಳಿ ಪ್ರಭಾಸ್ ಗರಂ ಆಗಿರುವುದಂತು ನಿಜ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಪ್ರಭಾಸ್ ಕೋಪದಿಂದ "ಓಂ ನೀನು ಬಾ ನನ್ನ ರೂಂಗೆ, ಬರ್ತಿದ್ದೀಯಾ ಅಲ್ವಾ, ಬಾ" ಎಂದು ಕೈ ಬರೆಳು ತೋರಿಸುತ್ತಾ ಆಕ್ರೋಶದಿಂದ ಹೇಳಿರುವುದು ಕಾಣುತ್ತಿದೆ.

  ನಿರ್ದೇಶಕರಿಗೆ ಯಂಗ್ ರೆಬಲ್ ಸ್ಟಾರ್ ಕ್ಲಾಸ್?

  ನಿರ್ದೇಶಕರಿಗೆ ಯಂಗ್ ರೆಬಲ್ ಸ್ಟಾರ್ ಕ್ಲಾಸ್?

  ಸದ್ಯ ವೈರಲ್ ಆಗಿರುವ ವಿಡಿಯೋ ಬಗ್ಗೆ ನೆಟ್ಟಿಗರು ಬಗೆ ಬಗೆಯ ಕಾಮೆಂಟ್ ಮಾಡ್ತಿದ್ದಾರೆ. ಮೀಮ್ಸ್ ಕ್ರಿಯೇಟ್ ಮಾಡಿ ಟ್ರೋಲ್ ಮಾಡ್ತಿದ್ದಾರೆ. ರೂಂಗೆ ಕರೆದು ಓಂ ರಾವುತ್‌ಗೆ ಪ್ರಭಾಸ್ ಸರಿಯಾಗಿ ಕ್ಲಾಸ್ ತಗೊಂಡಿದ್ದಾರೆ, ಓಂ ನಿನಗೆ ಕಾದಿಗೆ ಮಾರಿಹಬ್ಬ, ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಪ್ರಭಾಸ್‌ರ ಈ ವರ್ತನೆಗೆ ಅಸಲಿ ಕಾರಣ ಏನು ಎನ್ನುವುದು ಮಾತ್ರ ಗೊತ್ತಾಗಿಲ್ಲ.

  'ಆದಿಪುರುಷ್' ಟೀಸರ್ ದಾಖಲೆ

  'ಆದಿಪುರುಷ್' ಟೀಸರ್ ದಾಖಲೆ

  ಎಷ್ಟೇ ಟ್ರೋಲ್ ಮಾಡಿದರೂ 'ಆದಿಪುರುಷ್' ಸಿನಿಮಾ ಟೀಸರ್ ಹೊಸ ದಾಖಲೆ ಬರೆದಿದೆ. ಎಲ್ಲಾ ಭಾಷೆಗಳು ಸೇರಿ 100 ಮಿಲಿಯನ್‌ಗೂ ಹೆಚ್ಚು ವೀವ್ಸ್ ಸಾಧಿಸಿ ಮುನ್ನುಗ್ಗುತ್ತಿದೆ. ಸ್ವತಃ ಪ್ರಭಾಸ್ ಪೋಸ್ಟ್‌ ಮಾಡಿ ಈ ಬಗ್ಗೆ ಸ್ಪಂದಿಸಿದ್ದು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಹಳೇ ದಾಖಲೆಗಳನ್ನೆಲ್ಲಾ ಅಳಿಸಿ 'ಆದಿಪುರುಷ್' ಈಗ ಹೊಸ ದಾಖಲೆ ಬರೆದಿದ್ದಾನೆ.

  ಸಂಕ್ರಾಂತಿ ಸಂಭ್ರಮದಲ್ಲಿ 'ಆದಿಪುರುಷ್' ತೆರೆಗೆ

  ಸಂಕ್ರಾಂತಿ ಸಂಭ್ರಮದಲ್ಲಿ 'ಆದಿಪುರುಷ್' ತೆರೆಗೆ

  500 ಕೋಟಿ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣ ಮಾಡಿರುವುದಾಗಿ ಹೇಳಲಾಗುತ್ತಿದೆ. ಪ್ರಭಾಸ್ ರಾಮನಾಗಿ ಕಾಣಿಸಿಕೊಂಡಿದ್ರೆ, ರಾವಣನಾಗಿ ಸೈಫ್ ಅಲಿಖಾನ್, ಸೀತೆಮಾತೆಯಾಗಿ ಕೃತಿ ಸನೂನ್, ಲಕ್ಷ್ಮಣನಾಗಿ ಸನ್ನಿ ಸಿಂಗ್ ಮಿಂಚಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಂಕ್ರಾಂತಿ ಸಂಭ್ರಮದಲ್ಲಿ 'ಆದಿಪುರುಷ್' ಸಿನಿಮಾ ತೆರೆಗೆ ಬರ್ತಿದೆ.

  English summary
  Is Prabhas angry on om Raut for disastrous response of the Adipurush teaser. Know More.
  Tuesday, October 4, 2022, 8:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X