For Quick Alerts
  ALLOW NOTIFICATIONS  
  For Daily Alerts

  KGF- 2 ದಾಖಲೆ ಉಡೀಸ್: ಟ್ರೋಲ್ ಆದರೂ 'ಆದಿಪುರುಷ್' ಆರ್ಭಟಕ್ಕೆ ಬ್ರೇಕ್ ಹಾಕುವವರಿಲ್ಲ!

  |

  ಅಯೋಧ್ಯೆಯಲ್ಲಿ ನಿನ್ನೆ(ಅಕ್ಟೋಬರ್ 2) ಅದ್ಧೂರಿಯಾಗಿ ಬಿಡುಗಡೆಯಾಗಿದ್ದ 'ಆದಿಪುರುಷ್' ಟೀಸರ್ ಹೊಸ ದಾಖಲೆ ಬರೆದಿದೆ. ಸಿನಿಮಾ ಮೇಕಿಂಗ್, ಗ್ರಾಫಿಕ್ಸ್ ಬಗ್ಗೆ ಏನೇ ಟ್ರೋಲ್ ಮಾಡಿದರೂ ಟೀಸರ್ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಕೋಟಿ ಕೋಟಿ ವೀವ್ಸ್ ಸಾಧಿಸಿ ಧೂಳೆಬ್ಬಿಸಿದೆ. 24 ಗಂಟೆಗಳಲ್ಲಿ ಅತಿಹೆಚ್ಚು ವೀವ್ಸ್ ಸಾಧಿಸಿದ ಟೀಸರ್‌ಗಳ ದಾಖಲೆಯನ್ನು 24 ಗಂಟೆಗೂ ಮೊದಲೇ 'ಆದಿಪುರುಷ್' ಟೀಸರ್ ಬ್ರೇಕ್ ಮಾಡಿದೆ.

  ಕೇವಲ 17 ಗಂಟೆಗಳಲ್ಲಿ 'ಆದಿಪುರುಷ್' ಚಿತ್ರದ ಎಲ್ಲಾ ಭಾಷೆಗಳ ಟೀಸರ್ ಸೇರಿಸಿ 88 ಮಿಲಿಯನ್ ವೀವ್ಸ್ ಸಾಧಿಸಿದೆ. ಆ ಮೂಲಕ KGF- 2 ಟೀಸರ್ ದಾಖಲೆಯನ್ನು 'ಆದಿಪುರುಷ್' ಮೀರಿಸಿದೆ. ಬರೀ ವೀವ್ಸ್ ಮಾತ್ರವಲ್ಲ ಲೈಕ್ಸ್ ವಿಚಾರದಲ್ಲೂ ಭಾರತೀಯ ಚಿತ್ರರಂಗದ ಎಲ್ಲಾ ಟೀಸರ್‌ಗಳ ದಾಖಲೆಯನ್ನು ಪ್ರಭಾಸ್ ಸಿನಿಮಾ ಮೂಲೆಗುಂಪು ಮಾಡಿದ್ದಾರೆ. 24 ಗಂಟೆಗಳಲ್ಲಿ 100 ಮಿಲಿಯನ್ಸ್ ವೀವ್ಸ್ ಸಾಧಿಸಿದರೂ ಅಚ್ಚರಿಪಡಬೇಕಿಲ್ಲ. ಬರೀ ಹಿಂದಿ ಟೀಸರ್ 19 ಗಂಟೆಗಳಲ್ಲಿ 63 ಮಿಲಿಯನ್ ವೀವ್ಸ್ ಜೊತೆಗೆ 1 ಮಿಲಿಯನ್ಸ್ ಲೈಕ್ಸ್ ಗಿಟ್ಟಿಸಿಕೊಂಡಿದೆ.

  '700 ಕೋಟಿಯ ಟೆಂಪಲ್ ರನ್ ಗೇಮ್': ದೊಡ್ಡ ಮಟ್ಟದಲ್ಲಿ ಟ್ರೋಲ್ ಆದ ಆದಿಪುರುಷ್ ಟೀಸರ್!'700 ಕೋಟಿಯ ಟೆಂಪಲ್ ರನ್ ಗೇಮ್': ದೊಡ್ಡ ಮಟ್ಟದಲ್ಲಿ ಟ್ರೋಲ್ ಆದ ಆದಿಪುರುಷ್ ಟೀಸರ್!

  'ಆದಿಪುರುಷ್' ಹಿಂದಿ ಟೀಸರ್ ಕೇವಲ 15 ಗಂಟೆಗಳಲ್ಲಿ 50 ಮಿಲಿಯನ್ ವೀವ್ಸ್ ಸಾಧಿಸಿ ಯಶ್ ನಟನೆಯ KGF-2 ದಾಖಲೆ ಅಳಿಸಿ ಹಾಕಿದೆ. 24 ಗಂಟೆಗಳಲ್ಲಿ ಬಾಲಿವುಡ್ ಸಿನಿಮಾ ಟೀಸರ್‌ಗಳು ಮಾಡಿದ ದಾಖಲೆಯನ್ನು ಇನ್ನು 3 ಗಂಟೆ ಬಾಕಿ ಇರುವಾಗಲೇ 'ಆದಿಪುರುಷ್' ಸಿನಿಮಾ ದಾಟಿ ಮುನ್ನುಗ್ಗುತ್ತಿದೆ. ಈ ಹಿಂದೆ 24 ಗಂಟೆಗಳಲ್ಲಿ ರಣ್‌ಬೀರ್ ಕಪೂರ್ ನಟನೆಯ 'ಸಂಜು' ಸಿನಿಮಾ ಟೀಸರ್ 64.5 ಮಿಲಿಯನ್ಸ್ ಸಾಧಿಸಿತ್ತು. 60 ಮಿಲಿಯನ್ ವೀವ್ಸ್ ಜೊತೆಗೆ ನಂತರದ ಸ್ಥಾನದಲ್ಲಿ 'ಸಾಹೋ' ಸಿನಿಮಾ ಟೀಸರ್ ಇದೆ. 'ವಾರ್' ಟೀಸರ್ 51 ಮಿಲಿಯನ್ ವೀವ್ಸ್ ಪಡೆದುಕೊಂಡಿತ್ತು. 24 ಗಂಟೆಗಳಲ್ಲಿ KGF ಚಾಪ್ಟರ್ 2 ಟೀಸರ್‌ ಗಳಿಸಿದ ಒಟ್ಟು ವೀವ್ಸ್ ದಾಖಲೆ ಮುರಿಯುವತ್ತ 'ಆದಿಪುರುಷ್' ದಾಪುಗಾಲು ಇಟ್ಟಿದ್ದಾನೆ.

  Prabhas Starrer Adipurush Becomes The Most Viewed Bollywood Teaser Of All Time
  English summary
  Prabhas Starrer Adipurush Becomes The Most Viewed Bollywood Teaser Of All Time With 64.6M+ Views In Less than 21 Hours And 1st Million Liked Teaser in less than 24Hours. Know More
  Monday, October 3, 2022, 18:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X