For Quick Alerts
  ALLOW NOTIFICATIONS  
  For Daily Alerts

  ಟ್ರೋಲ್ ಮಾಡಿದವರು ಬೆರಗಾಗುವಂತಹ ಅಪರೂಪದ ದಾಖಲೆ ಬರೆದ 'ಆದಿಪುರುಷ್'

  |

  ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಟೀಸರ್ ಟ್ರೋಲ್‌ ಆಗಿದ್ದು ಚಿತ್ರತಂಡದ ವಿರುದ್ಧ ದೂರು ದಾಖಲಾಗಿದ್ದು ರಿಲೀಸ್ ಡೇಟ್ ಪೋಸ್‌ಪೋಸ್ಟ್ ಮಾಡಿ ರೀ ಶೂಟ್ ಮಾಡುತ್ತಿರುವುದು ಎಲ್ಲಾ ಗೊತ್ತೇಯಿದೆ. ಇದೆಲ್ಲದರ ನಡುವೆಯೂ ಸಿನಿಮಾ ಟೀಸರ್ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಲೇ ಇದೆ.

  ಈ ಪೌರಾಣಿಕ ಕಥಾಹಂದರ ಚಿತ್ರಕ್ಕೆ ಓಂ ರಾವುತ್ ಆಕ್ಷನ್ ಕಟ್ ಹೇಳಿದ್ದಾರೆ. ಟಿ ಸೀರಿಸ್ ಹಾಗೂ ರೆಟ್ರೊಪಿಲೀಸ್ ಸಂಸ್ಥೆಗಳು ಜಂಟಿಯಾಗಿ ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. 'ಆದಿಪುರುಷ್' ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನಾಗಿ ಕಾಣಿಸಿಕೊಂಡರೆ ರಾವಣನಾಗಿ ಸೈಫ್ ಅಲಿಖಾನ್, ಸೀತೆಯಾಗಿ ಕೃತಿ ಸನೂನ್, ಲಕ್ಷ್ಮಣನಾಗಿ ಸನ್ನಿ ಸಿಂಗ್ ಮಿಂಚಿದ್ದಾರೆ. ಕೆಲ ದಿನಗಳ ಹಿಂದೆ ಅಯೋಧ್ಯೆಯfಲಿ ಬಿಡುಗಡೆಯಾಗಿದ್ದ ಸಿನಿಮಾ ಟೀಸರ್ ಟೀಸರ್ ದೊಡ್ಡದಾಗಿ ಸದ್ದು ಮಾಡಿತ್ತು. ಕೆಟ್ ಗುಣಮಟ್ಟದ ಟೀಸರ್ ಎಂದು ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿತ್ತು.

  'ಆದಿಪುರುಷ್' ಬಿಡುಗಡೆ ಮುಂದೂಡಿಕೆಯಿಂದ 'ಸಲಾರ್'ಗೆ ಸಂಕಷ್ಟ? ಚಿತ್ರರಂಗದಲ್ಲೇನಿದು ಚರ್ಚೆ?'ಆದಿಪುರುಷ್' ಬಿಡುಗಡೆ ಮುಂದೂಡಿಕೆಯಿಂದ 'ಸಲಾರ್'ಗೆ ಸಂಕಷ್ಟ? ಚಿತ್ರರಂಗದಲ್ಲೇನಿದು ಚರ್ಚೆ?

  ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 5 ಭಾಷಗಳಲ್ಲಿ 'ಆದಿಪುರುಷ್' ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಹಿಂದಿ ವರ್ಷನ್ ಟೀಸರ್ ಈಗ ಹೊಸ ದಾಖಲೆ ಬರೆದು ಎಲ್ಲರ ಹುಬ್ಬೇರಿಸಿದೆ. ಕೆಲವರು ಚಿತ್ರತಂಡವನ್ನು ಬೈದುಕೊಂಡೇ ಪದೇ ಪದೇ ಟೀಸರ್ ನೋಡಿದಂತೆ ಕಾಣುತ್ತಿದೆ.

  ಹಿಂದಿ ಟೀಸರ್ 10 ಕೋಟಿ ವೀವ್ಸ್

  ಹಿಂದಿ ಟೀಸರ್ 10 ಕೋಟಿ ವೀವ್ಸ್

  ಅಕ್ಟೋಬರ್ 2ರಂದು 5 ಭಾಷೆಗಳಲ್ಲಿ 'ಆದಿಪುರುಷ್' ಸಿನಿಮಾ ಟೀಸರ್ ಬಿಡುಗಡೆಯಾಗಿತ್ತು. ಸದ್ಯ ಹಿಂದಿ ಟೀಸರ್ ಯೂಟ್ಯೂಬ್‌ನಲ್ಲಿ 10 ಕೋಟಿ ವೀವ್ಸ್ ಸಾಧಿಸಿ ದಾಖಲೆ ಬರೆದಿದೆ. ಇದನ್ನು ನೋಡಿ ಮತ್ತೊಮ್ಮೆ ಪ್ರಭಾಸ್ ಫ್ಯಾನ್ಸ್ ಕಾಲರ್ ಎಗರಿಸಿದ್ದಾರೆ. ಅಷ್ಟೆಲ್ಲಾ ಟ್ರೋಲ್ ಮಾಡಿದರೂ ನಮ್ಮ ನೆಚ್ಚಿನ ನಟನ ಸಿನಿಮಾ ಟೀಸರ್ ಹೊಸ ದಾಖಲೆ ಬರೆದಿದೆ ಎಂದು ಸಂಭ್ರಮಿಸುತ್ತಿದ್ದಾರೆ.

  ವೀವ್ಸ್ ಜೊತೆಗೆ ಲೈಕ್ಸ್‌ನಲ್ಲೂ ದಾಖಲೆ

  ವೀವ್ಸ್ ಜೊತೆಗೆ ಲೈಕ್ಸ್‌ನಲ್ಲೂ ದಾಖಲೆ

  'ಆದಿಪುರುಷ್' ಟೀಸರ್ 10 ಕೋಟಿ ವೀವ್ಸ್ ಜೊತೆಗೆ 17 ಲಕ್ಷಕ್ಕೂ ಅಧಿಕ ಲೈಕ್ಸ್ ಗಿಟ್ಟಿಸಿಕೊಂಡಿದೆ. ಈ ಹಿಂದೆ ರಜನಿಕಾಂತ್ ಹಾಗೂ ಅಕ್ಷಯ್ ಕುಮಾರ್ ನಟನೆಯ '2.0' ಟೀಸರ್ 7 ಕೋಟಿ, ರಣ್‌ಬೀರ್ ಕಪೂರ್ ನಟನೆಯ 'ಸಂಜು' 6 ಕೋಟಿ, ಪ್ರಭಾಸ್ ನಟನೆಯ ಮತ್ತೊಂದು ಸಿನಿಮಾ 'ಸಾಹೋ' ಟೀಸರ್ 6 ಕೋಟಿಗೂ ಅಧಿಕ ವೀವ್ಸ್ ಸಾಧಿಸಿದೆ. ಆದರೆ 'ಆದಿಪುರುಷ್' ಟೀಸರ್ ಕೇವಲ 44 ದಿನಗಳಲ್ಲಿ 10 ಕೋಟಿ ವೀವ್ಸ್ ಪಡೆದುಕೊಂಡಿರುವುದು ಎಲ್ಲರ ಹುಬ್ಬೇರಿಸಿದೆ.

  ಭಾರೀ ಟ್ರೋಲ್ ಎದುರಿಸಿದ ಟೀಸರ್

  ಭಾರೀ ಟ್ರೋಲ್ ಎದುರಿಸಿದ ಟೀಸರ್

  'ಆದಿಪುರುಷ್' ಸಿನಿಮಾ ಘೋಷಣೆಯಾದ ದಿನದಿಂದಲೂ ಭಾರೀ ನಿರೀಕ್ಷೆ ಇತ್ತು. 300 ಕೋಟಿಗೂ ಅಧಿಕ ಬಜೆಟ್ ಸಿನಿಮಾ, ಶ್ರೀರಾಮನಾಗಿ ಪ್ರಭಾಸ್ ಎನ್ನುವುದನ್ನು ಕೇಳಿಯೇ ಅಭಿಮಾನಿಗಳು ಥ್ರಿಲ್ಲಾಗಿದ್ದರು. ಹಾಗಾಗಿ ಸಿನಿಮಾ ಅದ್ಭುತವಾಗಿರುತ್ತದೆ ಎಂದುಕೊಂಡಿದ್ದರು. ಆದರೆ ಟೀಸರ್ ಆ ಎಲ್ಲಾ ನಿರೀಕ್ಷೆಯನ್ನು ಹುಸಿ ಮಾಡಿತ್ತು. ಯಾವುದೋ ಕಾರ್ಟೂನ್ ಆನಿಮೇಷನ್ ಸಿನಿಮಾ ಟೀಸರ್ ರೀತಿ ಕಂಡಿತ್ತು. ಗ್ರಾಫಿಕ್ಸ್ ಬಗ್ಗೆ ಸಿನಿರಸಿಕರು ಬೇಸರ ವ್ಯಕ್ತಪಡಿಸಿದ್ದರು. ಇನ್ನು ರಾಮಾಯಣದ ಪಾತ್ರಗಳು, ವೇಷಭೂಷಣ ಎಲ್ಲದರ ಬಗ್ಗೆಯೂ ಟೀಕೆ ವ್ಯಕ್ತವಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿ ಚಿತ್ರತಂಡದ ವಿರುದ್ಧ ದೂರು ಕೂಡ ದಾಖಲಾಗಿತ್ತು. ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು.

  'ಆದಿಪುರುಷ್' ರಿಲೀಸ್ ಡೇಟ್ ಮುಂದಕ್ಕೆ

  'ಆದಿಪುರುಷ್' ರಿಲೀಸ್ ಡೇಟ್ ಮುಂದಕ್ಕೆ

  ಸಂಕ್ರಾಂತಿ ಹಬ್ಬಕ್ಕೆ 'ಆದಿಪುರುಷ್' ಸಿನಿಮಾ ರಿಲೀಸ್ ಪ್ಲ್ಯಾನ್‌ ಮಾಡಿತ್ತು ಚಿತ್ರತಂಡ. ಆದರೆ ಟೀಸರ್ ಬಗ್ಗೆ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎಲ್ಲವನ್ನು ಸರಿಪಡಿಸಿ ಸಿನಿಮಾ ರಿಲೀಸ್ ಮಾಡುವ ಪ್ರಯತ್ನಕ್ಕೆ ಚಿತ್ರತಂಡ ಮುಂದಾಗಿದೆ. ಮುಂದಿನ ಜೂನ್ 16ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಹೊಸ ರಿಲೀಸ್ ಡೇಟ್ ಘೋಷಣೆಯಾಗಿದೆ. ಒಂದಷ್ಟು ದೃಶ್ಯಗಳನ್ನು ರೀ ಶೂಟ್ ಮಾಡುವುದರ ಜೊತೆಗೆ ಸಂಪೂರ್ಣವಾಗಿ ಗ್ರಾಫಿಕ್ಸ್ ಬದಲಿಸುವ ಕೆಲಸ ನಡೀತಿದೆ.

  English summary
  Prabhas Starrer Adipurush teaser becomes the first 100M viewed hindi teaser on YouTube. Directed by Om Raut, Adipurush has Prabhas, Kriti Sanon, Sunny Singh, and Saif Ali Khan in Sriram, Sita, Laxmana, and Lankeshwar roles respectively.
  Monday, November 14, 2022, 22:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X