For Quick Alerts
  ALLOW NOTIFICATIONS  
  For Daily Alerts

  ನಾನು ನನ್ನ ಕನಸಿಗೆ ಅಮೀರ್ ಖಾನ್ ಗ್ರೀನ್ ಸಿಗ್ನಲ್

  |

  ಕನ್ನಡಿಗ ಪ್ರಕಾಶ್ ರೈ (ಪ್ರಕಾಶ್ ರಾಜ್) ಬಾಲಿವುಡ್ ಕನಸು ನನಸು ಮಾಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ಹೌದು, ಈ ಮೊದಲೇ ಯೋಚಿಸಿದಂತೆ ಪ್ರಕಾಶ್ ರೈ ಅಮೀರ್ ಖಾನ್ ನಾಯಕತ್ವದಲ್ಲಿ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ. ಈ ಮೊದಲೇ ಅಚರು ಅದನ್ನು ಪ್ರಕಟಿಸಿದ್ದರು. ಆದರೆ ಅಮೀರ್ ಖಾನ್ ಅವರಿಂದ ಅದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿರಲಿಲ್ಲ, ಈಗ ಸಿಕ್ಕಿದೆ.

  'ನಾನು ನನ್ನ ಕಸನು' ಹೆಸರಿನ ಚಿತ್ರವನ್ನು ಕನ್ನಡದಲ್ಲಿ ಮಾಡಿದ್ದ ಪ್ರಕಾಶ್ ರೈ ಅದೇ ಚಿತ್ರವನ್ನು ಅಮೀರ್ ಖಾನ್ ಅವರನ್ನಿಟ್ಟುಕೊಂಡು ಹಿಂದಿಯಲ್ಲಿ ನಿರ್ದೇಶನ ಮಾಡಲಿದ್ದಾರೆ. ಈ ಸಂಬಂಧ ಅವರಿಬ್ಬರಲ್ಲಿ ಮಾತುಕತೆ ನಡೆದಿದ್ದು ಸದ್ಯದಲ್ಲೇ ಚಿತ್ರ ಸೆಟ್ಟೇರುವ ಸಾಧ್ಯತೆ ದಟ್ಟವಾಗಿದೆ. ಅಂದಹಾಗೆ, ಈ ಚಿತ್ರ ತೆಲುಗಿನ 'ಅಭಿಯುಂ ನಾನುಂ' ಚಿತ್ರದ ರೀಮೇಕ್.

  ಕನ್ನಡದಲ್ಲಿ ಪ್ರಕಾಶ್ ರೈ ನಿರ್ದೇಶಿಸಿದ್ದ ನಾನು ನನ್ನ ಕಸನು ಚಿತ್ರ, ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಸಾಕಷ್ಟು ಉತ್ತಮ ಪ್ರಶಂಸೆ ಪಡೆದಿದ್ದರೂ, ಬಾಕ್ಸ್ ಆಫೀಸ್ ಗಳಿಕೆ ದೃಷ್ಟಿಯಿಂದ ಅಷ್ಟೇನೂ ಯಶಸ್ವಿಯಾಗಿಲ್ಲ. ಆದರೆ ಅದೇ ಚಿತ್ರ ಬಾಲಿವುಡ್ ನಲ್ಲಿ ಮ್ಯಾಜಿಕ್ ಮಾಡಲಿದೆ ಎಂಬುದು ಪ್ರಕಾಶ್ ರೈ ಲೆಕ್ಕಾಚಾರ.

  ಬಾಲಿವುಡ್ ನಲ್ಲಿ ಈ ಚಿತ್ರವನ್ನು ಬೋನಿ ಕಪೂರ್ ನಿರ್ಮಿಸಲಿದ್ದಾರೆ. ಕನ್ನಡದಲ್ಲಿ ಪ್ರಕಾಶ್ ರೈ ಮಾಡಿದ ಪಾತ್ರವನ್ನು ಹಿಂದಿಯಲ್ಲಿ ಅಮೀರ್ ಖಾನ್ ಮಾಡಲಿದ್ದಾರೆ. ಆದರೆ ನಾಯಕಿ ಹಾಗೂ ಉಳಿದ ಪಾತ್ರಗಳ ಆಯ್ಕೆ ಇನ್ನೂ ಆಗಿಲ್ಲ. ಪಕ್ಕಾ ಕಮರ್ಷಿಯಲ್ ಹಿರೋ ಅಮೀರ್ ಖಾನ್ ಇಂತಹ ಸಾಕಷ್ಟು ಪ್ರಯೋಗಗಳನ್ನು ಮಾಡಿ ಯಶಸ್ವಿಯಾದವರು.

  ಪ್ರಕಾಶ್ ರೈ ಕೂಡ ಸಾಕಷ್ಟು ಬೇಡಿಕೆಯಲ್ಲಿರುವ ನಟ. ತಮಿಳು, ತೆಲುಗು, ಹಿಂದಿಯಲ್ಲಿ ಬಹಳಷ್ಟು ಜನಪ್ರಿಯರಾಗಿರುವ ಅವರು ಕನ್ನಡದಲ್ಲಿ ಕೂಡ ಖ್ಯಾತಿ ಹೊಂದಿದವರು. ಇದೀಗ ಸಮಾನ ಮನಸ್ಕರಾಗಿರುವ ಅಮೀರ್ ಮತ್ತು ಪ್ರಕಾಶ್ ಸೇರಿ ಹೊಸ ಜಾದೂ ಪ್ರಾರಂಭಿಸಲಿದ್ದಾರೆ. ಇಬ್ಬರೂ ತಮ್ಮ ತಮ್ಮ ಅನುಭವಗಳನ್ನು ಧಾರೆಯೆರೆದು ಪ್ರೇಕ್ಷಕರ ಮನಸ್ಸನ್ನು ಗೆಲ್ಲಬಲ್ಲ ಚಿತ್ರ ಮಾಡಲಿದ್ದಾರೆ.

  ಸದಾ ಹೊಸತನಕ್ಕೆ ತುಡಿಯುವ ಈ ಜೋಡಿ ಪ್ರಾರಂಭಿಸಲಿರುವ ಹೊಸ ಚಿತ್ರದ ಬಗ್ಗೆ ಎಲ್ಲರಲ್ಲೂ ಬಹಳಷ್ಟುನಿರೀಕ್ಷೆ ಮೂಡಿರುವುದು ಸಹಜ. ಸಿನಿಅಭಿಮಾನಿಗಳ ಬೆಟ್ಟದಷ್ಟು ನಿರೀಕ್ಷೆಗೆ ಈ ಜೋಡಿ ನ್ಯಾಯ ಸಲ್ಲಿಸುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಚಿತ್ರ ಬಿಡುಗಡೆಯ ನಂತರದ ದಿನಗಳು ಉತ್ತರ ಕೊಡುತ್ತವೆ ಅಲ್ಲವೇ? (ಒನ್ ಇಂಡಿಯಾ ಕನ್ನಡ)

  English summary
  Prakash Rai directs a movie in Bollywood. Aamir Khan Acts in this movie. Before also this news was spreading but its not confirmed. Now Aamir Khan gave green signal. This is the same movie which is directed by Prakash Rai in Kannada, Nanu Nanna Kanansu. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X