For Quick Alerts
  ALLOW NOTIFICATIONS  
  For Daily Alerts

  'ರಾವಣ ಲೀಲಾ': ವಿವಾದ ಎಬ್ಬಿಸಲಿದೆಯೇ ಐಂದ್ರಿತಾ ರೇ ಹಿಂದಿ ಸಿನಿಮಾ ಟ್ರೇಲರ್?

  |

  ರಾವಣ-ಸೀತೆ ಒಂದಾಗಲು ಸಾಧ್ಯವೆ? ಪ್ರಸ್ತುತ ಸಾಮಾಜಿಕ-ರಾಜಕೀಯ ಸೂಕ್ಷ್ಮ ಕಾಲದಲ್ಲಿ ಈ ಪ್ರಶ್ನೆ ಅಪಾಯಕಾರಿ. ಆದರೆ ಇಂಥಹಾ ಪ್ರಶ್ನೆಯನ್ನಿಟ್ಟುಕೊಂಡು ಸಿನಿಮಾ ಒಂದು ತೆರೆಗೆ ಬರುತ್ತಿದೆ, ಸಿನಿಮಾದ ಹೆಸರು 'ರಾವಣ್‌ ಲೀಲಾ'.

  ಕನ್ನಡತಿ ಐಂದ್ರಿತಾ ರೇ ನಾಯಕಿಯಾಗಿ ನಟಿಸಿರುವ ಹಿಂದಿ ಸಿನಿಮಾ 'ರಾವಣ್‌ ಲೀಲಾ' ರಾಮಾಯಣವನ್ನು ವಿಮರ್ಶಿಸುವ ಕತೆ ಹೊಂದಿದೆ. ರಾವಣ, ಸೀತೆಯಲ್ಲಿ ಪ್ರೇಮದಲ್ಲಿ ಬಿದ್ದು, ಸೀತೆಯೂ ರಾವಣನಿಗೆ ಮನಸೋತರೆ? ರಾವಣ-ಸೀತೆ ಒಂದಾಗಲು ಸಾಧ್ಯವೆ? ಸಮಾಜ ಒಪ್ಪುತ್ತದೆಯೇ? ಸಿನಿಮಾದ ಕತೆ ಇಂಥಹಾ ಕೆಲವು ಪ್ರಶ್ನೆಗಳನ್ನು ಒಳಗೊಂಡಿದೆ.

  'ರಾವಣ್‌ ಲೀಲಾ' ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದ್ದು, ಸಿನಿಮಾ ಹೊಂದಿರುವ ದಿಟ್ಟ ಕತೆಯಿಂದಾಗಿ ಟ್ರೇಲರ್ ಬಹಳ ಕುತೂಹಲ ಕೆರಳಿಸಿದೆ.

  ನಾಟಕವೇ ನಡೆಯದ ಊರಿಗೆ ನಾಟಕ ಕಂಪೆನಿಯೊಂದು 'ರಾಮಲೀಲ' ನಾಟಕ ಆಡಲು ಬಿಡಾರ ಹೂಡುತ್ತದೆ. ಹಳ್ಳಿಯ ಯುವಕನಿಗೆ ರಾಮನ ಪಾತ್ರ ಮಾಡುವಾಸೆ, ಅವನಿಗೆ ಸಿಗುವುದು ರಾವಣನ ಪಾತ್ರ. ಆದರೆ ಆ ವೇಳೆಗಾಗಲೇ ನಾಟಕದ ಸೀತಾ ಪಾತ್ರಧಾರಿ ಮೇಲೆ ಪ್ರೀತಿಯಾಗಿರುತ್ತದೆ. ಆಕೆಗೂ ಸಹ. ಆದರೆ ರಾವಣ-ಸೀತೆ ಒಂದಾಗಲು ಸಾಧ್ಯವೇ? ಊರೇ ಇವರ ವಿರುದ್ಧ ತಿರುಗಿ ಬೀಳುತ್ತದೆ. ರಾಜಕೀಯ, ಧಾರ್ಮಿಕ ನಂಬಿಕೆ, ಸಂಪ್ರದಾಯ, ಕಟ್ಟುಪಾಡು, ಪ್ರತಿರೋಧ ಎಲ್ಲವನ್ನೂ ಸಿನಿಮಾ ಒಳಗೊಂಡಿದೆ ಎಂಬುದನ್ನು ಟ್ರೇಲರ್‌ನಲ್ಲಿಯೇ ಸೂಚ್ಯವಾಗಿ ತಿಳಿಸಿದ್ದಾರೆ ನಿರ್ದೇಶಕ.

  ಟ್ರೇಲರ್‌ನ ಅಂತ್ಯದಲ್ಲಿ ದೃಶ್ಯವೊಂದಿದೆ, ನಾಟಕದ ಗ್ರೀನ್‌ ರೂಮ್ (ಬಣ್ಣ ಹಚ್ಚಿಕೊಳ್ಳುವ ಜಾಗ)ದಲ್ಲಿ ಕನ್ನಡಿ ಮುಂದೆ ರಾಮ ಹಾಗೂ ರಾವಣ ಪಾತ್ರಧಾರಿಗಳು ಕೂತಿರುತ್ತಾರೆ. ರಾವಣ ಪಾತ್ರಧಾರಿ ರಾಮನ ಪಾತ್ರಧಾರಿಯನ್ನು ಕೇಳುತ್ತಾನೆ, ''ನೀವು ನನ್ನ ತಂಗಿಗೆ ಅಪಮಾನ ಮಾಡಿದಿರಿ, ನಾನು ನಿಮ್ಮ ಮಹಿಳೆಗೆ ಅಪಮಾನ ಮಾಡಿದೆ. ಆದರೆ ನಿಮ್ಮಂತೆ ಮೂಗು ಕತ್ತರಿಸಲಿಲ್ಲ ಆದರೂ ನಮ್ಮ ಲಂಕೆ ಸುಟ್ಟಿತು, ನಮ್ಮ ಸಹೋದರರು, ಮಕ್ಕಳು ಹತರಾದರು, ಎಲ್ಲ ಕಷ್ಟಗಳನ್ನು ನಾನೇ ಅನುಭವಿಸಿದೆ ಹಾಗಿದ್ದರೂ ಜಯಕಾರ ಮಾತ್ರ ನಿಮಗೆ ಏಕೆ?'' ಎನ್ನುತ್ತಾನೆ. ಅದಕ್ಕೆ ಉತ್ತರಿಸುವ ರಾಮನ ಪಾತ್ರಧಾರಿ, ''ಏಕೆಂದರೆ ನಾವು ದೇವರು''.

  ಸಿನಿಮಾದ ಟ್ರೇಲರ್‌ನಿಂದಲೇ ಗೊತ್ತಾಗುತ್ತಿದೆ 'ರಾವಣ್ ಲೀಲಾ' ಸಿನಿಮಾವು ಸ್ಥಾಪಿತ ನಂಬಿಕೆಗಳನ್ನು ಪ್ರಶ್ನೆ ಮಾಡುವ, ವಿಮರ್ಶೆ ಮಾಡುವ, ಟೀಕಿಸುವ ಕತೆಯನ್ನು ಹೊಂದಿದೆ. ಇದಕ್ಕೊಂದು ಉದಾಹರಣೆಯೆಂದರೆ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ನಟಿಸುವವನ ಹೆಸರು ಬುರೇಲಾಲ್.

  ಸಿನಿಮಾದ 'ನಾಯಕ' ರಾವಣನ ಪಾತ್ರದಲ್ಲಿ ಪ್ರತಿಭಾವಂತ ನಟ ಪ್ರತೀಕ್ ಗಾಂಧಿ ನಟಿಸಿದ್ದಾರೆ. 'ಸ್ಕ್ಯಾಮ್ 1992' ವೆಬ್ ಸರಣಿ ಮೂಲಕ ಪ್ರತೀಕ್ ಜನಪ್ರಿಯಗೊಂಡಿದ್ದಾರೆ. ಮೊದಲ ಬಾರಿಗೆ ಅವರು ನಾಯಕನಾಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಸೀತೆ ಪಾತ್ರದಲ್ಲಿ ನಟಿಸಿರುವುದು ಕನ್ನಡದ ನಟಿ ಐಂದ್ರಿತಾ ರೇ. ರಾಮನ ಪಾತ್ರಧಾರಿಯಾಗಿ ಅಂಕುರ್ ವಿಕಲ್, ನಾಟಕ ಕಂಪೆನಿ ಮುಖ್ಯಸ್ಥ ಮತ್ತು ಹನುಮಂತನ ಪಾತ್ರದಲ್ಲಿ ರಾಜೇಶ್ ಶರ್ಮಾ, ಉರ್ಮಿ ಪಾತ್ರದಲ್ಲಿ ಫ್ರೋರಾ ಸೈನಿ ಇನ್ನು ಹಲವು ಪ್ರತಿಭಾವಂತ ನಟರು ಸಿನಿಮಾದಲ್ಲಿದ್ದಾರೆ.

  ಸಿನಿಮಾವನ್ನು ಹಾರ್ದಿಕ್ ಗಜ್ಜರ್ ನಿರ್ದೇಶನ ಮಾಡಿದ್ದಾರೆ, ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಗಜ್ಜರ್ ಪಾತ್ರ್. ಸಿನಿಮಾವು ಅಕ್ಟೋಬರ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ.

  English summary
  Pratik Gandhi, Aindritha Ray's Hindi movie Ravan Leela's trailer released. Movie has unique story. Movie releasing on October 01.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X