»   » ನಟಿ ಪ್ರತ್ಯೂಷಾ ಬಾಯ್ ಫ್ರೆಂಡ್ ಮತ್ತೆ ಅರೆಸ್ಟ್

ನಟಿ ಪ್ರತ್ಯೂಷಾ ಬಾಯ್ ಫ್ರೆಂಡ್ ಮತ್ತೆ ಅರೆಸ್ಟ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

'ಬಾಲಿಕಾ ವಧು' ಹಿಂದಿ ಧಾರಾವಾಹಿಯ ಆನಂದಿ ಪಾತ್ರಧಾರಿ ಪ್ರತ್ಯೂಷಾ ಸಾವಿನ ಪ್ರಕರಣದಲ್ಲಿ ಆರೋಪಿಯಾಗಿ ಒಮ್ಮೆ ಬಂಧಿತನಾಗಿದ್ದ ಆಕೆಯ ಬಾಯ್ ಫ್ರೆಂಡ್ ರಾಹುಲ್ ರಾಜ್ ಸಿಂಗ್ ಮತ್ತೊಮ್ಮೆ ಅರೆಸ್ಟ್ ಆಗಿದ್ದಾನೆ. ಆದರೆ, ಈ ಬಾರಿ ಕಾರಣ ಬೇರೆ.

ದಿವಂಗತ ನಟಿ ಪ್ರತ್ಯೂಷಾ ನೆನಪಿನಲ್ಲೇ ರಾಹುಲ್ ಸಿಂಗ್ ಕಾಲ ದೂಡುತ್ತಾನೆ ಎಂದು ಯಾರು ಕಲ್ಪಿಸಿಕೊಳ್ಳಬೇಕಾಗಿಲ್ಲ. ಕುಡಿತಕ್ಕೆ ಶರಣಾಗಿರುವ ರಾಹುಲ್ ಮತ್ತೊಬ್ಬ ನಟಿ ಜತೆ ವಿಹಾರಾರ್ಥವಾಗಿ ಕಾರು ಚಲಾಯಿಸಿಕೊಂಡು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಭಾನುವಾರ ರಾತ್ರಿ ಸಂತಾಕ್ರೂಜ್ ಪೊಲೀಸರು ರಾಹುಲ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.[ನಟಿ ಪ್ರತ್ಯೂಷಾ ಸಾವಿನ ಪ್ರಕರಣಕ್ಕೆ ಹೊಸ ತಿರುವು!]

ಸಾಂತಾಕ್ರೂಜ್ ನ ಗಜ್ಧರ್ ಬಂದ್ ಪ್ರದೇಶದಲ್ಲಿ ನಾಕಾಬಂದಿ ಹಾಕಿಕೊಂಡು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ಟ್ರಾಫಿಕ್ ಪೊಲೀಸರಿಗೆ ರಾಹುಲ್ ಕಾರು ಸಿಕ್ಕಿದೆ. ರಾಹುಲ್ ನನ್ನು ಪರೀಕ್ಷೆ ಮಾಡಿದಾಗ ಅತನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಇರುವುದು ಪತ್ತೆಯಾಗಿದೆ. ವಿಚಾರಣೆ ನಡೆಸಿದರೆ ರಾಹುಲ್ ಬಳಿ ಡ್ರೈವಿಂಗ್ ಲೈಸನ್ಸ್ ಕೂಡಾ ಇಲ್ಲ ಎಂಬುದು ಪತ್ತೆಯಾಗಿದೆ.

ಇಷ್ಟೇ ಆಗಿದ್ದರೆ ಪರ್ವಾಗಿಲ್ಲ, ಜತೆಯಲ್ಲಿದ್ದ ನಟಿ ಸಲೋನಿ ಶರ್ಮ ಅವರು ಕರ್ತವ್ಯ ನಿರತ ಪೊಲೀಸರಿಗೆ ಅವಾಜ್ ಹಾಕಿದ್ದಾರೆ. ಯಾವುದೇ ಕ್ರಮ ಜರುಗಿಸಬೇಡಿ, ನಿಮ್ಮ ಹಿರಿಯ ಅಧಿಕಾರಿಗಳಿಗೆ ದೂರು ನೀಡುತ್ತೇನೆ ಎಂದು ಇನ್ಸ್ ಪೆಕ್ಟರ್ ಶ್ರೀಕಾಂತ್ ದೇಸಾಯಿಗೆ ಧಮ್ಕಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರ ಮೇಲೂ ಪ್ರಕರಣ ದಾಖಲಾಗಿದೆ ಎಂದು ಡಿಸಿಪಿ ಅಶೋಕ್ ದುಭೆ ಹೇಳಿದ್ದಾರೆ.

ಪ್ರತ್ಯೂಷಾ ಬಾಯ್ ಫ್ರೆಂಡ್ ರಾಹುಲ್ ಬಂಧನ

'ಬಾಲಿಕಾ ವಧು' ಹಿಂದಿ ಧಾರಾವಾಹಿಯ ಆನಂದಿ ಪಾತ್ರಧಾರಿ ಪ್ರತ್ಯೂಷಾ ಸಾವಿನ ಪ್ರಕರಣದಲ್ಲಿ ಆರೋಪಿಯಾಗಿ ಒಮ್ಮೆ ಬಂಧಿತನಾಗಿದ್ದ ಆಕೆಯ ಬಾಯ್ ಫ್ರೆಂಡ್ ರಾಹುಲ್ ರಾಜ್ ಸಿಂಗ್ ಮತ್ತೊಮ್ಮೆ ಅರೆಸ್ಟ್ ಆಗಿದ್ದಾನೆ. ಆದರೆ, ಈ ಬಾರಿ ಕಾರಣ ಬೇರೆ. ಪೊಲೀಸರ ಕೈಗೆ ಸಿಗಾದಂತೆ ತಪ್ಪಿಸಿಕೊಳ್ಳುವುದು ಕೂಡಾ ರಾಹುಲ್ ಗೆ ಮಾಮೂಲಿನ ಸಂಗತಿ.

ಪೊಲೀಸ್ ಆತಿಥ್ಯ ಹೊಸದಲ್ಲ

ರಾಹುಲ್ ಗೆ ಪೊಲೀಸರ ಆತಿಥ್ಯ ಹೊಸದಲ್ಲ. ಮುಂಬೈನ ಕಂಡಿವಿಲಿಯ ಬಂಗೂರ್ ನಗರ್ ನ ಫ್ಲಾಟ್ ನಲ್ಲಿ ನೇಣು ಬಿಗಿದುಕೊಂಡು ಏಪ್ರಿಲ್ 01 ರಂದು ಪ್ರತ್ಯೂಷಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೂಷಾ ಅವರ ಗೆಳೆಯ ರಾಹುಲ್ ಸಿಂಗ್ ರನ್ನು ವಶಕ್ಕೆ ಪಡೆದು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದರು. ಈ ಬಗ್ಗೆ ಬಂಗೂರ್ ನಗರ ಠಾಣೆಯಲ್ಲಿ ಪ್ರಕರಣ ಜಾರಿಯಲ್ಲಿದೆ.

ಇನ್ನೊಂದು ಪ್ರಕರಣದಲ್ಲಿ ರೂಪದರ್ಶಿಗೆ ಕಿರುಕುಳ

ಇನ್ನೊಂದು ಪ್ರಕರಣದಲ್ಲಿ ರೂಪದರ್ಶಿ ಕಮ್ ನಟಿ ಹೀರ್ ಪಟೇಲ್ ಅವರು ರಾಹುಲ್ ವಿರುದ್ಧ ವಂಚನೆ ಆರೋಪ ಹೊರೆಸಿದ್ದರು. 25,000 ರು ನನಗೆ ನೀಡಬೇಕು ಎಂದು ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಮಾಡೆಲ್ ಜತೆ ಅನುಚಿತ ವರ್ತನೆ

ಅಂಧೇರಿಯ ಬೋರಾ ಬೋರಾ ರೆಸ್ಟೋರೆಂಟ್ ನಲ್ಲಿ ಮಾಡೆಲ್ ಜತೆ ಅನುಚಿತವಾಗಿ ವರ್ತಿಸಿದ ಕಾರಣಕ್ಕೆ ರಾಹುಲ್ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿತ್ತು. ಹೀಗೆ ಪೊಲೀಸರ ಆತಿಥ್ಯ ಪಡೆಯುವುದು ರಾಹುಲ್ ಗೆ ಮಾಮೂಲಿನ ಸಂಗತಿಯಾಗಿದೆ.

English summary
Late actress Pratyusha Banerjee's boyfriend, Rahul Raj Singh is again in news for a wrong reason. This time, he was arrested and booked for drunk driving in Santacruz! And guess who was with him during the incident. It's none other than his ex-girlfriend, Saloni Sharma!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada