For Quick Alerts
  ALLOW NOTIFICATIONS  
  For Daily Alerts

  ಐಪಿಎಲ್‌ಗೆ ಕ್ಷಣಗಣನೆ: ಪ್ರೀತಿ ಜಿಂಟಾಗೆ ಹೆಚ್ಚಿದ ಆತಂಕ!

  |

  ಇಂಡಿಯನ್ ಪ್ರೀಮಿಯರ್ ಲೀಗ್ 2020ಕ್ಕೆ ಕ್ಷಣಗಣನೆ ಆರಂಭವಾಗಿದೆ. ಐಪಿಎಲ್‌ನ ಏಂಟು ತಂಡಗಳು ಈಗಾಗಲೇ ದುಬೈಗೆ ಹಾರಿದ್ದು, ಕ್ವಾರಂಟೈನ್ ಅವಧಿ ಮುಗಿಸಿ ಅಭ್ಯಾಸ ಸಹ ಆರಂಭಿಸಿದ್ದಾರೆ. ಶನಿವಾರ ಈ ಸೀಸನ್‌ನ ಚೊಚ್ಚಲ ಒಂದ್ಯ ನಡೆಯಲಿದೆ.

  ಈ ನಡುವೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾಗೆ ಆತಂಕ ಹೆಚ್ಚಾಗಿದೆ. ಒಂದು ವಾರದ ಹಿಂದೆ ದುಬೈಗೆ ಬಂದಿಳಿದಿರುವ ಪ್ರೀತಿ ಜಿಂಟಾ ಏಳು ದಿನಗಳ ಅವಧಿಗೆ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇಂದಿಗೆ ಪ್ರೀತಿಯ ಕ್ವಾರಂಟೈನ್ ಅವಧಿ ಮುಗಿಯಲಿದ್ದು, ಹೋಟೆಲ್‌ನಿಂದ ಹೊರಬರಲಿದ್ದಾರೆ.

  ಅಮೀರ್ ಖಾನ್‌ ಜತೆ ಸೀಕ್ರೇಟ್ ಮದುವೆಯಾಗಿದ್ದರೇ ಗುಳಿಕೆನ್ನೆ ಹುಡುಗಿ?: ಪ್ರೀತಿ ಜಿಂಟಾ ಹೇಳಿದ ಸತ್ಯಅಮೀರ್ ಖಾನ್‌ ಜತೆ ಸೀಕ್ರೇಟ್ ಮದುವೆಯಾಗಿದ್ದರೇ ಗುಳಿಕೆನ್ನೆ ಹುಡುಗಿ?: ಪ್ರೀತಿ ಜಿಂಟಾ ಹೇಳಿದ ಸತ್ಯ

  ಆದರೆ, ಅಂತಿಮ ದಿನವಾದ ಇಂದು ಪ್ರೀತಿ ಜಿಂಟಾಗೆ ಸ್ವಲ್ಪ ಆತಂಕ ಹಾಗೂ ಹೆದರಿಕೆ ತಂದಿದೆಯಂತೆ. ಈ ಕುರಿತು ಸ್ವತಃ ನಟಿಯೇ ತಮ್ಮ ಇನ್ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.

  "ನಾನು ತುಂಬಾ ಉತ್ಸುಕನಾಗಿದ್ದೇನೆ ಏಕೆಂದರೆ ನಾನು ನಾಳೆ ಹೊರಬರಲಿದ್ದೇನೆ. ನಾನು ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದೇನೆ. ನಾನು ನಿಜವಾಗಿಯೂ ಯಾರನ್ನೂ ಭೇಟಿ ಮಾಡದಿದ್ದರೂ, ಸ್ವಲ್ಪ ಹೆದರಿಕೆ ಇದೆ ... ನನಗೆ ಗೊತ್ತಿಲ್ಲ'' ಎಂದು ಬರೆದುಕೊಂಡಿದ್ದಾರೆ.

  "ಕ್ಯಾರೆಂಟೈನ್‌ನ 7ನೇ ದಿನ ನಾಳೆ ಹೊರಬರಲು ಸಮಯವಾಗಿದೆ. (ನನ್ನ ನಾಲ್ಕನೇ ಕೋವಿಡ್ ಪರೀಕ್ಷೆ ನೆಗಿಟಿವ್ ಬಂದಿದೆ) ಆದ್ದರಿಂದ ನಾನು ತಂಡದೊಂದಿಗೆ ಜಾಹೀರಾತು ಶೂಟ್ ಮಾಡಬಹುದು'' ಎಂದು ನಾನು ಭಾವಿಸುತ್ತೇನೆ.

  ನನ್ನ ನಂಬಿ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ | Shruthi Krishna | Filmibeat Kannada

  ಇಂಡಿಯನ್ ಪ್ರೀಮಿಯರ್ ಲೀಗ್ ಸೆಪ್ಟೆಂಬರ್ 19 ರಂದು ಆರಂಭವಾಗಲಿದ್ದು, ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಮೊದಲ ಪಂದ್ಯ ನಡೆಯಲಿದೆ. ಪ್ರೀತಿ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ಸೆಪ್ಟೆಂಬರ್ 20 ರಂದು ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ.

  English summary
  Kings xi punjab co owner Preity Zinta completes Her 6th Day Of Quarantine Period.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X