For Quick Alerts
  ALLOW NOTIFICATIONS  
  For Daily Alerts

  'ನಿನಗೇನು ಹುಚ್ಚು ಹಿಡಿದಿದೆಯೇ?': ಮೊದಲ ಚಿತ್ರದ ನೆನಪು ಹಂಚಿಕೊಂಡ ಪ್ರೀತಿ ಜಿಂಟಾ

  |

  ಗುಳಿಕೆನ್ನೆ ಬೆಡಗಿ ಪ್ರೀತಿ ಜಿಂಟಾ ಸದ್ಯ ಅಮೆರಿಕದ ಲಾಸ್ ಏಂಜಲಿಸ್‌ನಲ್ಲಿ ವಾಸಿಸುತ್ತಿದ್ದಾರೆ. ದೂರದ ದೇಶದಲ್ಲಿ ಇದ್ದಾಗಲೇ ಅವರು ತಮ್ಮ ಆರಂಭದ ಚಿತ್ರಗಳಲ್ಲಿ ಒಂದಾದ 'ಕ್ಯಾ ಕೆಹ್ನಾ' 20 ವರ್ಷ ಪೂರೈಸಿದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಂದು 17 ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ | DBoss | Darshan Anniversary

  ಕುಂದನ್ ಶಾ ನಿರ್ದೇಶನದ ಈ ಚಿತ್ರದಲ್ಲಿ ಪ್ರೀತಿ ಜಿಂಟಾ ಕಾಲೇಜು ವಿದ್ಯಾರ್ಥಿನಿ 'ಪ್ರಿಯಾ' ಪಾತ್ರದಲ್ಲಿ ನಟಿಸಿದ್ದರು. ಸಹಪಾಠಿ ರಾಹುಲ್ ಜತೆ (ಸೈಫ್ ಅಲಿಖಾನ್) ಡೇಟಿಂಗ್ ನಡೆಸುವ ಪ್ರಿಯಾ ಗರ್ಭಿಣಿಯಾಗುತ್ತಾಳೆ. ಅಷ್ಟರಲ್ಲಾಗಲೇ ರಾಹುಲ್ ಮತ್ತು ಪ್ರಿಯಾ ದೂರವಾಗಿರುತ್ತಾರೆ. ಕೊನೆಗೆ ತಾನೇ ಸಿಂಗಲ್ ಮದರ್ ಆಗಿ ಮಗುವನ್ನು ಬೆಳೆಸಲು ತೀರ್ಮಾನಿಸುತ್ತಾಳೆ. ಈ ಪಾತ್ರದ ಕುರಿತು ಪ್ರೀತಿ ಜಿಂಟಾ ನೆನಪು ಹಂಚಿಕೊಂಡಿದ್ದಾರೆ. ಮುಂದೆ ಓದಿ...

  ಅಮೀರ್ ಖಾನ್‌ ಜತೆ ಸೀಕ್ರೇಟ್ ಮದುವೆಯಾಗಿದ್ದರೇ ಗುಳಿಕೆನ್ನೆ ಹುಡುಗಿ?: ಪ್ರೀತಿ ಜಿಂಟಾ ಹೇಳಿದ ಸತ್ಯಅಮೀರ್ ಖಾನ್‌ ಜತೆ ಸೀಕ್ರೇಟ್ ಮದುವೆಯಾಗಿದ್ದರೇ ಗುಳಿಕೆನ್ನೆ ಹುಡುಗಿ?: ಪ್ರೀತಿ ಜಿಂಟಾ ಹೇಳಿದ ಸತ್ಯ

  ಎಚ್ಚರಿಕೆ ನೀಡಿದ್ದರು

  ಎಚ್ಚರಿಕೆ ನೀಡಿದ್ದರು

  ವೃತ್ತಿ ಬದುಕಿನ ಆರಂಭದಲ್ಲಿಯೇ ಟೀನೇಜ್ ಗರ್ಭಿಣಿಯ ಪಾತ್ರವನ್ನು ನಿಭಾಯಿಸುವುದು ಒಳ್ಳೆಯದಲ್ಲ ಎಂದು ಅನೇಕರು ಅವರಿಗೆ ಎಚ್ಚರಿಕೆ ನೀಡಿದ್ದರು. ಆದರೆ ಅದನ್ನು ಗಂಭೀರವಾಗಿ ಪರಿಗಣಿಸದೆಯೇ ಪಾತ್ರ ಒಪ್ಪಿಕೊಂಡು ಮಾಡಿದ್ದಾಗಿ ಪ್ರೀತಿ ತಿಳಿಸಿದ್ದಾರೆ.

  ಹುಚ್ಚು ಹಿಡಿದಿದೆಯೇ?

  ಹುಚ್ಚು ಹಿಡಿದಿದೆಯೇ?

  'ನನ್ನ ಆರಂಭದಲ್ಲಿ ಚಿತ್ರದಲ್ಲಿಯೇ ಮದುವೆಯಾಗದೆಯೇ ಗರ್ಭಿಣಿಯಾಗುವ ಟೀನೇಜ್ ಹುಡುಗಿಯ ಪಾತ್ರವನ್ನು ಒಪ್ಪಿಕೊಂಡಾಗ ಎಲ್ಲರೂ ಶಾಕ್‌ಗೆ ಒಳಗಾಗಿದ್ದರು. ನಿನ್ನ ಕೆರಿಯರ್ ಆರಂಭವಾಗುವ ಮೊದಲೇ ಅಂತ್ಯಗೊಳ್ಳುತ್ತದೆ. ನಿನಗೇನು ಹುಚ್ಚು ಹಿಡಿದಿದೆಯೇ? ಎಂದು ಕೇಳಿದ್ದರು' ಎಂಬುದನ್ನು ಪ್ರೀತಿ ನೆನಪಿಸಿಕೊಂಡಿದ್ದಾರೆ.

  ಸಿನಿಮಾ ಮಾಡಿದ್ದಕ್ಕೆ ಖುಷಿಯಾಗುತ್ತದೆ

  ಸಿನಿಮಾ ಮಾಡಿದ್ದಕ್ಕೆ ಖುಷಿಯಾಗುತ್ತದೆ

  'ಇಂದು ನನ್ನ ಸಿನಿ ಜೀವನದತ್ತ ಮರಳಿ ನೋಡಿದಾಗ ಖುಷಿಯಾಗುತ್ತದೆ. ಈ ಅದ್ಭುತ ಚಿತ್ರಕ್ಕಾಗಿ ನಿರ್ಮಾಪಕ ರಮೇಶ್ ತೌರಾನಿ ಮತ್ತು ಹನಿ ಆಂಟಿ ಅವರಿಗೆ ಕೃತಜ್ಞನಾಗಿರುತ್ತೇನೆ. ಸೈಫ್ ಅಲಿಖಾನ್ ಮತ್ತು ಚಂದ್ರಚೂರ್ ಅವರಿಗೆ ಸಂಯಮದಿಂದ ಇದ್ದು ಬೆಂಬಲ ನೀಡಿದ್ದಕ್ಕೂ ಧನ್ಯವಾದಗಳು' ಎಂದು ತಿಳಿಸಿದ್ದಾರೆ.

  ಬಾಕ್ಸಾಫೀಸ್‌ನಲ್ಲಿ ಹಿಟ್

  ಫರ್ಹಾನ್ ಅಖ್ತರ್ ತಾಯಿ ಹನಿ ಇರಾನಿ 'ಕ್ಯಾ ಕೆಹ್ನಾ' ಚಿತ್ರದ ಕಥೆಯನ್ನು ಬರೆದಿದ್ದರು. ಅನುಪಮ್ ಖೇರ್ ಮತ್ತು ಫರೀದಾ ಜಲಾಲ್, ಪ್ರೀತಿ ಜಿಂಟಾರ ತಂದೆ ತಾಯಿಯಾಗಿ ನಟಿಸಿದ್ದರು. ಚಂದ್ರಚೂರ್ ಸಿಂಗ್, ಪ್ರೀತಿ ಜಿಂಟಾರ ಆತ್ಮೀಯ ಸ್ನೇಹಿತನಾಗಿ, ಆಕೆಯನ್ನು ಗುಟ್ಟಾಗಿ ಪ್ರೇಮಿಸುವ ಪ್ರೇಮಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ದೊಡ್ಡ ಯಶಸ್ಸು ಗಳಿಸಿತ್ತು.

  English summary
  Bollywood actress Preity Zinta has shared her experience of the movie Kya Kehna when everyone shocked about her teenage pregnant role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X